• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ: ಜೂನ್ 11ರಂದು ದಾಖಲೆಯ ಕೇಸ್ ವರದಿ

|

ಮುಂಬೈ, ಜೂನ್ 12: ಒಂದು ಸಮಯದಲ್ಲಿ ಇಡೀ ದೇಶದಲ್ಲಿ ಒಂದು ದಿನಕ್ಕೆ ಮೂರರಿಂದ ನಾಲ್ಕು ಸಾವು ಕೊರೊನಾ ಕೇಸ್‌ಗಳು ವರದಿಯಾಗುತ್ತಿತ್ತು. ಇದೀಗ, ಮಹಾರಾಷ್ಟ್ರ ಒಂದೇ ರಾಜ್ಯದಲ್ಲಿ ಮೂರರಿಂದ ನಾಲ್ಕು ಸಾವಿರ ಕೊರೊನಾ ಪ್ರಕರಣ ದಾಖಲಾಗುತ್ತಿದೆ.

ನಿನ್ನೆ ಒಂದೇ ಮಹಾರಾಷ್ಟ್ರದಲ್ಲಿ 3607 ಜನರಿಗೆ ಕೊವಿಡ್ ಸೋಂಕು ತಗುಲಿರುವುದು ಖಚಿತವಾಗಿದೆ. ಇಲ್ಲಿಯವರೆಗೂ ಮಹಾರಾಷ್ಟ್ರದಲ್ಲಿ ದಿನವೊಂದರಲ್ಲಿ ಪತ್ತೆಯಾಗಿರುವ ಅತಿ ಹೆಚ್ಚು ಕೇಸ್ ಇದಾಗಿದೆ.

ಆಸ್ಪತ್ರೆಯಿಂದ ಕೊರೊನಾ ರೋಗಿ ಕಾಣೆ, 6 ದಿನ ಬಳಿಕ ಟಾಯ್ಲೆಟ್‌ನಲ್ಲಿ ಶವ

ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 97,648 ದಾಟಿದೆ. ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಹೊಂದಿರುವ ರಾಜ್ಯ ಮಹಾರಾಷ್ಟ್ರ. ಬಹುಶಃ ಜೂನ್ 12ರ ವರದಿ ಬಳಿಕ ರಾಜ್ಯದಲ್ಲಿ ಒಟ್ಟು ಸೋಂಕಿನ ಸಂಖ್ಯೆ ಒಂದು ಲಕ್ಷ ಗಡಿ ದಾಟಬಹುದು.

ನಿನ್ನೆ 152 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದುವರೆಗೂ ಠಾಕ್ರೆ ರಾಜ್ಯದಲ್ಲಿ 3590 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಮುಂಬೈ ನಗರದಲ್ಲಿ ನಿನ್ನೆ ಒಂದೇ ದಿನ 1418 ಕೊರೊನಾ ಕೇಸ್ ದಾಖಲಾಗಿದೆ. ವಾಣಿಜ್ಯ ನಗರದಲ್ಲಿ ಒಟ್ಟು ಸೋಂಕಿನ ಸಂಖ್ಯೆ 54,085ಕ್ಕೆ ಏರಿದೆ. ಪುಣೆಯಲ್ಲಿ ನಿನ್ನೆ 476 ಜನಕ್ಕೆ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 10,882ಕ್ಕೆ ಜಿಗಿದಿದೆ. ಥಾಣೆಯಲ್ಲಿ ನಿನ್ನೆ 959 ಜನರಿಗೆ ಸೋಂಕು ಖಚಿತವಾಗಿದೆ. ಒಟ್ಟು ಸೋಂಕಿನ ಸಂಖ್ಯೆ 15,679ಕ್ಕೆ ಏರಿದೆ.

ಇನ್ನು ರಾಜ್ಯದಲ್ಲಿ ಒಟ್ಟು 46078 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 47,968 ಮಂದಿ ಕ್ವಾರಂಟೈನ್ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

English summary
Maharashtra: Highest single-day rise with 3607 new COVID19 cases & 152 deaths reported in the state today, taking the total number of positive cases in the state to 97,648.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X