ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿ ವಿವಾದ: 50 ವರ್ಷದ ಹಳೆಯ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ಮಹಾರಾಷ್ಟ್ರ

|
Google Oneindia Kannada News

ಮುಂಬೈ, ಜನವರಿ 29: ಕರ್ನಾಟಕದ ಜತೆಗಿನ ಗಡಿ ವಿವಾದವನ್ನು ಮತ್ತಷ್ಟು ಕೆದಕಲು ಮಹಾರಾಷ್ಟ್ರ ಮುಂದಾಗಿದೆ. ಬೆಳಗಾವಿ, ಕಾರವಾರ, ಬೀದರ್, ಬಾಲ್ಕಿ, ಹುಮನಾಬಾದ್ ಮುಂತಾದ ಭಾಗಗಳು ಮಹಾರಾಷ್ಟ್ರಕ್ಕೆ ಸೇರಿದ್ದು ಎಂಬ ವಾದಕ್ಕೆ ಪುಷ್ಟಿ ನೀಡಲು 50 ವರ್ಷದ ಹಳೆಯ ಸಾಕ್ಷ್ಯಚಿತ್ರವನ್ನು ಉದ್ಧವ್ ಠಾಕ್ರೆ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿಸಿದ್ದಾರೆ. ಈ ಸಾಕ್ಷ್ಯಚಿತ್ರವನ್ನು ಮಹಾರಾಷ್ಟ್ರ ಸರ್ಕಾರವೇ ತಯಾರಿಸಿತ್ತು.

ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಮರಾಠಿ ಸಂಸ್ಕೃತಿ ಆಚರಣೆಯಲ್ಲಿದ್ದ ವಿವರಗಳನ್ನು ಒಳಗೊಂಡಿದೆ. 35 ನಿಮಿಷಗಳ ಈ ಕಪ್ಪು-ಬಿಳುಪು ಸಾಕ್ಷ್ಯಚಿತ್ರವನ್ನು ಕುಮಾರ್ ಸೇನ್ ನಿರ್ದೇಶಿಸಿದ್ದಾರೆ. 'ಎ ಕೇಸ್ ಫಾರ್ ಜಸ್ಟೀಸ್' ಎಂಬ ಕಪ್ಪುಬಿಳುಪಿನ ಸಾಕ್ಷ್ಯಚಿತ್ರದಲ್ಲಿ, 60 ವರ್ಷಗಳ ಹಿಂದೆ ಕಾರವಾರದ ಶಾಲೆಯಲ್ಲಿ ಶಿಕ್ಷಕರೊಬ್ಬರು ಇಂಗ್ಲಿಷ್, ಮರಾಠಿ ಮತ್ತು ಕೊಂಕಣಿ ಬೋಧಿಸುತ್ತಿರುವ ದೃಶ್ಯವಿದೆ.

ಮುಂಬೈ ಅನ್ನು ಕರ್ನಾಟಕಕ್ಕೆ ಸೇರಿಸಿ: ಉದ್ಧವ್ ಠಾಕ್ರೆಗೆ ಲಕ್ಷ್ಮಣ ಸವದಿ ತಿರುಗೇಟುಮುಂಬೈ ಅನ್ನು ಕರ್ನಾಟಕಕ್ಕೆ ಸೇರಿಸಿ: ಉದ್ಧವ್ ಠಾಕ್ರೆಗೆ ಲಕ್ಷ್ಮಣ ಸವದಿ ತಿರುಗೇಟು

ಎನ್‌ಸಿಸಿ ಬೆಟಾಲಿಯನ್‌ನಲ್ಲಿ ಮರಾಠಿ ಫಲಕ ಬಳಸಿರುವುದು, 'ವಿಚಾರಿ' ಎಂಬ ಮರಾಠಿ ದಿನಪತ್ರಿಕೆಯ ವಿವರಗಳು, 1912ರ ಕರಾವಾರ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ವಾರ್ಷಿಕ ವರದಿ ವಿವರಗಳು, 1890ರಲ್ಲಿ ಬೆಳಗಾವಿಯಲ್ಲಿ ನಿರ್ಮಿಸಿದ ಸೇತುವೆ ಮೇಲೆ ಮರಾಠಿ ಭಾಷೆಯಲ್ಲಿ ಹೆಸರು ಇರುವ ದೃಶ್ಯಗಳು ಇದರಲ್ಲಿವೆ. ಹಾಗೆಯೇ ಗಡಿ ಭಾಗಗಳಲ್ಲಿ ಜನರು ಮರಾಠಿಯಲ್ಲಿ ಮಾತನಾಡುವುದು, ಮರಾಠಿ ಶಾಲೆಗಳು ಇರುವುದು ಮುಂತಾದವು ಸಾಕ್ಷ್ಯಚಿತ್ರದಲ್ಲಿದೆ.

 Maharashtra Released 50 Year Old Documentary On Border Dispute With Karnataka

ಮುಂಬೈ ಕುರಿತ ಸವದಿ ಹೇಳಿಕೆಗೆ ತಿರುಗಿಬಿದ್ದ ಶಿವಸೇನೆ ಮುಖಂಡ ಮುಂಬೈ ಕುರಿತ ಸವದಿ ಹೇಳಿಕೆಗೆ ತಿರುಗಿಬಿದ್ದ ಶಿವಸೇನೆ ಮುಖಂಡ

'ಈ ಎಲ್ಲ ಸ್ಥಳಗಳೂ ಮಹಾರಾಷ್ಟ್ರಕ್ಕೆ ಸೇರಿದ್ದು. ಪ್ರಸ್ತುತ ಕರ್ನಾಟಕದ ಭಾಗವಾಗಿರುವ ಈ ಪ್ರದೇಶಗಳು ಮತ್ತೆ ಮಹಾರಾಷ್ಟ್ರಕ್ಕೆ ಸೇರಬೇಕು. ಈ ಕುರಿತು ಎಲ್ಲರಲ್ಲಿಯೂ ಅರಿವು ಮೂಡಬೇಕು ಎಂಬ ಉದ್ದೇಶದಿಂದ 50 ವರ್ಷಗಳ ವಿಡಿಯೋವನ್ನು ಯೂಟ್ಯೂಬ್‌ಗೆ ಸೇರಿಸುವಂತೆ ಅಧಿಕಾರಿಗಳಿಗೆ ಉದ್ಧವ್ ಠಾಕ್ರೆ ಸೂಚಿಸಿದ್ದಾರೆ' ಎಂದು ಉದ್ಧವ್ ಠಾಕ್ರೆ ಕಚೇರಿ ಪ್ರಕಟಣೆ ತಿಳಿಸಿದೆ.

English summary
Maharashtra government released 50 year old documentary on border dispute with Karnataka in Youtube.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X