ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಸ್ಥಾನಕ್ಕೆ ಪಟ್ಟು, ಬಿಜೆಪಿ-ಶಿವಸೇನಾ ಮಾತುಕತೆ ಆರಂಭಕ್ಕೆ ಮುನ್ನವೇ ಅಂತ್ಯ

|
Google Oneindia Kannada News

ಮುಂಬೈ, ಅಕ್ಟೋಬರ್ 29: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತು ಮುಂದುವರೆದಿದ್ದು, ಸಿಎಂ ಪಟ್ಟಕ್ಕಾಗಿ ಬಿಜೆಪಿ ಹಾಗೂ ಶಿವಸೇನಾ ನಡುವಿನ ಪಟ್ಟು ಬಿಗಿಗೊಂಡಿದ್ದು ಎರಡು ಪಕ್ಷದ ಕೊರಳು ಕಟ್ಟುವಂತೆ ಮಾಡಿದೆ.

ಅಧಿಕಾರ ಸ್ಥಾಪನೆ ವಿಷಯದಲ್ಲಿ ಚರ್ಚೆ, ವಿರಸ ಮಾತುಕತೆಗೆ ಮುಂದಾಗಿದ್ದ ಶಿವಸೇನಾ ಈಗ ಮಾತುಕತೆ ಆರಂಭಕ್ಕೂ ಮುನ್ನವೇ ಹಿಂದೇಟು ಹಾಕಿದೆ. ಹೀಗಾಗಿ ಅಕ್ಟೋಬರ್ 30ರಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೊತೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮಾತುಕತೆ ನಡೆಯುವುದು ಬಹುತೇಕ ಅನುಮಾನವೆನಿಸಿದೆ.

ಟಾರೋ ಭವಿಷ್ಯ: ಬಿಜೆಪಿಯಿಂದಲೇ 'ಮಹಾ' ಸಿಎಂ ಆಗಿ ಅಚ್ಚರಿಯ ಹೆಸರುಟಾರೋ ಭವಿಷ್ಯ: ಬಿಜೆಪಿಯಿಂದಲೇ 'ಮಹಾ' ಸಿಎಂ ಆಗಿ ಅಚ್ಚರಿಯ ಹೆಸರು

ಚುನಾವಣಾ ಪೂರ್ವ ಮೈತ್ರಿಯ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಆಶ್ವಾಸನೆ ನೀಡಿದಂತೆ 50:50 ಅನುಪಾತದಲ್ಲಿ ಅಧಿಕಾರ ಹಂಚಿಕೆಯಾಗಬೇಕು. ಅಧಿಕಾರ ಅವಧಿ ಸಮನಾಗಿ ಹಂಚಿಕೆಯಾಗಬೇಕು, ಉನ್ನತ ಸ್ಥಾನಗಳು ಸಿಗಬೇಕು, 2.5 ವರ್ಷ ಬಿಜೆಪಿಯಿಂದ ಸಿಎಂ ಹಾಗೂ 2.5 ವರ್ಷ ಶಿವಸೇನಾದಿಂದ ಸಿಎಂ ಎಂದು ಶಿವಸೇನಾ ತನ್ನ ಬೇಡಿಕೆ ಬಗ್ಗೆ ಲಿಖಿತ ಒಪ್ಪಂದವಾಗಬೇಕು ಎಂದು ಶಿವಸೇನಾ ಪಟ್ಟು ಹಿಡಿದಿದೆ. ಮುಖ್ಯಮಂತ್ರಿ ಸ್ಥಾನ ಹಂಚಿಕೆ ಬಗ್ಗೆ ಯಾವುದೇ ಮಾತುಕತೆ ಅನಗತ್ಯ, ಈ ಬಗ್ಗೆ ಯಾವುದೆ ಒಪ್ಪಂದವಾಗಿಲ್ಲ ಎಂದು ಬಿಜೆಪಿಯ ಸಿಎಂ ಅಭ್ಯರ್ಥಿ ದೇವೇಂದ್ರ ಫಡ್ನವೀಸ್ ಇಂದು ಸ್ಪಷ್ಟಪಡಿಸಿದ್ದಾರೆ.

Maharashtra power sharing: BJP- Shiv Sena talks put on hold

"ಬಯಸುವುದು, ಪಡೆಯುವುದು ಎರಡು ಪ್ರತ್ಯೇಕ ಸಂಗತಿಗಳು, ಶಿವಸೇನಾಕ್ಕೆ ಸಿಎಂ ಸ್ಥಾನ 5 ವರ್ಷಕ್ಕೆ ಬೇಕಾಗಬಹುದು, 50:50 ಫಾರ್ಮೂಲಾದಲ್ಲಿ ಸಿಎಂ ಸ್ಥಾನ ಹಂಚಿಕೆ ಬಗ್ಗೆ ಯಾವುದೆ ಮಾತುಕತೆಯಾಗಿಲ್ಲ. ಬೇಡಿಕೆಗಳೊಂದಿಗೆ ಮಾತುಕತೆಗೆ ಕುಳಿತರೆ ಆದ್ಯತೆ ಮೇರೆಗೆ ಚರ್ಚೆ ನಡೆಸಲಾಗುವುದು" ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

ಅಚಲ್ ಪುರ್ ಶಾಸಕ, ಪ್ರಹಾರ್ ಜನಶಕ್ತಿ ಪಕ್ಷದ ಮುಖ್ಯಸ್ಥ ಬಚ್ಚು ಕಾಡು ಹಾಗೂ ಮೇಲ್ ಘಾಟ್ ನ ರಾಜ್ ಕುಮಾರ್ ಪಟೇಲ್ ಅವರು ಉದ್ಧವ್ ಠಾಕ್ರೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಕ್ಷೇತರ ಶಾಸಕಿ ಗೀತಾ ಜೈನ್, ರಾಜೇಂದ್ರ ರಾವುತ್ ಅವರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಮಿತ್ರಪಕ್ಷವಾಗಿರುವ ಶಿವಸೇನಾ ಸಮಾನ ಅಧಿಕಾರ ಹಂಚಿಕೆಗೆ ಪಟ್ಟು ಹಿಡಿದಿದೆ.

ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಶಿವಸೇನೆಯವರು: ಸಾಮ್ನಾ ಘೋಷಣೆಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಶಿವಸೇನೆಯವರು: ಸಾಮ್ನಾ ಘೋಷಣೆ

2014ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ 2019ರಲ್ಲಿ ಬಿಜೆಪಿ ಕಡಿಮೆ ಸ್ಥಾನಗಳನ್ನು ಪಡೆದುಕೊಂಡಿದೆ. 1995 ರಿಂದ 1999ರ ಸೇನಾ- ಬಿಜೆಪಿ ಸರ್ಕಾರದ ಮೇಲೆ ಸೇನಾದ ಬಾಳಾ ಠಾಕ್ರೆ ಹೇಗೆ ಹಿಡಿತ ಹೊಂದಿದ್ದರೋ ಅದೇ ರೀತಿ ಈ ಬಾರಿಯೂ ಹಿಡಿತ ಸಿಕ್ಕಿದೆ ಎಂದು ಘೋಷಿಸಿಕೊಂಡಿದೆ. 2014ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ 122 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 105 ಸ್ಥಾನ ಗಳಿಸಿದೆ. 288 ವಿಧಾನಸಭಾ ಸ್ಥಾನಗಳುಳ್ಳ ಮಹಾರಾಷ್ಟ್ರದಲ್ಲಿ ಅಧಿಕಾರ ಸ್ಥಾಪಿಸಲು 146 ಸ್ಥಾನಗಳು ಅವಶ್ಯ. ಸೇನಾ ಕೂಡಾ 2014ರಲ್ಲಿ 63 ಸ್ಥಾನ ಗೆದ್ದಿತ್ತು. ಈ ಬಾರಿ 56 ಸ್ಥಾನ ಗೆದ್ದಿದೆ.

English summary
Maharashtra power sharing: BJP- Shiv Sena talks put on hold as both parties failed to have discussion over sharing power in Maharashtra on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X