ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಂದ್ರ ಫಡ್ನವೀಸ್ ಅಕ್ಷರಶಃ 'ಏಕಾಂಗಿ' ಆಗುತ್ತಿರುವ ಹಿಂದೆ ಉದ್ದೇಶಪೂರ್ವಕ ನಡೆ?

|
Google Oneindia Kannada News

ಅಕ್ಟೋಬರ್ 24ರಂದು ಮಹಾರಾಷ್ಟ್ರದ ಚುನಾವಣಾ ಫಲಿತಾಂಶ ಹೊರಬಿದ್ದಾಗ, ಅದು ಮತದಾರ, ಬಿಜೆಪಿ ಮತ್ತು ಶಿವಸೇನೆಯ ಚುನಾವಣಾಪೂರ್ವ ಮೈತ್ರಿಕೂಟಕ್ಕೆ ನೀಡಿದ ಜನಾದೇಶ ಅದಾಗಿತ್ತು.

ಆದರೆ, ಒಟ್ಟಾರೆಯಾಗಿ ಮ್ಯಾನ್ಡೇಟ್ ಅನ್ನೇ ಅಗೌರವಿಸುವಂತೆ, ಬಿಜೆಪಿ ಮತ್ತು ಶಿವಸೇನೆಯ ನಡುವೆ ಹೊಂದಾಣಿಕೆ ಮೂಡದೇ, ಸರಕಾರ ರಚನೆ ಇನ್ನೂ ಅತಂತ್ರವಾಗಿ ಕೂತಿದೆ.

ನಿರ್ಣಾಯಕ ಘಟ್ಟದಲ್ಲಿ ಮಹಾರಾಷ್ಟ್ರ ಸರಕಾರ ರಚನೆ: ಶರದ್ ಪವಾರ್ ಆಡಿದ್ದೇ 'ಪವರ್ ಪ್ಲೇ'ನಿರ್ಣಾಯಕ ಘಟ್ಟದಲ್ಲಿ ಮಹಾರಾಷ್ಟ್ರ ಸರಕಾರ ರಚನೆ: ಶರದ್ ಪವಾರ್ ಆಡಿದ್ದೇ 'ಪವರ್ ಪ್ಲೇ'

ಬಿಜೆಪಿಯವನ್ನು ಬೆದರಿಸುವ ತಂತ್ರವೋ ಏನೋ, ಶಿವಸೇನೆಯ ಮುಖಂಡರು, ಎನ್ಸಿಪಿ ನಾಯಕರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಶಿವಸೇನೆ+ಕಾಂಗ್ರೆಸ್+ಎನ್ಸಿಪಿ ನಡುವೆ ಹೊಂದಾಣಿಕೆಯ ಮಾತೂ ಕೇಳಿಬರುತ್ತಿದೆ.

ಶಿವಸೇನೆ ಜೊತೆ ಕಾಂಗ್ರೆಸ್ ಮೈತ್ರಿ: ಸೋನಿಯಾ ಗಾಂಧಿ ಹೇಳಿದ್ದೇನು?ಶಿವಸೇನೆ ಜೊತೆ ಕಾಂಗ್ರೆಸ್ ಮೈತ್ರಿ: ಸೋನಿಯಾ ಗಾಂಧಿ ಹೇಳಿದ್ದೇನು?

ಮುಂದಿನ ಐದು ವರ್ಷಕ್ಕೂ ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದ ದೇವೇಂದ್ರ ಫಡ್ನವೀಸ್ ಈಗ ಅಕ್ಷರಸಃ ಏಕಾಂಗಿಯಾಗಿದ್ದಾರೆ ಎನ್ನುವುದು ಮಹಾರಾಷ್ಟ್ರ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿರುವ ಮಾತು.

ಶಿವಸೇನೆ 50:50 ಸೂತ್ರ

ಶಿವಸೇನೆ 50:50 ಸೂತ್ರ

1963-75ರಲ್ಲಿ ವಸಂತರಾವ್ ನಾಯಕ್, ಸತತ ಎರಡು ಬಾರಿ ಮಹಾರಾಷ್ಟ್ರದ ಸಿಎಂ ಆಗಿದ್ದವರು. ಇದಾದ ಮೇಲೆ, (ಎಕ್ಸಿಟ್ ಪೋಲ್ ಆಧಾರದ ಮೇಲೆ) ಫಡ್ನವೀಸ್ ಈ ಗೌರವಕ್ಕೆ ಪಾತ್ರರಾಗಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿತ್ತು. ಆದರೆ, ಚುನಾವಣಾ ಫಲಿತಾಂಶ, ಹೊರಬೀಳುತ್ತಿದ್ದಂತೇ, ಶಿವಸೇನೆ 50:50 ಸೂತ್ರ ಎನ್ನಲಾರಂಭಿಸಿತು.

ಅಮಿತ್ ಶಾ ಅವರಿಂದ, ಯಾವುದೇ ಆದೇಶ ಇಲ್ಲ

ಅಮಿತ್ ಶಾ ಅವರಿಂದ, ಯಾವುದೇ ಆದೇಶ ಇಲ್ಲ

ಅಕ್ಟೋಬರ್ 30, ನವೆಂಬರ್ 5 ಮತ್ತು 7ನೇ ತಾರೀಕು.. ಹೀಗೆ, ಫಡ್ನವೀಸ್ ಪ್ರಮಾಣವಚನ ಮಹೂರ್ತ ಮುಂದೂಡಲ್ಪಡುತ್ತಲೇ ಇದೆ. ಅಮಿತ್ ಶಾ ಅವರಿಂದ, ಯಾವುದೇ ಆದೇಶ ಬರದೇ ಇರುವುದರಿಂದ, ಸರಕಾರ ರಚನೆ ಕಸರತ್ತು ಇನ್ನೂ ಒಂದು ಶೇಪ್ ಗೆ ಬಂದಿಲ್ಲ. ಸೋಮವಾರ (ನ 4) ಅಮಿತ್ ಶಾ ಅವರನ್ನು ಭೇಟಿಯಾದ ಫಡ್ನವೀಸ್, "ಸದ್ಯದಲ್ಲೇ ನಮ್ಮ ಹೊಸ ಸರಕಾರ ರಚನೆಯಾಗಲಿದೆ" ಎಂದಷ್ಟೇ ಹೇಳಿದ್ದಾರೆ. (ಚಿತ್ರ: ANI)

ಫಡ್ನವೀಸ್ - ಅಮಿತ್ ಶಾ ಮಾತುಕತೆ

ಫಡ್ನವೀಸ್ - ಅಮಿತ್ ಶಾ ಮಾತುಕತೆ

"ಮುಂದಿನ ಐದು ವರ್ಷ ಸಹ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತೇನೆ. ಮೈತ್ರಿ ಮಾಡಿಕೊಳ್ಳುವಾಗ ಶಿವಸೇನೆ ಎಲ್ಲಿಯೂ ಸಿಎಂ ಸ್ಥಾನದ ಬಗ್ಗೆ ಮಾತನಾಡಿರಲಿಲ್ಲ. ಅಲ್ಲದೇ 50:50 ಫಾರ್ಮುಲಾ ಸಹ ಮುಂದಿಟ್ಟಿರಲಿಲ್ಲ" ಎನ್ನುವುದು ಫಡ್ನವೀಸ್ ನಿಲುವು. ಆದರೆ, ಅಮಿತ್ ಶಾ ಒಪ್ಪುತ್ತಿಲ್ಲ, ಶಿವಸೇನೆ ತನ್ನ ಹಠವನ್ನು ಬಿಡುತ್ತಿಲ್ಲ ಎನ್ನುವುದು ವಾಸ್ತವತೆ ಎನ್ನುವುದು ಕೇಳಿಬರುತ್ತಿರುವ ಮಾತು.

ಅಮಿತ್ ಶಾ ಅವರಿಂದ ಸ್ಪಷ್ಟ ಮಾಹಿತಿಯಿಲ್ಲ

ಅಮಿತ್ ಶಾ ಅವರಿಂದ ಸ್ಪಷ್ಟ ಮಾಹಿತಿಯಿಲ್ಲ

ಮಹಾರಾಷ್ಟ್ರ ಸರಕಾರ ರಚನೆಯ ವಿಚಾರದಲ್ಲಿ ದೇವೇಂದ್ರ ಫಡ್ನವೀಸ್ ಅವರಿಗೆ ಅಮಿತ್ ಶಾ ಅವರಿಂದ ಸ್ಪಷ್ಟ ಮಾಹಿತಿಯಿಲ್ಲ ಎನ್ನುವ ಮಾತು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿರುವ ಮಾತು. ನಿಮ್ಮ ನಿಲುವೇನು ಎನ್ನುವ ಒತ್ತಡವನ್ನು ಶಿವಸೇನೆ, ಫಡ್ನವೀಸ್ ಅವರಿಗೆ ಒತ್ತಡ ಹಾಕುತ್ತಿದೆ ಎನ್ನುವ ಮಾತು ಚಾಲ್ತಿಯಲ್ಲಿದೆ.

ಶಿವಸೇನೆ ಮುಖಂಡರು ಎನ್ಸಿಪಿ ಮೂಲಕ ಕಾಂಗ್ರೆಸ್ ಕದ ತಟ್ಟುತ್ತಿದೆ

ಶಿವಸೇನೆ ಮುಖಂಡರು ಎನ್ಸಿಪಿ ಮೂಲಕ ಕಾಂಗ್ರೆಸ್ ಕದ ತಟ್ಟುತ್ತಿದೆ

ಶಿವಸೇನೆ ಮುಖಂಡರು ಎನ್ಸಿಪಿ ಮೂಲಕ ಕಾಂಗ್ರೆಸ್ ಕದ ತಟ್ಟುತ್ತಿದೆ ಎನ್ನುವ ಮಾತಿದೆ. ಜೊತೆಗೆ, ಪಕ್ಷೇತರರ ಜೊತೆಗೂ ಮಾತುಕತೆಯಲ್ಲಿದೆ. ನಮಗೆ, 170+ ಸದಸ್ಯರ ಬೆಂಬಲವಿದೆ ಎನ್ನುವ ವಿಶ್ವಾಸದ ಮಾತನ್ನಾಡುತ್ತಿದ್ದಾರೆ. ಆದರೆ, ಬಹಿರಂಗವಾಗಿ (ಎಲ್ಲೋ ಕೆಲವು ಪಕ್ಷೇತರರ ಸಂಪರ್ಕ ಬಿಟ್ಟರೆ) ಬಿಜೆಪಿಯಿಂದ ಈ ಪ್ರಯತ್ನವಾಗುತ್ತಿಲ್ಲ. ಒಟ್ಟಾರೆಯಾಗಿ, ಅಮಿತ್ ಶಾ-ಶಿವಸೇನೆ ಹಠದ ನಡುವೆ, ಏಕಾಂಗಿಯಾಗಿರುವುದು ದೇವೇಂದ್ರ ಫಡ್ನವೀಸ್.

English summary
Maharashtra Politics: Is Devendra Fadnavis Not Having The Clarity On Government Formation, Is Central Leadership sidelining him?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X