ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ರಾಜಕೀಯ ನಾಯಕರ ಅಪಾಯಕಾರಿ ಭಾಷೆ ಕೇಳಿ

|
Google Oneindia Kannada News

ಮುಂಬೈ ಜೂನ್ 24: ಮಹಾರಾಷ್ಟ್ರದಲ್ಲಿ ಸದ್ಯದ ರಾಜಕೀಯ ಬಿಕ್ಕಟ್ಟಿಗೆ ಕೊನೆಗೂ ವಿಧಾನ ಸಭೆಯಲ್ಲೇ ಪರಿಹಾರ ನಿರೀಕ್ಷಿಸಲಾಗುತ್ತಿದೆ. ಆದರೆ, ಅದಕ್ಕೂ ಮುನ್ನ ನಾಯಕರು ಬಳಸುತ್ತಿರುವ ಭಾಷೆಗಳು ನಾಚಿಕೆಗೇಡಿನ ಸಂಗತಿ. ದೊಡ್ಡ ನಾಯಕರು ಎಂದು ಕರೆಸಿಕೊಳ್ಳುವವರ ನಾಲಿಗೆಯಿಂದ ಕೆಟ್ಟ ಭಾಷೆ ಹೊರಬರುತ್ತಿದೆ. ಒಬ್ಬರನ್ನೊಬ್ಬರು ಬಹಿರಂಗವಾಗಿ ಬೈದಾಡಿಕೊಂಡು ಬೆದರಿಕೆ ಹಾಕುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ಸೌಜನ್ಯ ಹೇಗೆ ಹಾಳಾಗಿದೆ. ನೀವೇ ನೋಡಿ.

ಯಾವುದೇ ಸರ್ಕಾರಕ್ಕೆ ಬಹುಮತವಿದೆಯೇ ಅಥವಾ ಇಲ್ಲವೇ ಎಂಬ ಅಂತಿಮ ನಿರ್ಧಾರವನ್ನು ಸದನದಲ್ಲಿಯೇ ತೆಗೆದುಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಈ ಲಕ್ಷ್ಮಣ ರೇಖಾ ವಿಚಾರದಲ್ಲಿ ಯಾರೂ ಸಂದಿಗ್ಧ ಸ್ಥಿತಿಯಲ್ಲಿರಬಾರದು. ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಎಷ್ಟೇ ಶಾಸಕರ ಬೆಂಬಲ ಪಡೆದರೂ, ಉದ್ಧವ್ ಠಾಕ್ರೆ ಸರ್ಕಾರ ಬಹುಮತ ಕಳೆದುಕೊಂಡಿದ್ದು, ಸದನದೊಳಗೆ ಈ ನಿರ್ಧಾರ ಕೈಗೊಳ್ಳಬಹುದು ಅಥವಾ ರಾಜೀನಾಮೆ ನೀಡಬೇಕಾಗಬಹುದು.

ಆದರೆ, ಕಳೆದೆರಡು ದಿನಗಳಿಂದ ಮಹಾರಾಷ್ಟ್ರ ರಾಜಕಾರಣದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡೂ ಬಳಸುತ್ತಿರುವ ಭಾಷೆ 'ಪಕ್ಕಾ ಲೋಕಲ್' ಮಾದರಿಯದು. ತಮ್ಮನ್ನು ತಾವು ದೊಡ್ಡ ನಾಯಕರು ಎಂದು ಪರಿಗಣಿಸುವ ಜನರು ಬಹಿರಂಗವಾಗಿ ಗಮನಿಸುವಂತಹ ಅಸಭ್ಯ ಭಾಷೆ ಬಳಸುತ್ತಿದ್ದಾರೆ. ಇದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ತುಂಬಾ ಅಪಾಯಕಾರಿ.

Maharashtra Political Crisis: Listen to the Dangerous Language of Political Leaders

ಎನ್‌ಸಿಪಿ ನಾಯಕ ಶರದ್ ಪವಾರ್ ಅವರಿಗೆ ಕೇಂದ್ರ ಸಚಿವರೊಬ್ಬರು ಬೆದರಿಕೆ ಹಾಕಿದ್ದಾರೆ ಎಂದು ಶಿವಸೇನಾ ಮುಖ್ಯ ವಕ್ತಾರ ಸಂಜಯ್ ರಾವತ್ ಶುಕ್ರವಾರ ಆರೋಪಿಸಿದ್ದಾರೆ. "ಮಹಾ ವಿಕಾಸ್ ಅಘಾಡಿಯನ್ನು ಉಳಿಸಲು ಶರದ್ ಪವಾರ್ ಪ್ರಯತ್ನಿಸಿದರೆ ಅವರನ್ನು ಮನೆಗೆ ಹೋಗಲು ಬಿಡುವುದಿಲ್ಲ. ಅವರನ್ನು ರಸ್ತೆ ಮಧ್ಯೆ ತಡೆಯಲಾಗುವುದು ಎಂದು ಕೇಂದ್ರ ಸಚಿವರು ಬೆದರಿಕೆ ಹಾಕಿದ್ದಾರೆ. ಇದನ್ನು ಬಿಜೆಪಿ ಮಾಡುತ್ತಿದೆ ಎಂದಾದರೆ, ಅದನ್ನು ಬಹಿರಂಗವಾಗಿ ಘೋಷಿಸಿಬಿಡಿ. ಸರ್ಕಾರ ಉಳಿಯುತ್ತದೆಯೋ ಅಥವಾ ಉರುಳುತ್ತದೆಯೋ, ಆದರೆ ಶರದ್ ಪವಾರ್ ಕುರಿತು ಅಂತಹ ಭಾಷೆಯನ್ನು ಒಪ್ಪಲು ಸಾಧ್ಯವಿಲ್ಲ" ಎಂದು ಕಿಡಿಕಾರಿದ್ದಾರೆ.

Maharashtra Political Crisis: Listen to the Dangerous Language of Political Leaders

ರಾವುತ್ ಅವರು ಅಂತಹ ಭಾಷೆ ಪ್ರಾರಂಭಿಸಿದ್ದಾರೆ. ಶಿವಸೇನೆಯಲ್ಲಿನ ಬಂಡಾಯದ ಕುರಿತು ಸುದ್ದಿ ವಾಹಿನಿಯೊಂದಕ್ಕೆ ಶಿಂಧೆ ಮತ್ತು ಅವರ ಬೆಂಬಲಿಗರ ಬಗ್ಗೆ ರಾವತ್, 'ಹೋದ ಎಲ್ಲಾ ಶಾಸಕರು ಮನೆಗೆ ಬರಲಿ. ನಂತರ ನಾವು ನೋಡೋಣ. ಹಿಂತಿರುಗಿ ಮಹಾರಾಷ್ಟ್ರದಲ್ಲಿ ತಿರುಗಾಡುವುದೇ ಕಷ್ಟವಾಗುತ್ತದೆ'' ಎಂದಿದ್ದಾರೆ. ರಾವುತ್ ಹೇಳಿಕೆಗೆ ಜೇಠ್ಮಲಾನಿ ಟ್ವೀಟ್ ಮಾಡಿ"ಇದು ಮಹಾರಾಷ್ಟ್ರದಲ್ಲಿ ಭಯಾನಕ ಬೆದರಿಕೆಯಾಗಿದೆ" ಎಂದಿದ್ದಾರೆ.

English summary
In Maharashtra, the current political crisis is awaiting resolution at the last session. But before that, the languages ​​that leaders use are shameful.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X