ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ದೇವೇಂದ್ರ ದೆಹಲಿಗೆ, ಪಿಜಿಪಿ ರಾಜಭವನಕ್ಕೆ ಅಘಾಡಿ ಆಯ್ತ ಲಗಾಡಿ!

|
Google Oneindia Kannada News

ಮುಂಬೈ, ಜೂನ್ 28: "ನಾವು ಸಾಯಲು ಸಿದ್ಧ, ಆದರೆ ನಮ್ಮ ಪಕ್ಷವನ್ನು ತ್ಯಜಿಸುವುದಿಲ್ಲ", ''ಸರ್ಕಾರ ಉಳಿಸಲು ದೇವೇಂದ್ರಗೆ ಡಯಲ್ ಮಾಡಿಲ್ಲ,'' -ಶಿವಸೇನಾ ವಕ್ತಾರರು ಹೀಗೆ ಹೇಳಿಕೆ ನೀಡಿದ ಬೆನ್ನಲ್ಲೇ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ದೆಹಲಿ ವಿಮಾನವೇರಲು ಸಜ್ಜಾಗಿದ್ದಾರೆ. ದೆಹಲಿಯಲ್ಲಿ ಹಿರಿಯ ನಾಯಕರಾದ ಸಚಿವ ಅಮಿತ್ ಶಾ, ಜೆಪಿ ನಡ್ಡಾರೊಡನೆ ಸಮಾಲೋಚನೆ ನಡೆಸಿ, ಮಹಾರಾಷ್ಟ್ರದಲ್ಲಿ ಮತ್ತೆ ಕಮಲ ಅರಳಿಸಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಸೂಚನೆ ನೀಡಲಿದ್ದಾರೆ ಎಂಬ ಸುದ್ದಿ ಬಂದಿದೆ.

ಒಟ್ಟಾರೆ, ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಕ್ಕೆ ಬಿಜೆಪಿ ಅಧಿಕೃತವಾಗಿ ಕಾರ್ಯತಂತ್ರ ರೂಪಿಸುತ್ತಿರುವುದು ಸ್ಪಷ್ಟವಾಗಿದೆ.

ಈ ನಡುವೆ ವರದಿಯ ಪ್ರಕಾರ, ಉದ್ಧವ್ ಠಾಕ್ರೆ ನೇತೃತ್ವದ ಆಡಳಿತದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರಹಾರ್ ಜನಶಕ್ತಿ ಪಕ್ ಮುಂದಾಗಿದೆ. ಪಕ್ಷದ ಮುಖ್ಯಸ್ಥ ಬಚ್ಚು ಕಡು ಮತ್ತು ರಾಜ್‌ಕುಮಾರ್ ಪಟೇಲ್ ಜೂನ್ 30 ರಂದು ರಾಜಭವನಕ್ಕೆ ಭೇಟಿ ನೀಡಲಿದ್ದಾರೆ. ಈ ನಡುವೆ ಏಕನಾಥ್ ಶಿಂಧೆ ಮರಳಿ ಮುಂಬೈಗೆ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

Maharashtra Political Crisis: Devendra Fadnavis heads to Delhi to meet Amit Shah amid turmoil in Shiv Sena

ಬಂಡಾಯ ಪಾಳಯ ನಾಯಕ ಏಕನಾಥ್ ಶಿಂಧೆ ಇಂದು ಮಹಾರಾಷ್ಟ್ರ ರಾಜ್ಯಪಾಲ ಬಿಎಸ್ ಕೋಶ್ಯಾರಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಶಾಸಕ ಸದಾ ಸರ್ವಾಂಕರ್ ಖಚಿತಪಡಿಸಿದ್ದಾರೆ ಎಂದು ಮರಾಠಿ ಮಾಧ್ಯಮಗಳು ವರದಿ ಮಾಡಿವೆ. ಆದರೆ, ರಾಜಭವನ ವೇಳಾಪಟ್ಟಿಯಲ್ಲಿ ಯಾವುದೇ ಅಧಿಕೃತ ಹೇಳಿಕೆ ಇಲ್ಲ.

ದೇವೇಂದ್ರ ಫಡ್ನವೀಸ್ ಮತ್ತು ಇತರ ಬಿಜೆಪಿ ನಾಯಕರನ್ನು ಭೇಟಿ ಮಾಡಲು ಶಿಂಧೆ ದೆಹಲಿಗೆ ಭೇಟಿ ನೀಡಿದ್ದಾರೆ ಎಂಬ ವದಂತಿಯಿತ್ತು. ರಿಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಸರ್ವಾಂಕರ್, ರಾಜ್ಯದಲ್ಲಿ ಹೊಸ ಸರ್ಕಾರ ರಚಿಸಲು ಬಂಡಾಯ ಪಾಳೆಯವು ಬಿಜೆಪಿಯೊಂದಿಗೆ ಕೈಜೋಡಿಸಲಿದೆ ಎಂದು ಖಚಿತಪಡಿಸಿದರು.

ಈ ನಡುವೆ "ಉದ್ಧವ್ ಸಾಹೇಬ್ ಠಾಕ್ರೆ ಅವರು ಏನು ಹೇಳಬೇಕೆಂದಿದ್ದೀರೋ ಅದನ್ನು ಬಹಿರಂಗವಾಗಿ ಮಾತನಾಡುತ್ತಾರೆ. ಇದನ್ನು ಯಾರೂ ತಪ್ಪಾಗಿ ಅರ್ಥೈಸಿಕೊಳ್ಳಬಾರದು ಮತ್ತು ಸುಳ್ಳು ಸುದ್ದಿ ಹರಡಬಾರದು, ಸರ್ಕಾರ ಉಳಿಸಿಕೊಳ್ಳಲು ನಾವು ದೇವೇಂದ್ರ ಫಡ್ನವೀಸ್ ನೆರವು ಕೋರಿದ್ದೇವೆ ಎಂಬುದು ಸುಳ್ಳು" ಎಂದು ಶಿವಸೇನೆ ಪಿಆರ್‌ಒ ಹರ್ಷಲ್ ಪ್ರಧಾನ್ ಸ್ಪಷ್ಟಪಡಿಸಿದ್ದಾರೆ.

ಮಹಾ ಬಿಕ್ಕಟ್ಟು, ಬಿಜೆಪಿ ಹೊಣೆ: ಶಿವಸೇನೆ ಆರೋಪ
ಮಹಾರಾಷ್ಟ್ರದ ಬಂಡಾಯ ಶಿವಸೇನೆ ಶಾಸಕರಿಗೆ ಕೇಂದ್ರವು ವೈ-ಪ್ಲಸ್ ಭದ್ರತೆಯನ್ನು ಒದಗಿಸುತ್ತೆ. ರಾಜ್ಯದಲ್ಲಿ ಪ್ರಸ್ತುತ ರಾಜಕೀಯ ಪ್ರಕ್ಷುಬ್ಧತೆಯ ಮಧ್ಯೆ ಬಿಜೆಪಿ ತನ್ನ ದಾಳ ಉರುಳಿಸುತ್ತಿದೆ ಎಂದು ಪಕ್ಷವು ಸೋಮವಾರ ಹೇಳಿದೆ. ಶಿವಸೇನೆಯ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಸೇನಾ ಶಾಸಕರನ್ನು "ದೊಡ್ಡ ಗೂಳಿಗಳಿಗೆ" ಹೋಲಿಸಲಾಗಿದೆ ಮತ್ತು 50 ಕೋಟಿಗೆ "ಮಾರಾಟ" ಮಾಡಲಾಗಿದೆ ಎಂದು ಆರೋಪಿಸಿದೆ.

ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಒಟ್ಟು 288 ಸ್ಥಾನಗಳಿದ್ದು, ಒಬ್ಬ ಶಾಸಕರು ವಿಧಿವಶವಾದ ಹಿನ್ನೆಲೆ ಈ ಸಂಖ್ಯೆಯು 287ಕ್ಕೆ ತಗ್ಗಿದೆ. ಹೀಗಾಗಿ ಸರ್ಕಾರದ ಬಹುಮತಕ್ಕೆ ಕನಿಷ್ಠ 144 ಸ್ಥಾನಗಳು ಬೇಕಾಗುತ್ತದೆ. ಬಿಜೆಪಿಯು 106 ಶಾಸಕರನ್ನು ಹೊಂದುವ ಮೂಲಕ ಅತಿದೊಡ್ಡ ಪಕ್ಷವಾಗಿದೆ. ಆದರೆ 55 ಶಾಸಕರನ್ನು ಹೊಂದಿರುವ ಶಿವಸೇನೆ, 53 ಶಾಸಕರನ್ನು ಹೊಂದಿರುವ ಎನ್ ಸಿಪಿ ಮತ್ತು 44 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಜೊತೆ ಮೂವರು ಶಾಸಕರನ್ನು ಹೊಂದಿರುವ ಬಹುಜನ ವಿಕಾಸ ಅಘಾಡಿ ಪಕ್ಷಗಳು ಒಟ್ಟಾಗಿ ಸೇರಿಕೊಂಡು ಮಹಾ ವಿಕಾಸ ಅಘಾಡಿ ಎಂದ ಸಮ್ಮಿಶ್ರ ಸರ್ಕಾರವನ್ನು ರಚಿಸಿವೆ.

Recommended Video

ಭಾರತ ತಂಡಕ್ಕೆ ಸವಾಲ್ ಹಾಕಿದ ಬೆನ್ ಸ್ಟ್ರೋಕ್ !! | *Cricket | Oneindia Kannada

ಮಹಾ ವಿಕಾಸ ಅಘಾಡಿ ಒಕ್ಕೂಟವು 169 ಶಾಸಕರ ಬೆಂಬಲವನ್ನು ಹೊಂದಿದೆ. ಇನ್ನೊಂದು ಮಗ್ಗಲಿನಲ್ಲಿ ಬಿಜೆಪಿಯು 106 ಸ್ಥಾನಗಳ ಜೊತೆಗೆ ಮಿತ್ರಪಕ್ಷಗಳು ಹಾಗೂ ಐದು ಇತರೆ ಶಾಸಕರು ಸೇರಿದಂತೆ ಒಟ್ಟು 113 ಶಾಸಕರ ಬೆಂಬಲವನ್ನು ಹೊಂದಿದೆ.

English summary
Maharashtra Political Crisis: Ex-CM and BJP leader Devendra Fadnavis leaves for Delhi. He is set to meet BJP President JP Nadda & Home Minister Amit Shah today. "Uddhav Saheb Thackeray speaks openly what he wants to say. No one should be misunderstood and spread this," said Harshal Pradhan, Shiv Sena PRO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X