ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾ ಬಿಕ್ಕಟ್ಟು: ಏಕನಾಥ್ ಶಿಂಧೆಯೇ ನಮ್ಮ ಶಾಸಕಾಂಗ ನಾಯಕ ಎಂದು 37 ಶಾಸಕರ ಪತ್ರ

|
Google Oneindia Kannada News

ಮುಂಬೈ, ಜೂನ್ 24: ಮಹಾರಾಷ್ಟ್ರದಲ್ಲಿ ರಾಜಕೀಯದ ಬಿಕ್ಕಟ್ಟಿನ ಮಧ್ಯೆ ಬಾಳಾಸಾಹೇಬ್ ಠಾಕ್ರೆ ಸಂಸ್ಥಾಪಿಸಿದ ಶಿವಸೇನೆಯಲ್ಲಿ ಅವರ ಪುತ್ರ ಉದ್ಧವ್ ಠಾಕ್ರೆಯನ್ನೇ ಬದಿಗೆ ಸರಿಸುವ ನಿಟ್ಟಿನಲ್ಲಿ ಬಂಡಾಯ ಶಾಸಕರು ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ.

ಬಂಡಾಯ ನಾಯಕ ಏಕನಾಥ್ ಶಿಂಧೆಯನ್ನೇ ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕ ಎಂದು ಒಪ್ಪಿದ ಪತ್ರಕ್ಕೆ 37 ಶಾಸಕರು ಸಹಿ ಮಾಡಿದ್ದು, ರಾಜ್ಯಪಾಲರು ಮತ್ತು ಉಪ ಸಭಾಪತಿಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಹಾ ಬಿಕ್ಕಟ್ಟು: ಇನ್ನೊಬ್ಬ ಶಾಸಕ ಸಿಕ್ಕರೆ, ಏಕನಾಥ್ ಶಿಂಧೆ ರೂಟ್ ಕ್ಲಿಯರ್! ಮಹಾ ಬಿಕ್ಕಟ್ಟು: ಇನ್ನೊಬ್ಬ ಶಾಸಕ ಸಿಕ್ಕರೆ, ಏಕನಾಥ್ ಶಿಂಧೆ ರೂಟ್ ಕ್ಲಿಯರ್!

ಮಹಾರಾಷ್ಟ್ರ ರಾಜಕಾರಣದಲ್ಲಿ ಚುರುಕಿನ ಬೆಳವಣಿಗೆಗಳು ನಡೆಯುತ್ತಿವೆ. ಒಂದು ಕಡೆಯಲ್ಲಿ ಶಾಸಕರ ಬಂಡಾಯ ಜೋರಾಗುತ್ತಿದ್ದಂತೆ, ಇನ್ನೊಂದು ಕಡೆಯಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ನಾನು ರೆಡಿ ಅಂತಾ ಉದ್ಧವ್ ಠಾಕ್ರೆ ಹೇಳಿದ್ದಾರೆ. ಅದೇ ಶಿವಸೇನೆ ಮುಖಂಡ ಸಂಜಯ್ ರಾವತ್ ಬಂಡಾಯದ ಬಗ್ಗೆ ಘಳಿಗೆಗೊಂದು ಹೇಳಿಕೆ ನೀಡುತ್ತಿದ್ದಾರೆ. ಈ ಎಲ್ಲ ರಾಜಕೀಯ ಬೆಳವಣಿಗೆಗಳ ಕುರಿತು ವರದಿಯಲ್ಲಿ ತಿಳಿದುಕೊಳ್ಳೋಣ.

ಉಪ ಸಭಾಪತಿಗೆ ಪತ್ರ ಬರೆದು 12 ಶಾಸಕರ ಅನರ್ಹತೆಗೆ ಮನವಿ

ಉಪ ಸಭಾಪತಿಗೆ ಪತ್ರ ಬರೆದು 12 ಶಾಸಕರ ಅನರ್ಹತೆಗೆ ಮನವಿ

ಶಿವಸೇನೆ ಬಂಡಾಯ ಶಾಸಕ ಏಕನಾಥ್ ಶಿಂಧೆ ಬಣಕ್ಕೆ ತಿರುಗೇಟು ನೀಡುವುದಕ್ಕೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣದ ನಾಯಕರು ಅಣಿಯಾಗುತ್ತಿದ್ದಾರೆ. ಇದಕ್ಕೆ ಪೂರಕ ಹೆಜ್ಜೆಯಾಗಿ ಶಿಂಧೆ ಬಣದಲ್ಲಿ ಗುರುತಿಸಿಕೊಂಡಿರುವ 12 ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಉಪ ಸಭಾಪತಿಗೆ ಪತ್ರ ಬರೆಯಲಾಗಿದೆ. ಇದರಿಂದ ಭವಿಷ್ಯದಲ್ಲಿ ವಿಶ್ವಾಸ ಮತಯಾಚನೆ ವೇಳೆ ಸಂಖ್ಯೆಗಳ ಲೆಕ್ಕಾಚಾರಕ್ಕೆ ಅನುಕೂಲಕರವಾಗಿ ಇರಲಿದೆ ಎಂಬುದು ಠಾಕ್ರೆ ಬಣದ ಸ್ಕೆಚ್ ಆಗಿದೆ.

ಬುಧವಾರ ಉದ್ಧವ್ ಠಾಕ್ರೆ ಕರೆದಿದ್ದ ಶಾಸಕಾಂಗ ಪಕ್ಷದ ಸಭೆಗೆ ತೆರಳಿದ ಶಾಸಕರನ್ನು ಅನರ್ಹಗೊಳಿಸುವುದಾಗಿ ಶಿವಸೇನೆ ಎಚ್ಚರಿಕೆ ನೀಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಏಕನಾಥ್ ಶಿಂಧೆ, "ಯಾರನ್ನು ಹೆದರಿಸಲು ಪ್ರಯತ್ನಿಸುತ್ತಿದ್ದೀರಿ? ನಿಮ್ಮ ಹೊಂದಾಣಿಕೆ ಮತ್ತು ಕಾನೂನು ನಮಗೂ ತಿಳಿದಿದೆ! ಸಂವಿಧಾನದ 10 ನೇ ಶೆಡ್ಯೂಲ್ ಪ್ರಕಾರ ವಿಪ್ ಸಭೆಗೆ ಅಲ್ಲ, ಸಭೆಗೆ ಅಲ್ಲ," ಎಂದು ಟ್ವೀಟ್ ಮಾಡಿದ್ದಾರೆ.

ಏಕನಾಥ್ ಬಣಕ್ಕೆ ಅನರ್ಹತೆ ತಪ್ಪಿಸುವ ಮ್ಯಾಜಿಕ್ ನಂಬರ್

ಏಕನಾಥ್ ಬಣಕ್ಕೆ ಅನರ್ಹತೆ ತಪ್ಪಿಸುವ ಮ್ಯಾಜಿಕ್ ನಂಬರ್

ಪಕ್ಷಾಂತರ ನಿಷೇಧ ಕಾಯ್ದೆಯಿಂದ ಬಚಾವ್ ಆಗಿ ವಿಧಾನಸಭೆಯಲ್ಲಿ ಪಕ್ಷವನ್ನು ವಿಭಜಿಸಲು ಬೇಕಾದ ನಿರ್ಣಾಯಕ ಸಂಖ್ಯೆಯನ್ನು ಈಗಾಗಲೇ ಏಕನಾಥ್ ಶಿಂಧೆ ಗಳಿಸಿದ್ದಾರೆ. ಶಿವಸೇನೆಯ 55 ಶಾಸಕರಲ್ಲಿ 37 ಶಾಸಕರ ಬೆಂಬಲವನ್ನು ಪಡೆದುಕೊಂಡರೆ ಯಾವುದೇ ಅನರ್ಹತೆಯಿಲ್ಲದೇ ಪಕ್ಷವನ್ನು ವಿಭಜನೆ ಮಾಡಬಹುದು. ಈ ಲೆಕ್ಕಾಚಾರದಲ್ಲಿ ಶಿಂಧೆ 42 ಶಾಸಕರ ಬೆಂಬಲವನ್ನು ಪಡೆದುಕೊಂಡಿದ್ದು ಆಗಿದೆ. ಇದರ ಜೊತೆಗೆೆ ಮತ್ತಿಬ್ಬರು ಶಾಸಕರಾದ ದಾದಾ ಭೂಸೆ ಮತ್ತು ಸಂಜಯ್ ರಾಥೋಡ್ ಮತ್ತು ಒಬ್ಬ ಎಂಎಲ್‌ಸಿ ರವೀಬ್ದ್ರ ಫಠಕ್ ಕೂಡ ಶಿಂಧೆ ಬಣಕ್ಕೆ ಸೇರಿಕೊಳ್ಳಲು ಗುವಾಹಟಿ ಕಡೆಗೆ ಮುಖ ಮಾಡಿದ್ದಾರೆ.

24 ಗಂಟೆಗಳ ಟಾರ್ಗೆಟ್ ನೀಡಿದ್ದ ಉದ್ಧವ್ ಠಾಕ್ರೆ

24 ಗಂಟೆಗಳ ಟಾರ್ಗೆಟ್ ನೀಡಿದ್ದ ಉದ್ಧವ್ ಠಾಕ್ರೆ

ಶಿವಸೇನೆಯ ಬಂಡಾಯ ನಾಯಕರಿಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ 24 ಗಂಟೆಗಳ ಟಾರ್ಗೆಟ್ ನೀಡಿದ್ದರು. ಈ ಅವಧಿಯಲ್ಲೇ ಏಕನಾಥ್ ಶಿಂಧೆ ಮತ್ತು ಬಣದ ಎಲ್ಲಾ ಶಾಸಕರು ವಾಪಸ್ ಆಗಬೇಕು. ಹಾಗೊಂದು ವೇಳೆ ವಾಪಸ್ ಆದರೆ, ಮುಂದಿನ ಚರ್ಚೆ ನಡೆಸಲಾಗುವುದು. ಅಗತ್ಯ ಬಿದ್ದರೆ ಎನ್ ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮಹಾ ವಿಕಾಸ ಅಘಾಡಿಯಿಂದ ಹೊರ ಬರಲಾಗುವುದು ಎಂದು ಹೇಳಲಾಗಿತ್ತು. ಇದರ ಮಧ್ಯೆ ಶಿವಸೇನೆ ತೊರೆದು ಹೋಗಿರುವ ಬಂಡಾಯ ಶಾಸಕರು ಮಹಾರಾಷ್ಟ್ರದಲ್ಲಿ ತಿರುಗಾಡುವುದಕ್ಕೂ ಭಯಪಡುತ್ತಿದ್ದಾರೆ ಎಂದು ಸಂಜಯ್ ರಾವತ್ ಹೇಳಿಕೆಯೊಂದನ್ನು ನೀಡಿದರು.

ಗುವಾಹಟಿ ಹೋಟೆಲ್‌ನಲ್ಲಿ ಕಾಣಿಸಿಕೊಂಡ ಬಿಜೆಪಿ ನಾಯಕರು

ಗುವಾಹಟಿ ಹೋಟೆಲ್‌ನಲ್ಲಿ ಕಾಣಿಸಿಕೊಂಡ ಬಿಜೆಪಿ ನಾಯಕರು

ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂಬ ಆರೋಪವನ್ನು ಬಿಜೆಪಿ ನಿರಾಕರಿಸಿದೆ. ಆದರೆ ಗುವಾಹಟಿಯಲ್ಲಿ ಶಿವಸೇನೆ ಬಂಡಾಯ ಶಾಸಕರು ತಂಗಿರುವ ಹೋಟೆಲ್‌ನಲ್ಲಿ ಅಸ್ಸಾಂನ ಬಿಜೆಪಿ ಸಚಿವರೊಬ್ಬರು ಕಾಣಿಸಿಕೊಂಡಿದ್ದಾರೆ. ಏಕನಾಥ್ ಶಿಂಧೆ ಬಿಡುಗಡೆ ಮಾಡಿರುವ ಬಂಡಾಯ ಶಾಸಕರ ತಂಡದ ವಿಡಿಯೋದಲ್ಲಿ ಶಾಸಕರು ತೆರಳುವ ಮೊದಲು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ಹೋಟೆಲ್‌ನಲ್ಲಿ ಕಾಣಿಸಿಕೊಂಡರುವ ಕಂಡು ಬಂದಿದೆ.

ಮಹಾ ವಿಕಾಸ ಅಘಾಡಿಯಲ್ಲಿ ಒಗ್ಗಟ್ಟಿನ ಮಂತ್ರಿ ಪಠಣೆ

ಮಹಾ ವಿಕಾಸ ಅಘಾಡಿಯಲ್ಲಿ ಒಗ್ಗಟ್ಟಿನ ಮಂತ್ರಿ ಪಠಣೆ

ಮಹಾರಾಷ್ಟ್ರದಲ್ಲಿ ಮೈತ್ರಿಕೂಟದ ಆಂತರಿಕ ಸಭೆಗಳನ್ನು ನಡೆಸಿದ ನಂತರ, ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಒಗ್ಗಟ್ಟಿನ ಮಂತ್ರ ಜಪಿಸುತ್ತಿವೆ. ಶಿವಸೇನೆಯ ಮಿತ್ರಪಕ್ಷಗಳು ತಾವು ಸಿಎಂ ಉದ್ಧವ್ ಠಾಕ್ರೆ ಜೊತೆಗಿದ್ದೇವೆ ಎಂದು ಹೇಳಿವೆ. "ನಾವು ಒಟ್ಟಾಗಿ ಹೋರಾಡುತ್ತೇವೆ, ಮಹಾ ವಿಕಾಸ ಅಘಾಡಿ ಸದಾ ಒಟ್ಟಿಗೆ ಇರುತ್ತದೆ," ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

"ಮಹಾ ವಿಕಾಸ ಅಘಾಡಿಯನ್ನು ರಚಿಸಿದ ಕಾಂಗ್ರೆಸ್ ಮತ್ತು ತಮ್ಮ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವು ಸರ್ಕಾರದ ಭಾಗವಾಗಿದೆ. ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂಬ ವಿಶ್ವಾಸ ನಮಗಿದೆ. ಅಂತಿಮವಾಗಿ ಯಾರಿಗೆ ಬಹುಮತವಿದೆ ಎಂಬುದನ್ನು ವಿಶ್ವಾಸ ಮತಯಾಚನೆಯು ನಿರ್ಧರಿಸುತ್ತದೆ," ಎಂದು ಶರದ್ ಪವಾರ್ ತಿಳಿಸಿದ್ದಾರೆ.

ಸರ್ಕಾರದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳಿವೆ?

ಸರ್ಕಾರದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳಿವೆ?

ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಒಟ್ಟು 288 ಸ್ಥಾನಗಳಿದ್ದು, ಒಬ್ಬ ಶಾಸಕರು ವಿಧಿವಶವಾದ ಹಿನ್ನೆಲೆ ಈ ಸಂಖ್ಯೆಯು 287ಕ್ಕೆ ತಗ್ಗಿದೆ. ಹೀಗಾಗಿ ಸರ್ಕಾರದ ಬಹುಮತಕ್ಕೆ ಕನಿಷ್ಠ 144 ಸ್ಥಾನಗಳು ಬೇಕಾಗುತ್ತದೆ. ಬಿಜೆಪಿಯು 106 ಶಾಸಕರನ್ನು ಹೊಂದುವ ಮೂಲಕ ಅತಿದೊಡ್ಡ ಪಕ್ಷವಾಗಿದೆ. ಆದರೆ 55 ಶಾಸಕರನ್ನು ಹೊಂದಿರುವ ಶಿವಸೇನೆ, 53 ಶಾಸಕರನ್ನು ಹೊಂದಿರುವ ಎನ್ ಸಿಪಿ ಮತ್ತು 44 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಜೊತೆ ಮೂವರು ಶಾಸಕರನ್ನು ಹೊಂದಿರುವ ಬಹುಜನ ವಿಕಾಸ ಅಘಾಡಿ ಪಕ್ಷಗಳು ಒಟ್ಟಾಗಿ ಸೇರಿಕೊಂಡು ಮಹಾ ವಿಕಾಸ ಅಘಾಡಿ ಎಂದ ಸಮ್ಮಿಶ್ರ ಸರ್ಕಾರ ರಚಿಸಿವೆ.

ಮಹಾ ವಿಕಾಸ ಅಘಾಡಿ ಒಕ್ಕೂಟವು 169 ಶಾಸಕರ ಬೆಂಬಲವನ್ನು ಹೊಂದಿದೆ. ಇನ್ನೊಂದು ಮಗ್ಗಲಿನಲ್ಲಿ ಬಿಜೆಪಿಯು 106 ಸ್ಥಾನಗಳ ಜೊತೆಗೆ ಮಿತ್ರಪಕ್ಷಗಳು ಹಾಗೂ ಐದು ಇತರೆ ಶಾಸಕರು ಸೇರಿದಂತೆ ಒಟ್ಟು 113 ಶಾಸಕರ ಬೆಂಬಲವನ್ನು ಹೊಂದಿದೆ. ಈಗ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಶಿವಸೇನೆ ನಾಯಕ ಏಕನಾಥ್ ಶಿಂಧೆ ಜೊತೆಗೆ 42 ಮಂದಿ ಶಾಸಕರು ಬೆಂಬಲಕ್ಕೆ ನಿಂತಿದ್ದಾರೆ. ಇನ್ನೊಂದು ಮಗ್ಗಲಿನಲ್ಲಿ ಶಿವಸೇನೆಗೆ ಬೆಂಬಲಿಸುವ ಶಾಸಕರ ಸಂಖ್ಯೆ 13ಕ್ಕೆ ತಗ್ಗಿರುವ ಬಗ್ಗೆ ವರದಿಯಾಗಿದೆ.

English summary
Maharashtra Political Crisis: 37 MLAs signed letter to Support Eknath Shinde As Sena Leader; Here Read Major Developments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X