ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕನಾಥ್ ಸಿಎಂ ಮಾಡಿಬಿಡೋಣವೇ? ಶರದ್-ಉದ್ಧವ್-ಸುಪ್ರಿಯಾ ಚರ್ಚೆ

|
Google Oneindia Kannada News

ಮುಂಬೈ, ಜೂನ್ 22: ಮಹಾರಾಷ್ಟ್ರದ ಮಹಾ ಅಘಾಡಿ ಸರ್ಕಾರ ಅಲುಗಾಡುತ್ತಿದ್ದಂತೆ ಮಿತ್ರಪಕ್ಷಗಳ ಮುಖಂಡರ ನಡುವೆ ಬಿರುಸಿನ ಚರ್ಚೆ, ಸಾಧ್ಯಸಾಧ್ಯತೆ, ಮುಂದಿನ ನಡೆ ಏನು ಎಂಬ ಪ್ರಶ್ನೆಗಳು ಎದ್ದಿವೆ. ಈ ನಡುವೆ ಬಂಡಾಯ ಶಾಸಕರನ್ನು ಶಮನಗೊಳಿಸಲು ವಿಫಲವಾದ ಸಿಎಂ ಉದ್ಧವ್ ಠಾಕ್ರೆ ಫೇಸ್‌ಬುಕ್‌ನಲ್ಲಿ ತಮ್ಮ ಭಾವನಾತ್ಮಕ ಭಾಷಣವನ್ನು ಮುಗಿಸಿದ ಬೆನ್ನಲ್ಲೇ ಎನ್ ಸಿ ಪಿ ಮುಖಂಡರ ಜೊತೆ ಮಾತುಕತೆಗೆ ಮುಂದಾದರು.

''ನಾನು ಅಧಿಕಾರಕ್ಕೆ ಅಂಟಿಕೊಂಡಿಲ್ಲ,ರಾಜೀನಾಮೆ ಸಿದ್ಧವಾಗಿದ್ದೇನೆ'' ಎಂಬ ಉದ್ಧವ್ ಠಾಕ್ರೆಗೆ ಹಿರಿಯ ಮುಖಂಡ ಶರದ್ ಪವಾರ್ ಸಮಾಧಾನಪಡಿಸಿದ್ದಾರೆ. ಉದ್ಧವ್ ಮನೆಗೆ ಭೇಟಿ ನೀಡಿದ ಎನ್ ಸಿ ಪಿ ವರಿಷ್ಠ ಶರದ್ ರಿಗೆ, ಸುಪ್ರಿಯಾ ಸುಳೆ, ಜಿತೇಂದ ಅವ್ಹದ್ ಸಾಥ್ ನೀಡಿದರು.

ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಸೂತ್ರ?:
ಮಹಾರಾಷ್ಟ್ರದ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಧಕ್ಕೆ ಎದುರಾಗುತ್ತಿದ್ದಂತೆ ಇದು ಶಿವಸೇನಾ ಆಂತರಿಕ ಬಿಕ್ಕಟ್ಟು ಎಂದಿದ್ದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಈಗ ಖುದ್ದು ಉದ್ಧವ್ ಮನೆಗೆ ತೆರಳಿ ಮಾತನಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಬಂಡಾಯಗಾರ ಬಳಿ ಸರ್ಕಾರ ಉರುಳಿಸಲು ಬೇಕಾದಷ್ಟು ಮ್ಯಾಜಿಕ್ ನಂಬರ್ ಒಟ್ಟುಗೂಡಿದೆ.

Maharashtra Poitical Crisis: Crucial meeting between CM Uddhav Thackeray, NCP chief Sharad Pawar and Supriya Sule

ಈ ನಡುವೆ ಏಕನಾಥ್ ಶಿಂಧೆರನ್ನು ಸಮಾಧಾನಪಡಿಸಲು ವಿವಿಧ ಆಯ್ಕೆಗಳನ್ನು ಚರ್ಚಿಸಲಾಗಿದೆ. ಈ ನಡುವೆ ಶಿಂಧೆಗೆ ಸಿಎಂ ಸ್ಥಾನ ನೀಡುವ ಸಾಧ್ಯತೆಯನ್ನು ಪರಿಗಣಿಸಲಾಗಿದೆ. ಉದ್ಧವ್ ಠಾಕ್ರೆ ಅಧಿಕೃತ ನಿವಾಸ ವರ್ಷಾದಲ್ಲಿ ಬುಧವಾರ ಸಂಜೆ ನಡೆದ ಸಭೆಯಲ್ಲಿ ಮೈತ್ರಿಕೂಟದ ಇಬ್ಬರು ಹಿರಿಯ ನಾಯಕರು ಸರ್ಕಾರವನ್ನು ಉಳಿಸುವ ಎಲ್ಲಾ ಆಯ್ಕೆಗಳ ಬಗ್ಗೆ ಚರ್ಚಿಸಿದರು ಎಂದು ತಿಳಿದು ಬಂದಿದೆ.

ಶಿಂಧೆಗೆ ಸಿಎಂ ಸ್ಥಾನ ನೀಡುವುದು, ಸಚಿವ ಸಂಪುಟ ಸಂಪೂರ್ಣವಾಗಿ ಪುನರ್ ರಚನೆ ಮಾಡುವುದು, ಶಿವಸೇನಾ ಮುಖ್ಯಸ್ಥ ಸ್ಥಾನದಲ್ಲಿ ಉದ್ಧವ್ ಮುಂದುವರೆಯುವುದು ಸೇರಿದಂತೆ ಅನೇಕ ಸಾಧ್ಯತೆಗಳನ್ನು ಪರಿಗಣಿಸಲಾಗಿದೆ. ಮುಖ್ಯವಾಗಿ ಏಕನಾಥ್ ಸಿಎಂ ಆದರೆ ಬಂಡಾಯ ಶಮನವಾಗಿ ಮಹಾ ಅಘಾಡಿ ಉಳಿಯುವುದಾದರೆ ನಾವು ಸಿದ್ಧ ಎಂದು ಶರದ್ ಪವಾರ್ ಸಮ್ಮತಿಸಿದ್ದಾರೆ ಎಂದು ತಿಳಿದು ಬಂದಿದೆ.

34 ಶಿವಸೇನೆ ಶಾಸಕರ ಸಹಿ ಏಕನಾಥ್ ಶಿಂಧೆಗೆ ಬೆಂಬಲವನ್ನು ನೀಡಿದ್ದು, ಸೂರತ್‌ನಿಂದ ಹಿಂತಿರುಗಿದ ನಿತಿನ್ ದೇಶಮುಖ್ ಅವರು ಪತ್ರಕ್ಕೆ ಸಹಿ ಮಾಡಿಲ್ಲ ಮತ್ತು ಅವರು ಠಾಕ್ರೆಗೆ ನಿಷ್ಠರಾಗಿದ್ದರು ಎಂದು ಹೇಳಿದ್ದಾರೆ. ಉದ್ಧವ್ ಭಾವನಾತ್ಮಕ ಭಾಷಣಕ್ಕೆ ಏಕನಾಥ್ ಶಿಂಧೆ ಉತ್ತರಿಸಿದ್ದು, ನಾವು ಯಾರನ್ನು ಗುರಿಯಾಗಿಸಿಲ್ಲ, ನಮಗೆ ಮಹಾರಾಷ್ಟ್ರ ಹಾಗೂ ಶಿವಸೇನಾ ಹಿತ ಮುಖ್ಯ, ಅಪವಿತ್ರ ಮೈತ್ರಿ ಕೊನೆಗೊಳ್ಳಬೇಕು ಎಂದಿದ್ದಾರೆ.

Maharashtra Poitical Crisis: Crucial meeting between CM Uddhav Thackeray, NCP chief Sharad Pawar and Supriya Sule

ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಒಟ್ಟು 288 ಸ್ಥಾನಗಳಿದ್ದು, ಒಬ್ಬ ಶಾಸಕರು ವಿಧಿವಶವಾದ ಹಿನ್ನೆಲೆ ಈ ಸಂಖ್ಯೆಯು 287ಕ್ಕೆ ತಗ್ಗಿದೆ. ಹೀಗಾಗಿ ಸರ್ಕಾರದ ಬಹುಮತಕ್ಕೆ ಕನಿಷ್ಠ 144 ಸ್ಥಾನಗಳು ಬೇಕಾಗುತ್ತದೆ. ಬಿಜೆಪಿಯು 106 ಶಾಸಕರನ್ನು ಹೊಂದುವ ಮೂಲಕ ಅತಿದೊಡ್ಡ ಪಕ್ಷವಾಗಿದೆ. ಆದರೆ 55 ಶಾಸಕರನ್ನು ಹೊಂದಿರುವ ಶಿವಸೇನೆ, 53 ಶಾಸಕರನ್ನು ಹೊಂದಿರುವ ಎನ್ ಸಿಪಿ ಮತ್ತು 44 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಜೊತೆ ಮೂವರು ಶಾಸಕರನ್ನು ಹೊಂದಿರುವ ಬಹುಜನ ವಿಕಾಸ ಅಘಾಡಿ ಪಕ್ಷಗಳು ಒಟ್ಟಾಗಿ ಸೇರಿಕೊಂಡು ಮಹಾ ವಿಕಾಸ ಅಘಾಡಿ ಎಂದ ಸಮ್ಮಿಶ್ರ ಸರ್ಕಾರವನ್ನು ರಚಿಸಿವೆ.

ಮಹಾ ವಿಕಾಸ ಅಘಾಡಿ ಒಕ್ಕೂಟವು 169 ಶಾಸಕರ ಬೆಂಬಲವನ್ನು ಹೊಂದಿದೆ. ಇನ್ನೊಂದು ಮಗ್ಗಲಿನಲ್ಲಿ ಬಿಜೆಪಿಯು 106 ಸ್ಥಾನಗಳ ಜೊತೆಗೆ ಮಿತ್ರಪಕ್ಷಗಳು ಹಾಗೂ ಐದು ಇತರೆ ಶಾಸಕರು ಸೇರಿದಂತೆ ಒಟ್ಟು 113 ಶಾಸಕರ ಬೆಂಬಲವನ್ನು ಹೊಂದಿದೆ.

English summary
Maharashtra Poitical Crisis: The meeting between Maharashtra CM Uddhav Thackeray, NCP chief Sharad Pawar, and Supriya Sule concludes at the CM's residence in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X