• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈದ್ಯರ ರಕ್ಷಣೆ ಕುರಿತು ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿಲ್ಲ: ಹೈಕೋರ್ಟ್

|
Google Oneindia Kannada News

ಮುಂಬೈ, ಮೇ 19: ಮಹಾರಾಷ್ಟ್ರ ಸರ್ಕಾರವು ತಮ್ಮ ವೈದ್ಯರನ್ನು ರಕ್ಷಿಸುವ ಬಗ್ಗೆ ಗಂಭೀರವಾಗಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಕೊರೊನಾ ಸೋಂಕಿತರ ಸಂಬಂಧಿಯಿಂದ ನಿತ್ಯ ಹಲವು ವೈದ್ಯರು ಹಲ್ಲೆಗೊಳಗಾಗುತ್ತಿದ್ದಾರೆ. ಆದರೆ ಅವರ ರಕ್ಷಣೆಗೆ ಸರ್ಕಾರ ಮುಂದಾಗದೆ ಇರುವುದೇ ವಿಪರ್ಯಾಸ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಮುಂಬೈನಲ್ಲಿ 953 ಕೊರೊನಾ ಸೋಂಕಿತರು ಪತ್ತೆ, ಮಾರ್ಚ್ 2ರ ಬಳಿಕ ಕಡಿಮೆ ಪ್ರಕರಣಮುಂಬೈನಲ್ಲಿ 953 ಕೊರೊನಾ ಸೋಂಕಿತರು ಪತ್ತೆ, ಮಾರ್ಚ್ 2ರ ಬಳಿಕ ಕಡಿಮೆ ಪ್ರಕರಣ

ನ್ಯಾ. ದೀಪಾಂಕರ್ ದತ್ತ ಹಾಗೂ ನ್ಯಾ. ಜಿಎಸ್ ಕುಲಕರ್ಣಿ ಅವರ ಪೀಠವು ರಾಜ್ಯ ಆರೋಗ್ಯ ಇಲಾಖೆಯ ಉಪ ಕಾರ್ಯದರ್ಶಿ ಮೇ 13 ರಂದು ಹೈಕೋರ್ಟ್‌ಗೆ ಸಲ್ಲಿಸಿದ್ದ ಅಫಿಡೆವಿಟ್ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದೆ.

ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆದ ಬಳಿಕ ದಾಖಲಾದ ಎಫ್‌ಐಆರ್‌ಗಳ ಬಗ್ಗೆ ಹಾಗೂ ವೈದ್ಯರನ್ನು ರಕ್ಷಿಸಲು ಕೈಗೊಂಡ ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಹೇಳಿತ್ತು.

ರಾಜ್ಯಾದ್ಯಂತ ಒಟ್ಟು 436 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದೆ ಆದರೆ, ಪ್ರಕರಣಗಳ ಸಮಯ ಹಾಗೂ ವಿವರಗಳನ್ನು ನೀಡಲು ಸರ್ಕಾರ ವಿಫಲವಾಗಿದೆ. ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ ಕೇವಲ 953 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಮಾರ್ಚ್ 2ರ ಬಳಿಕ ಪತ್ತೆಯಾದ ಅತಿ ಕಡಿಮೆ ಪ್ರಕರಣ ಇದಾಗಿದೆ, ಕಳೆದ ಹತ್ತು ವಾರಗಳಿಂದ ಸಾವಿರಕ್ಕೂ ಕಡಿಮೆ ಪ್ರಕರಣಗಳು ದಾಖಲಾಗಿರಲಿಲ್ಲ.

ಏಪ್ರಿಲ್‌ನಿಂದ ಮಹಾರಾಷ್ಟ್ರದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇತ್ತು, ಮಂಗಳವಾರ 953 ಪ್ರಕರಣಗಳು ಪತ್ತೆಯಾಗಿವೆ. ತೌಕ್ತೆ

ಮಂಗಳವಾರ 44 ಮಂದಿ ಸಾವನ್ನಪ್ಪಿದ್ದಾರೆ, ಮುಂಬೈನಲ್ಲಿ ಪಾಸಿಟಿವಿಟಿ ದರ ಶೇ.5.31ರಷ್ಟಿದೆ. ಏಪ್ರಿಲ್‌ಗೆ ಹೋಲಿಸಿದರೆ ಕಡಿಮೆ ಇದೆ.ಚೇತರಿಕೆ ಪ್ರಮಾಣ ಕೂಡ ಶೇ..93ರಷ್ಟಿದ್ದು ಹೆಚ್ಚಾಗಿದೆ, ಮಾರ್ಚ್ 2 ರಂದು ಮುಂಬೈನಲ್ಲಿ 849 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು.

ಮುಂದಿನ ಕೆಲವು ದಿನಗಳಲ್ಲಿ ಅತಿ ಹೆಚ್ಚು ಸೋಂಕಿತರು ಕಂಡುಬಂದಿದ್ದರು. ಮಹಾರಾಷ್ಟ್ರದಲ್ಲಿ ನಿತ್ಯ 50 ಸಾವಿರಕ್ಕೂ ಹೆಚ್ಚು ಪರೀಕ್ಷೆಗಳನ್ನು ಮಾಡಿಸಲಾಗುತ್ತಿದೆ, ನಗರಪಾಲಿಕೆಗಳು ನಿತ್ಯ 20 ರಿಂದ 25 ಸಾವಿರ ಪರೀಕ್ಷೆಗಳನ್ನು ಮಾಡುತ್ತಿವೆ.

English summary
The Maharashtra government doesn't seem "serious" about protecting its doctors against attacks by family members of patients, the Bombay High Court said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X