ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಘಟಬಂಧನಕ್ಕೆ ಶಾಕ್! ಶಿವಸೇನೆ ತೆಕ್ಕೆಗೆ ಎನ್ ಸಿಪಿ ಮುಖಂಡ

|
Google Oneindia Kannada News

Recommended Video

Exit Poll 2019: ಕಾಂಗ್ರೆಸ್‍ಗೆ ಫಲಿತಾಂಶಕ್ಕೂ ಮೊದಲೇ ಶಾಕ್ ಕೊಟ್ಟ ಎನ್‍ಸಿಪಿ ಮುಖಂಡ

ಮುಂಬೈ, ಮೇ 22: ಅತ್ತ ಎನ್ ಸಿಪಿ ನಾಯಕ ಶರದ್ ಪವಾರ್ ಅವರು ಎನ್ ಡಿಎಯೇತರ ಪಕ್ಷಗಳನ್ನೆಲ್ಲ ಒಗ್ಗೂಡಿಸಲು ಹರಸಾಹಸ ಪಡುತ್ತಿದ್ದರೆ, ಇತ್ತ ಎನ್ ಸಿಪಿ ನಾಯಕರೊಬ್ಬರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಪಕ್ಷಕ್ಕೆ ಶಾಕ್ ನೀಡಿದ್ದಾರೆ.

ಎನ್ ಸಿಪಿ ನಾಯಕ ಜಯದತ್ ಕ್ಷೀರಸಾಗರ್ ಅವರು ಎನ್ ಸಿಪಿ ತೊರೆದು ಬುಧವಾರ ಸಂಜೆ ಶಿವಸೇನೆಯನ್ನು ಸೇರಲಿದ್ದಾರೆ.

ಫಲಿತಾಂಶಕ್ಕೆ ಒಂದೇ ದಿನ ಬಾಕಿ, ವಿಪಕ್ಷಗಳಿಂದ ಕೊನೆಯ ಪ್ರಯತ್ನ!ಫಲಿತಾಂಶಕ್ಕೆ ಒಂದೇ ದಿನ ಬಾಕಿ, ವಿಪಕ್ಷಗಳಿಂದ ಕೊನೆಯ ಪ್ರಯತ್ನ!

ಚುನಾವಣೋತ್ತರ ಸಮೀಕ್ಷೆಗಳು ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮತ್ತೊಮ್ಮೆ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದಿದ್ದು, ಈ ಕಾರಣದಿಂದಲೇ ಜಯದತ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Maharashtra: NCP MLA resigns after Exit poll, to join Shiv Sena

ಪಕ್ಷದಲ್ಲಿ ತನ್ನನ್ನು ಕಡೆಗಣಿಸಲಾಗಿದೆ ಎಂದು ದೂರಿರುವ ಜಯದತ್, ಇತ್ತೀಚೆಗೆ ಒಮ್ಮೆ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿದ್ದರು. ಅವರು ಶಿವಸೇನೆ ಸೇರಬಹುದು ಎಂಬ ವದಂತಿ ಅಂದಿನಿಂದಲೂ ಹಬ್ಬಿತ್ತು.

ಮಹಾಘಟಬಂಧನಕ್ಕೆ ಜಗನ್ ರೆಡ್ಡಿ, ಕೆಸಿಆರ್: ಮಾತುಕತೆಗೆ ಕಮಲ್ ನಾಥ್ಮಹಾಘಟಬಂಧನಕ್ಕೆ ಜಗನ್ ರೆಡ್ಡಿ, ಕೆಸಿಆರ್: ಮಾತುಕತೆಗೆ ಕಮಲ್ ನಾಥ್

ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಎನ್ ಡಿಎಯೇತರ ಪಕ್ಷಗಳನ್ನು ಒಗ್ಗೂಡಿಸುವ ಸಲುವಾಗಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಜಗನ್ಮೋಹನ್ ರೆಡ್ಡಿ ಅವರನ್ನೂ ಭೇಟಿ ಮಾಡು ಮಾತುಕತೆ ನಡೆಸಲಿದ್ದಾರೆ.

English summary
Jaydutt Kshirsagar, NCP leader and former Maharashtra Minister, has resigned from MLA post; he will join Shiv Sena later today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X