ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ: 250 ನಾಯಿಗಳನ್ನು ಕೊಂದು ಸೇಡು ತೀರಿಸಿಕೊಂಡ ಕೋತಿಗಳು

|
Google Oneindia Kannada News

ಮುಂಬೈ ಡಿಸೆಂಬರ್ 19: ಮಂಗಗಳು ತುಂಬಾ ಚೇಷ್ಟೆ ಮಾಡುತ್ತವೆ ಎನ್ನುವುದು ತಿಳಿದಿರುವ ವಿಚಾರ. ಆದರೆ ಮಂಗಗಳು ಕೂಡ ಸೇಡು ತೀರಿಸಿಕೊಳ್ಳಬಹುದು ಎಂದು ಇತ್ತೀಚೆಗೆ ಬಂದ ವರದಿಯಿಂದ ತಿಳಿದುಬಂದಿದೆ. ಮಹಾರಾಷ್ಟ್ರದಿಂದ ವರದಿಯಾಗಿರುವ ಅತ್ಯಂತ ಆಘಾತಕಾರಿ ಘಟನೆವೊಂದರಲ್ಲಿ ಮಂಗಗಳು ಸೇಡು ತೀರಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಕೋತಿಗಳ ಸೇಡಿಗೆ ಒಂದಲ್ಲ ಎರಡಲ್ಲ ಬರೊಬ್ಬರಿ 250 ನಾಯಿಗಳು ಬಲಿಯಾಗಿವೆ.

ರಾಜ್ಯದ ಬೀಡ್ ಜಿಲ್ಲೆಯ ಮಜಲಗಾಂವ್‌ ಕೋತಿಗಳ ಗುಂಪು ಸೇಡು ತೆಗೆದುಕೊಳ್ಳಲು ಸುಮಾರು 250 ನಾಯಿಗಳನ್ನು ಕೊಂದಿದೆ ಎಂದು ಆರೋಪಿಸಲಾಗಿದೆ. ನಾಯಿಮರಿಗಳನ್ನು ಬೀದಿ ಬೀದಿಗಳಿಂದ ಹಿಡಿದು ಮರ ಹಾಗೂ ಕಟ್ಟಡಗಳ ಮೇಲಿನಿಂದ ಬೀಸಾಡಿ ಮಂಗಗಳು ಸಾಯಿಸಿವೆ ಎನ್ನಲಾಗಿದೆ. ಸ್ಥಳೀಯರ ಹೇಳಿಕೆಯಂತೆ ನಾಯಿಗಳ ಹಿಂಡು ಮಂಗನ ಶಿಶುವನ್ನು ಹಿಡಿದು ಕೊಂದಿದೆ. ಇದರ ಸೇಡು ತೀರಿಸಿಕೊಳ್ಳಲು ಮಂಗಗಳು ನಾಯಿ ಮರಿಗಳನ್ನು ಕೊಂದಿವೆ ಎಂದು ಆರೋಪಿಸಿದ್ದಾರೆ.

ನಾಯಿಗಳ ಹಿಂಡು ಕೋತಿ ಮರಿಯನ್ನು ಹಾಗೂ ಕೋತಿಗಳು ನಾಯಿ ಮರಿಗಳನ್ನು ಹಿಡಿದೊಯ್ಯುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ದಾಳಿಯನ್ನು ಖಚಿತಪಡಿಸಲು ಸಾಮಾಜಿಕ ಮಾಧ್ಯಮದಲ್ಲಿ ಚಿತ್ರಗಳು ಹರಿದಾಡುತ್ತಿವೆ. ಒಂದರಲ್ಲಿ ಛಾವಣಿಯ ಮೇಲೆ ಕಟ್ಟಡದ ಅಂಚಿಗೆ ನಾಯಿಮರಿಯನ್ನು ಹೊತ್ತೊಯ್ಯುತ್ತಿರುವ ಕೋತಿಯನ್ನು ಕಾಣಬಹುದು.

Maharashtra: Monkeys killing 250 dogs and taking revenge

ನಾಯಿಮರಿಗಳ ಸಂಖ್ಯೆ ಕಡಿಮೆಯಾದ ನಂತರ ಕೋತಿಗಳು ಶಾಲೆಗೆ ಹೋಗುವ ಮಕ್ಕಳ ಮೇಲೆ ತಮ್ಮ ಕೋಪವನ್ನು ತೀರಿಸಿಕೊಳ್ಳಲು ಮುಂದಾಗಿ ಎಂದು ಸಾಕ್ಷಿಗಳು ಹೇಳುತ್ತವೆ. ನಾಯಿಗಳನ್ನು ಸುತ್ತುವರೆದಿರುವ ಮಂಗಗಳು ಅವುಗಳನ್ನು ಎತ್ತರದ ಸ್ಥಳಗಳಿಗೆ ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ ಎಂದು ಗ್ರಾಮಸ್ಥರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಘಟನೆ ಕುರಿತು ಗ್ರಾಮದ ನಿವಾಸಿಗಳು ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ಆ ಪ್ರದೇಶದಲ್ಲಿ ಮಂಗಗಳನ್ನು ಹಿಡಿಯುವಂತೆ ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಒಂದು ದಿನ ಬಂದರೂ ಒಂದೇ ಒಂದು ಕೋತಿಯನ್ನು ಹಿಡಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಲ್ಲಿಂದ ತೆರಳಿದ್ದಾರೆ.

ಅಧಿಕಾರಿಗಳು ಸಮಸ್ಯೆಯನ್ನು ನಿಭಾಯಿಸಲು ವಿಫಲವಾದ ನಂತರ, ಗ್ರಾಮಸ್ಥರು ನಾಯಿಗಳನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರು ನಾಯಿಗಳ ರಕ್ಷಣೆ ಮಾಡಿದಾಗ, ಕೋತಿಗಳು ಗ್ರಾಮಸ್ಥರ ಪ್ರಯತ್ನಗಳಿಗೆ ವಿರುದ್ಧವಾಗಿ ದಾಳಿಗೆ ಮುಂದಾಗಿವೆ. ನಾಯಿಗಳನ್ನು ಉಳಿಸಲು ಪ್ರಯತ್ನಿಸುವಾಗ ಕೆಲವು ಪುರುಷರು ಎತ್ತರದ ಕಟ್ಟಡಗಳಿಂದ ಬಿದ್ದಿದ್ದಾರೆ ಎಂದು ಸುದ್ದಿ ಕೇಂದ್ರ ವರದಿ ಮಾಡಿದೆ. ಇದು ಗ್ರಾಮಸ್ಥರಿಗೆ ಎಷ್ಟು ಭಯಾನಕವಾಗಿದೆ ಎಂದು ಊಹಿಸಲು ಸಾಧ್ಯವಿಲ್ಲ ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.

ಕೋತಿಗಳು ನಾಯಿಗಳನ್ನು ಕಟ್ಟಡಗಳ ಮೇಲೆ ಹೊತ್ತುಕೊಂಡು ಹೋಗುವುದನ್ನು ತಡೆದರೆ ಗ್ರಾಮದಲ್ಲಿರುವ ಮಕ್ಕಳ ಮೇಲೆ ಕೋತಿಗಳು ದಾಳಿ ಮಾಡಬಹುದು ನಾಯಿಗಳಂತೆ ಪುಟ್ಟ ಮಕ್ಕಳನ್ನು ಹೊತ್ತು ಹೋಗಬಹುದು ಎಂದು ಭಯಪಡಲಾಗುತ್ತಿದೆ. ನಾಯಿ ರಕ್ಷಗೆ ಮುಂದಾದ ಗ್ರಾಮಸ್ಥರ ಮೇಲೆ ಪ್ರತಿ ದಾಳಿ ಮಾಡಲು ಮಂಗವೊಂದು ಹಿಂಬಾಲಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಈಗಾಗಲೇ ಗ್ರಾಮದಲ್ಲಿ ನಾಯಿಗಳ ಸಂಖ್ಯೆ ಕಡಿಮೆ ಮಾಡಿರುವ ಮಂಗಗಳು ಮಕ್ಕಳ ಮೇಲೆ ದಾಳಿಗೆ ಮುಂದಾಗಿ ಹೀಗಾಗಿ ಗ್ರಾಮದ ಜನ ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೋತಿಗಳನ್ನು ಹಿಡಿಯುವಲ್ಲಿ ವಿಫಲರಾಗಿ ಹಿಂದಿರುಗಿದ್ದಾರೆ. ಪುನ: ಗ್ರಾಮಕ್ಕೆ ಬಂದು ಅಧಿಕಾರಿಗಳನ್ನು ಹಿಡಿದುಕೊಂಡು ಹೋಗಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಆದರೆ ದೊಡ್ಡ ದೊಡ್ಡ ಕೋತಿಗಳು ಹಿಡಿಯುವುದು ಸುಲಭದ ಮಾತಲ್ಲ. ಇದರಲ್ಲಿ ಒಂದನ್ನ ಹಿಡಿದು ಉಳಿದ ಕೋತಿಗಳನ್ನು ಬಿಟ್ಟರೂ ಕೋತಿಗಳ ಗುಂಪು ಜನರ ಮೇಲೆ ದಾಳಿ ಮಾಡಲು ಸಾಧ್ಯತೆ ಹೆಚ್ಚಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಒಂದೇ ಸಲ ಕೋತಿಗಳನ್ನು ಸೆರೆಹಿಡಿಯಬೇಕು ಎಂದು ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆ ಸುಮಾರು 30ಕ್ಕೂ ಹೆಚ್ಚು ಕೋತಿಗಳ ಗುಂಪೊಂದನ್ನು ಮೂರು ಗಂಟೆಗಳ ಬಳಿಕ ಬಲೆಗೆ ಬೀಳಿಸಿದೆ. ಗ್ರಾಮದಿಂದ ಸುಮಾರು 22 ಕಿಲೋಮೀಟರ್ ದೂರದಲ್ಲಿರುವ ಬಾಳೂರು ಅರಣ್ಯದಲ್ಲಿ ಕೋತಿಯನ್ನು ಬಿಡಲಾಗಿದೆ.

English summary
One of the most traumatic incidents reported by Maharashtra has come to light when monkeys take revenge. 250 dogs were killed by monkeys.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X