ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಎಂಎಲ್‌ಸಿ ಚುನಾವಣೆ: ಅಲುಗಾಡಿದ ಠಾಕ್ರೆ ಸರ್ಕಾರ

|
Google Oneindia Kannada News

ಮುಂಬೈ, ಜೂ. 21: ಮಹಾರಾಷ್ಟ್ರ ವಿಧಾನ ಪರಿಷತ್‌ ಚುನಾವಣೆ ಶಿವಸೇನೆಯ ಉದ್ಧವ್ ಠಾಕ್ರೆ ಸರ್ಕಾರಕ್ಕೆ ದೊಡ್ಡ ಆಘಾತವಾಗಿ ಮಾರ್ಪಟ್ಟಿದೆ. ನಗರಾಭಿವೃದ್ಧಿ ಸಚಿವ ಮತ್ತು ಶಿವಸೇನೆ ನಾಯಕ ಏಕನಾಥ್ ಶಿಂಧೆ ಮತ್ತು ಅವರಿಗೆ ನಿಷ್ಠರಾಗಿರುವ 11 ಶಾಸಕರು ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದು, ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎಂಬ ಸುದ್ದಿ ಹಬ್ಬಿದೆ.

ಆದರೆ, ಏಕನಾಥ್‌ ಶಿಂಧೆ ಮತ್ತು ಇತರ ಶಾಸಕರು ಗುಜರಾತ್‌ನ ಸೂರತ್‌ನಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದಾರೆ ಎಂಬ ಮಾಹಿತಿ ಇದೆ. ಸೋಮವಾರ ಸಂಜೆ 7 ಗಂಟೆಗೆ ಅವರು ಖಾಸಗಿ ವಿಮಾನದಲ್ಲಿ ಗುಜರಾತ್‌ಗೆ ನಗರಕ್ಕೆ ಬಂದರು ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರಪತಿ ಚುನಾವಣೆ ಬಿಜೆಪಿ ಅಭ್ಯರ್ಥಿ ಘೋಷಣೆ ಸಾಧ್ಯತೆ ರಾಷ್ಟ್ರಪತಿ ಚುನಾವಣೆ ಬಿಜೆಪಿ ಅಭ್ಯರ್ಥಿ ಘೋಷಣೆ ಸಾಧ್ಯತೆ

ಜೂನ್ 10ರಂದು ನಡೆದ ರಾಜ್ಯಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಮಹಾರಾಷ್ಟ್ರ ವಿಕಾಸ್ ಅಘಾಡಿ ಸಮ್ಮಿಶ್ರ ಸರ್ಕಾರಕ್ಕೆ ವಿಧಾನ ಪರಿಷತ್‌ ಚುನಾವಣೆಗಳು ಮತ್ತೊಂದು ಆಘಾತಕಾರಿಯಾಗಿ ಮಾರ್ಪಟ್ಟಿದೆ.

ಚುನಾವಣೆಯಲ್ಲಿ ಎಲ್ಲಾ ಐದು ಬಿಜೆಪಿ ಅಭ್ಯರ್ಥಿಗಳು ಬಹುಮತ ಕೊರತೆಯ ಹೊರತಾಗಿಯೂ ಚುನಾಯಿತರಾದರು. ಎಂವಿಎ ಕೂಡ ಐದು ಸ್ಥಾನಗಳನ್ನು ಗಳಿಸಿತು. ಹತ್ತನೇ ಸ್ಥಾನಕ್ಕಾಗಿ ಪ್ರಬಲ ಸ್ಪರ್ಧೆ ನಡೆದಿತ್ತು. ಕಾಂಗ್ರೆಸ್‌ನ ಭಾಯಿ ಜಗತಾಪ್ ಮತ್ತು ಬಿಜೆಪಿಯ ಪ್ರಸಾದ್ ಲಾಡ್ ಇಬ್ಬರೂ ಗೆದ್ದಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿತು.

ಡಿಜಿಟಲ್ ಯೋಗ ಪ್ರದರ್ಶನ ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಯೋಗ ಪ್ರದರ್ಶನ ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ

ಕಾಂಗ್ರೆಸ್‌ನ ಮೊದಲ ಪ್ರಶಸ್ತ್ಯದ ಅಭ್ಯರ್ಥಿ ಹಂದೋರ್ ಅವರು 10 ಸ್ಥಾನಕ್ಕೆ ಸ್ಪರ್ಧಿಸಿ ಅನಿರೀಕ್ಷಿತ ಸೋಲನ್ನು ಅನುಭವಿಸಿದರು. ಎಂಎಲ್‌ಸಿ ಚುನಾವಣೆಯಲ್ಲಿ ಬಿಜೆಪಿ 20 ಹೆಚ್ಚುವರಿ ಮತಗಳನ್ನು ಪಡೆದಿದೆ. ಇದು ಉದ್ಧವ್ ಠಾಕ್ರೆ ಸರ್ಕಾರವನ್ನು ಪದಚ್ಯುತಗೊಳಿಸಲು ಬೇಕಾದ ಸಂಖ್ಯೆಗಿಂತ 11 ಕಡಿಮೆಯಾಗಿದೆ. ಈಗ 11 ಶಾಸಕರೊಂದಿಗೆ ಏಕನಾಥ್‌ ಶಿಂಧೆ ಸೂರತ್‌ಗೆ ತೆರಳಿರುವುದು ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ಗೆ ಆತಂಕಕಾರಿಯಾಗಿದೆ.

ಪ್ರಸ್ತುತ ಜೈಲಿನಲ್ಲಿ ಅನಿಲ್ , ನವಾಬ್ ಮಲಿಕ್

ಪ್ರಸ್ತುತ ಜೈಲಿನಲ್ಲಿ ಅನಿಲ್ , ನವಾಬ್ ಮಲಿಕ್

ಎಂಎಲ್‌ಸಿ ಚುನಾವಣೆಯಲ್ಲಿ ಗೆಲ್ಲುಲು ಪ್ರತಿ ಅಭ್ಯರ್ಥಿಗೆ 26 ಮತ ಬೇಕಾಗಿತ್ತು. ಸದ್ಯ ಸಣ್ಣ ಪಕ್ಷಗಳ 29 ಶಾಸಕರು ಅಥವಾ ಸ್ವತಂತ್ರರ ಮತಗಳು ಎರಡೂ ಪಕ್ಷಗಳಿಗೆ ಈಗ ನಿರ್ಣಾಯಕವಾಗಿವೆ. 288 ಸದಸ್ಯ ಬಲದ ಕೆಳಮನೆಯಲ್ಲಿ ಶಿವಸೇನೆಯ ಒಬ್ಬ ಶಾಸಕ ರಮೇಶ್ ಲಟ್ಕೆ ಇತ್ತೀಚೆಗೆ ನಿಧನರಾದರು. ಅಲ್ಲದೆ ಇಬ್ಬರು ಎನ್‌ಸಿಪಿ ಶಾಸಕರಾದ ಅನಿಲ್ ದೇಶಮುಖ್ ಮತ್ತು ನವಾಬ್ ಮಲಿಕ್ ಪ್ರಸ್ತುತ ಜೈಲಿನಲ್ಲಿದ್ದಾರೆ. ಅವರಿಗೆ ಮತದಾನ ಮಾಡಲು ನ್ಯಾಯಾಲಯಗಳು ಅನುಮತಿ ನಿರಾಕರಿಸಿವೆ. ಸದ್ಯ ಎಂವಿಎ ನಾಮನಿರ್ದೇಶಿತರಾದ ಸಚಿನ್ ಅಹಿರ್ ಮತ್ತು ಅಮಾಶಾ ಪಾದ್ವಿ (ಶಿವಸೇನೆ), ರಾಮರಾಜೇ ನಾಯ್ಕ್- ನಿಂಬಾಳ್ಕರ್ ಮತ್ತು ಏಕನಾಥ್ ಖಡ್ಸೆ (ರಾಷ್ಟ್ರೀಯ ಕಾಂಗ್ರೆಸ್ ಪಕ್ಷ) ಮತ್ತು ಭಾಯಿ ಜಗತಾಪ್ (ಕಾಂಗ್ರೆಸ್) ಗೆದ್ದಿದ್ದಾರೆ.

ಎಂವಿಎಗೆ ಇದು ಎರಡನೇ ಪ್ರಮುಖ ಹಿನ್ನಡೆ

ಎಂವಿಎಗೆ ಇದು ಎರಡನೇ ಪ್ರಮುಖ ಹಿನ್ನಡೆ

ಬಿಜೆಪಿಯ ಎಲ್ಲಾ ನಾಮನಿರ್ದೇಶಿತರಾದ ಪ್ರವೀಣ್ ದಾರೆಕರ್, ರಾಮ್ ಶಿಂಧೆ, ಶ್ರೀಕಾಂತ್ ಭಾರತಿಯಾ, ಉಮಾ ಖಪ್ರೆ ಮತ್ತು ಪ್ರಸಾದ್ ಲಾಡ್ ಅವರು ಬಹುಮತ ಕೊರತೆಯಿದ್ದರೂ ಗೆದ್ದಿದ್ದಾರೆ. ಇದೇ ರೀತಿಯಲ್ಲಿ ಬಿಜೆಪಿ ಮೂರು ರಾಜ್ಯಸಭಾ ಸ್ಥಾನಗಳನ್ನು ಗೆದ್ದ ನಂತರ ಎಂವಿಎಗೆ ಇದು ಎರಡನೇ ಪ್ರಮುಖ ಹಿನ್ನಡೆಯಾಗಿದೆ ಎಂದು ಸಾಬೀತಾಗಿದೆ. ಆಡಳಿತ ಮೈತ್ರಿಯಾಗಿರುವ ಮೂರು ಪಕ್ಷಗಳಾದ ಶಿವಸೇನಾ, ಎನ್‌ಸಿಪಿ, ಕಾಂಗ್ರೆಸ್‌ಗೆ ತಲಾ ಒಂದರಂತೆ, ಶಿವಸೇನೆಯ ಎರಡನೇ ಅಭ್ಯರ್ಥಿ ಸೋತಿದ್ದಾರೆ.

ರಹಸ್ಯ ಒಪ್ಪಂದಗಳ ನೀತಿ

ರಹಸ್ಯ ಒಪ್ಪಂದಗಳ ನೀತಿ

ಎಂಎಲ್‌ಸಿ ಚುನಾವಣೆಯಲ್ಲಿ ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದೆ ಮತ್ತು ರಹಸ್ಯ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ಎನ್‌ಸಿಪಿ ಆರೋಪಿಸಿದೆ. ಇದು ಕಾಂಗ್ರೆಸ್‌ನ ಚಂದ್ರಕಾಂತ್ ಹಂದೋರೆ ಬಿಜೆಪಿಯ ಪ್ರಸಾದ್ ಲಾಡ್ ವಿರುದ್ಧ ಸೋಲಲು ಕಾರಣವಾಯಿತು ಎನ್ನಲಾಗಿದೆ. ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿಜೆಪಿ ಜಾರಿ ನಿರ್ದೇಶನಾಲಯದ ಸಹಾಯದಿಂದ ಗೆದ್ದಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಫಲಿತಾಂಶಗಳು ಎಂವಿಎ ಸರ್ಕಾರದ ವಿರುದ್ಧ ಆಡಳಿತಾರೂಢ ಶಾಸಕರಲ್ಲಿ ಅಶಾಂತಿಯನ್ನು ಸೂಚಿಸುತ್ತಿವೆ ಎಂದು ಮಾಜಿ ಸಿಎಂ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಶಾಸಕರ ಅಸಮಾಧಾನದ ಸೂಚನೆ

ಶಾಸಕರ ಅಸಮಾಧಾನದ ಸೂಚನೆ

ರಾಜ್ಯಸಭಾ ಚುನಾವಣೆಯಲ್ಲಿ ನಾವು 123 ಶಾಸಕರ ಮೊದಲ ಪ್ರಾಶಸ್ತ್ಯದ ಮತಗಳನ್ನು ಗೆದ್ದಿದ್ದೆವು. ಸದ್ಯ ಈ ಚುನಾವಣೆಯಲ್ಲಿ ನಾವು 134 ಮತಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇವೆ. ಇದು ರಾಜ್ಯ ಸರ್ಕಾರದ ವಿರುದ್ಧ ಶಾಸಕರ ಅಸಮಾಧಾನದ ಸೂಚನೆಯಾಗಿದೆ ಎಂದು ಫಡ್ನವೀಸ್ ಸುದ್ದಿಗಾರರಿಗೆ ತಿಳಿಸಿದರು. ಬಿಜೆಪಿ ಸಂಖ್ಯಾ ಬಿಕ್ಕಟ್ಟನ್ನು ಹೇಗೆ ನಿವಾರಿಸಿದೆ ಎಂಬುದರ ಕುರಿತು ಮಾತನಾಡಿದ ಫಡ್ನವಿಸ್‌ ಎಂಎಲ್‌ಸಿ ಚುನಾವಣೆಯಲ್ಲಿ ಬಿಜೆಪಿ ತನ್ನ ಐದನೇ ಅಭ್ಯರ್ಥಿಗೆ ಒಂದೇ ಒಂದು ಮತವನ್ನು ಹೊಂದಿರಲಿಲ್ಲ. ಆದರೆ ಆ ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಎಲ್ಲಾ ಸ್ವತಂತ್ರ ಶಾಸಕರು ಮತ್ತು ಸಣ್ಣ ಪಕ್ಷಗಳ ಬೆಂಬಲದಿಂದಾಗಿ ಇದು ಸಾಧ್ಯವಾಯಿತು. ಎಂವಿಎ ಸರ್ಕಾರದ ವಿರುದ್ಧ ನಮ್ಮ ಹೋರಾಟ ಜನರ ಹಿತಕ್ಕಾಗಿ ಆಗಿದೆ. ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್‌ನ (ಇಬ್ಬರು) ಅಭ್ಯರ್ಥಿಗಳು ಗಳಿಸಿದ ಮತಗಳಿಗಿಂತ ಹೆಚ್ಚು ಮತಗಳನ್ನು ಬಿಜೆಪಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.

Recommended Video

Narendra Modi ಕರ್ನಾಟಕ ಪ್ರವಾಸ ಮುಗಿಸಿ ದೆಹಲಿಗೆ ವಾಪಾಸಾದರು | Oneindia Kannada

English summary
The Maharashtra mlc elections have become a major shock to the Shiv Sena's Uddhav Thackeray government. Urban Development Minister and Shiv Sena leader Eknath Shinde and 11 legislators loyal to him have been missing since Monday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X