• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾರಾಷ್ಟ್ರದಲ್ಲಿ ಜುಲೈ, ಆಗಸ್ಟ್‌ನಲ್ಲಿ ಕೊರೊನಾ 3ನೇ ಅಲೆ, ಸಚಿವರ ಎಚ್ಚರಿಕೆ

|

ಮುಂಬೈ, ಏಪ್ರಿಲ್ 30: ಮಹಾರಾಷ್ಟ್ರದಲ್ಲಿ ಜುಲೈ, ಆಗಸ್ಟ್‌ನಲ್ಲಿ ಕೊರೊನಾ 3ನೇ ಅಲೆ ಶುರುವಾಗಬಹುದು ಎಂದು ಸಚಿವ ರಾಜೇಶ್ ಟೋಪೆ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಎರಡನೇ ಅಲೆಯಿಂದ ಮಹಾರಾಷ್ಟ್ರ ಈಗಾಗಲೇ ತೀವ್ರ ಸಂಕಷ್ಟಕ್ಕೆ ಎದುರಾಗಿದೆ, ಮಹಾರಾಷ್ಟ್ರದಲ್ಲಿ ಗುರುವಾರ 66,159 ಪ್ರಕರಣಗಳು ದಾಖಲಾಗಿದ್ದು, 771 ಮಂದಿ ಮೃತಪಟ್ಟಿದ್ದಾರೆ.

ಎಚ್ಚರಿಕೆ ಗಂಟೆ: ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ 3ನೇ ಅಲೆ!ಎಚ್ಚರಿಕೆ ಗಂಟೆ: ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ 3ನೇ ಅಲೆ!

ಕೋವಿಡ್ 19, ನಿರ್ವಹಣೆ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಗುರುವಾರ ಸಭೆ ನಡೆದಿದೆ. ಜಿಲ್ಲಾಧಿಕಾರಿಗಳು, ಆಯುಕ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು. ಮೇ.15ರವರೆಗೂ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ರೀತಿಯ ನಿರ್ಬಂಧಗಳು ಮುಂದುವರೆಸಲು ನಿರ್ಧರಿಸಲಾಗಿದೆ.

ತಜ್ಞರ ಪ್ರಕಾರ ಮಹಾರಾಷ್ಟ್ರವು ಜುಲೈ ಅಥವಾ ಆಗಸ್ಟ್‌ನಲ್ಲಿ ಕೊರೊನಾ ಮೂರನೇ ಅಲೆಯನ್ನು ಎದುರಿಸಬೇಕಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ಆಮ್ಲಜನಕ ಉತ್ಪಾದನಾ ಘಟಕದ ಸ್ಥಾಪನೆ, ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳ ವ್ಯವಸ್ಥೆ, ಜಿಲ್ಲೆಗಳಿಗೆ ಸಿಟಿ ಸ್ಕ್ಯಾನ್ ಮತ್ತು ಎಂಆರ್‌ಐ ಮಷಿನ್‌ಗಳ ಸೌಲಭ್ಯವನ್ನು ಪೂರೈಸಲು ಪ್ರಯತ್ನಿಸಲಾಗುತ್ತಿದೆ ಎಂದು ಟೋಪೆ ಹೇಳಿದ್ದಾರೆ.

ಮೇ ಅಂತ್ಯದ ವೇಳೆಗೆ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕೊಂಚ ಇಳಿಮುಖವಾಗಲಿದೆ. ಒಂದೊಮ್ಮೆ ಜೂನ್ ಅಥವಾ ಆಗಸ್ಟ್‌ ಹೊತ್ತಿಗೆ ಮೂರನೇ ಅಲೆ ಎದುರಾದರೆ , ಪರಿಸ್ಥಿತಿ ನಿರ್ವಹಣೆಯು ಒಂದು ಸವಾಲಾಗಿ ಪರಿಣಮಿಸಲಿದೆ.

ಆ ವೇಳೆಗೆ ರಾಜ್ಯವು ವೈದ್ಯಕೀಯ ಆಮ್ಲಜನಕ ಪೂರೈಕೆಗಾಗಿ ಸ್ವಾಲಂಬಿಯಾಗುವತ್ತ ಪ್ರಯತ್ನ ನಡೆಸಲಿದೆ.
ಗಂಭೀರ ಸ್ಥಿತಿಯಲ್ಲಿರುವ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ರೆಮ್‌ಡೆಸಿವಿರ್ ಲಸಿಕೆ ನನೀಡಲು ಕೊರತೆ ಎದುರಾಗಿದ್ದು, ರಾಜ್ಯಕ್ಕೆ 10 ಸಾವಿರದಿಂದ 15 ಸಾವಿರ ಕೊರತೆಯಿರುವುದಾಗಿ ಹೇಳಿದೆ.

English summary
Still reeling under a deadly second wave of COVID-19, Maharashtra may witness a third wave of the infection in July-August, said health minister Rajesh Tope on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X