ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Viral Video: ಕೆಟ್ಟು ನಿಂತ ಹೊಸ ಸ್ಕೂಟರಿಗೆ "ಕತ್ತೆ"ಯೇ ಸಾರಥಿ!

|
Google Oneindia Kannada News

ಮುಂಬೈ, ಏಪ್ರಿಲ್ 26: ಓಲಾ ಸೇವೆಯಿಂದ ಆಸತ್ತು-ಬೇಸತ್ತು ಹೋದ ವ್ಯಕ್ತಿಯೊಬ್ಬ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕತ್ತೆಯ ಕೊರಳಿಗೆ ಕಟ್ಟಿ ಎಳೆದುಕೊಂಡು ಹೋಗಿರುವ ಘಟನೆಯು ಮಹಾರಾಷ್ಟ್ರದ ಪರ್ಲಿ ವೈಜನಾಥ್ ಎಂಬಲ್ಲಿ ನಡೆದಿದೆ.

ಕೇವಲ 15 ದಿನಗಳ ಹಿಂದೆಯಷ್ಟೇ ಖರೀದಿಸಿದ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕೆಟ್ಟು ನಿಂತಿದ್ದು, ಸರಿಯಾದ ಸೇವೆಯನ್ನು ಒದಗಿಸದ ಕಂಪನಿಯ ವಿರುದ್ಧ ಸಚಿನ್ ಗಿಟ್ಟೆ ಎನ್ನುವವರು ಈ ರೀತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

1,441 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹಿಂಪಡೆದ ಓಲಾ ಎಲೆಕ್ಟ್ರಿಕ್ ಕಂಪನಿ1,441 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹಿಂಪಡೆದ ಓಲಾ ಎಲೆಕ್ಟ್ರಿಕ್ ಕಂಪನಿ

ದೋಷಪೂರಿತ ಇ-ಸ್ಕೂಟರ್‌ಗೆ ಕತ್ತೆಯನ್ನು ಕಟ್ಟಿ, ಕಂಪನಿಯನ್ನು ನಂಬಬೇಡಿ ಎಂದು ಜನರನ್ನು ಒತ್ತಾಯಿಸುವ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳೊಂದಿಗೆ ಬೀದಿಯಲ್ಲಿ ಮೆರವಣಿಗೆ ಮಾಡಿದ್ದಾರೆ. ಕತ್ತೆ ಕೊರಳಿಗೆ ಸ್ಕೂಟರ್ ಅನ್ನು ಕಟ್ಟಿಕೊಂಡು ಬೀದಿ ಎಲ್ಲಾ ಸುತ್ತಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸ್ಕೂಟರ್ ಬುಕ್ಕಿಂಗ್

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸ್ಕೂಟರ್ ಬುಕ್ಕಿಂಗ್

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 20,000 ರೂಪಾಯಿ ಪಾವತಿಸಿದ ಸಚಿನ್ ಗಿಟ್ಟೆ ಬ್ಯಾಟರಿ ಚಾಲಿತ ಸ್ಕೂಟರ್ ಅನ್ನು ಬುಕ್ ಮಾಡಿದ್ದರು. ಜನವರಿ 21, 2022ರಂದು ಅವರು ಉಳಿದ 65,000 ರೂಗಳನ್ನು ಪಾವತಿಸಿದರು. ಮಾರ್ಚ್ 24 ರಂದು ಸ್ಕೂಟರ್‌ನ್ನು ಡೆಲಿವೆರಿ ಮಾಡಲಾಗಿತ್ತು.

ಆರೇ ದಿನಕ್ಕೆ ಕೆಟ್ಟು ಹೋಯಿತು ಓಲಾ ಸ್ಕೂಟರ್!

ಕಂಪನಿಯಿಂದ ಸ್ಕೂಟರ್ ಅನ್ನು ಡೆಲಿವಿರಿ ಪಡೆದಾಗ ಎಲ್ಲವೂ ಸರಿಯಾಗೇ ಇತ್ತು. ಒಂದು ವಾರ ಬೈಕ್ ಏರಿ ಸುತ್ತಾಡಿದ ಸಚಿನ್ ಗಿಟ್ಟೆಗೆ ಏಳನೇ ದಿನ ಅದರ ಹಣೆಬರಹ ಗೊತ್ತಾಗಿದೆ. ಏಳನೇ ದಿನಕ್ಕೇ ಹೊಸ ಸ್ಕೂಟರ್ ಕೆಟ್ಟು ಮೂಲೆ ಸೇರಿತು.

ಸ್ಕೂಟರ್ ರಿಪೇರಿ ಮಾಡುವಲ್ಲಿ ಮೆಕ್ಯಾನಿಕ್ ಕೂಡ ವಿಫಲ

ಬರೋಬ್ಬರಿ 85,000 ರೂಪಾಯಿ ನೀಡಿ ಖರೀದಿಸಿದ ಎಲೆಕ್ಟ್ರಿಕ್ ಸ್ಕೂಟರ್ ಏಳೇ ದಿನಕ್ಕೆ ಮೂಲೆ ಸೇರಿತು. ಅದನ್ನು ರಿಪೇರಿ ಮಾಡುವಂತೆ ಸಚಿನ್ ಅವರು ಕಸ್ಟಮರ್ ಕೇರ್ ಸೆಂಟರ್ ಗೆ ಕಾಲ್ ಮಾಡಿದ್ದರು. ಕಂಪನಿಯು ಕಳುಹಿಸಿದ ಮೆಕ್ಯಾನಿಕ್ ನಿಂದಲೂ ಈ ಸ್ಕೂಟರ್ ಅನ್ನು ರಿಪೇರಿ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಆಕ್ರೋಶಗೊಂಡ ಸಚಿನ್ ಗಿಟ್ಟೆ, ವಿಭಿನ್ನ ರೀತಿಯಲ್ಲಿ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ದೇವರೇ ಸಿಗುವನೇ ಹೊರತೂ, ಈ ಕಂಪನಿಯವರು ಸಿಗುವುದಿಲ್ಲ"

"ನಾನು ಸಂಪೂರ್ಣ ಹಣವನ್ನು ಪಾವತಿಸಿ ಸ್ಕೂಟರ್ ಅನ್ನು ಖರೀದಿಸಿದೆ. ಆದರೆ ಅದು ಏಪ್ರಿಲ್ 8ರಂದು ಕೆಟ್ಟು ನಿಂತಿತು. ನಾನು ಗ್ರಾಹಕರ ಆರೈಕೆ ವಿವರಗಳನ್ನು ಕಂಡು ಕಂಪನಿಯನ್ನು ಸಂಪರ್ಕಿಸಲು ಪ್ರಯತ್ನಿಸಿದೆ, ಆದರೆ ಕಂಪನಿಯು ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ನಾವು ಪ್ರಯತ್ನಿಸಿದರೆ ಆ ದೇವರನ್ನೂ ಹುಡುಕಬಹುದು, ಆದರೆ ಈ ಕಂಪನಿಯ ಜನರನ್ನು ಹುಡುಕಲು ಸಾಧ್ಯವಾಗುವುದಿಲ್ಲ. ಇದೇ ಹತಾಶೆಯಿಂದ ಸ್ಕೂಟರ್ ಅನ್ನು ಸುಟ್ಟು ಹಾಕುವುದಕ್ಕೂ ಒಂದು ಕ್ಷಣ ಯೋಜಿಸಿದ್ದೆ," ಎಂದು ಸಚಿನ್ ಗಿಟ್ಟೆ ಹೇಳಿದ್ದಾರೆ.

"ಅಂತೂ ಇಂತೂ ಹೋಗೋ ಕಂಪನಿಯವರು ಒಬ್ಬ ಮೆಕ್ಯಾನಿಕ್ ಅನ್ನು ಕಳುಹಿಸಿದರು. ಆದರೆ ಅವರು ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗಲಿಲ್ಲ. ನನ್ನ ಸ್ಕೂಟರ್ ಒಂದೆಡೆ ಬಹಳ ಹೊತ್ತು ನಿಂತಿತ್ತು. ಈ ಸ್ಕೂಟರ್ ಯಾವುದೇ ಪ್ರಯೋಜನವಿಲ್ಲ ಎಂದು ನಾನು ಅರಿತುಕೊಂಡೆ. ದ್ವಿಚಕ್ರ ವಾಹನವನ್ನು ಕತ್ತೆ ಎಳೆಯುವ ಪ್ರತಿಭಟನೆಯನ್ನು ಮಾಡಲು ನಿರ್ಧರಿಸಿದೆ. ನಾನು ಇಷ್ಟಕ್ಕೇ ನಿಲ್ಲಿಸುವುದಿಲ್ಲ. ಗ್ರಾಹಕ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತೇನೆ, ಎಂದು ಸಚಿನ್ ಗಿಟ್ಟೆ ಹೇಳಿದ್ದಾರೆ.

 

English summary
Frustrated with the entire experience with Ola, Maharashtra Man Ties Donkey To His Ola Electric Scooter, Parades It Around Town; Video Goes Viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X