India
  • search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking News; ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಇಳಿಸಿದ ಮಹಾರಾಷ್ಟ್ರ ಸರಕಾರ

|
Google Oneindia Kannada News

ಮುಂಬೈ, ಮೇ 22: ಕೇಂದ್ರ ಸರಕಾರ ನಿನ್ನೆ ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಗಣನೀಯವಾಗಿ ಇಳಿಕೆ ಮಾಡಿದ ಬೆನ್ನಲ್ಲೇ ಮಹಾರಾಷ್ಟ್ರ ಸರಕಾರ ಇಂದು ಭಾನುವಾರ ವ್ಯಾಟ್ (Value Added Tax) ತೆರಿಗೆ ಇಳಿಸಿದೆ. ಪೆಟ್ರೋಲ್ ಮೇಲೆ 2.08 ರೂ ಹಾಗೂ ಡೀಸೆಲ್ ಮೇಲೆ 1.44 ರೂ ವ್ಯಾಟ್ ಇಳಿಸುವುದಾಗಿ ಮಹಾರಾಷ್ಟ್ರ ಸರಕಾರ ಘೋಷಣೆ ಮಾಡಿದೆ.

ಇದರೊಂದಿಗೆ ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಬೆಲೆ 11 ರೂಪಾಯಿಗೂ ಹೆಚ್ಚು ಇಳಿಕೆಯಾಗಲಿದೆ. ಡೀಸೆಲ್ ಬೆಲೆ ಎಂಟೂವರೆ ರೂನಷ್ಟು ಇಳಿಯಲಿದೆ. ರಾಜಸ್ಥಾನ ಸರಕಾರ ಕೂಡ ವ್ಯಾಟ್ ಇಳಿಕೆ ನಿರ್ಧಾರ ಪ್ರಕಟಿಸಿದೆ.

ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿತ ಮಾಡಿತ ರಾಜಸ್ಥಾನ ಸರ್ಕಾರ: ಈಗ ಎಷ್ಟಿದೆ ದರ?ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿತ ಮಾಡಿತ ರಾಜಸ್ಥಾನ ಸರ್ಕಾರ: ಈಗ ಎಷ್ಟಿದೆ ದರ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಶನಿವಾರ ಹಲವು ಮಹತ್ವದ ಕ್ರಮಗಳನ್ನು ಪ್ರಕಟಿಸಿದ್ದರು. ಅಡುಗೆ ಅನಿಲದ ಮೇಲೆ ಸಬ್ಸಿಡಿ, ಪೆಟ್ರೋಲ್ ಮೇಲಿನ ಸುಂಕವನ್ನು ಇಳಿಸುವ ಮಹತ್ವದ ನಿರ್ಧಾರಗಳನ್ನು ಘೋಷಿಸಿದ್ದರು. ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 8 ರೂನಷ್ಟು ಇಳಿಕೆ ಮಾಡಲಾಗಿದೆ. ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 6 ರೂ ಇಳಿಕೆ ಮಾಡಲಾಗಿದೆ. ಇದರೊಂದಿಗೆ ಪೆಟ್ರೋಲ್ ದರ ಲೀಟರ್‌ಗೆ 9.5 ರೂನಷ್ಟು ತಗ್ಗಲಿದೆ. ಡೀಸೆಲ್ ಬೆಲೆ 7 ರೂ ಇಳಿಕೆಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಶನಿವಾರ ತಮ್ಮ ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದ್ದರು.

ಇದೇ ಸರಣಿ ಟ್ವೀಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ವಿವಿಧ ರಾಜ್ಯ ಸರಕಾರಗಳಿಗೆ ಪೆಟ್ರೋಲ್, ಡೀಸೆಲ್ ಮೇಲಿನ ಮೌಲ್ಯ ವರ್ಧಿತ ತೆರಿಗೆಯನ್ನು ಇಳಿಸಬೇಕೆಂದು ಮನವಿ ಮಾಡಿದ್ದರು. ಇದಕ್ಕೆ ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ರಾಜ್ಯಗಳ ಪೈಕಿ ಕೇರಳ ಮಾತ್ರ ಪೆಟ್ರೋಲ್ ಮೇಲೆ ವ್ಯಾಟ್ ಇಳಿಕೆ ಮಾಡಿತ್ತು. ಮಹಾರಾಷ್ಟ್ರ ಸೇರಿದಂತೆ ಹಲವು ಸರಕಾರಗಳು ಕೇಂದ್ರದ ಅಬಕಾರಿ ಸುಂಕ ಇಳಿಕೆ ಕ್ರಮವನ್ನು ಹಾಸ್ಯ ಮಾಡಿದವು. ಕೇಂದ್ರ ಸರಕಾರ 2014ಕ್ಕೆ ಮುಂಚೆ ಇದ್ದ ಅಬಕಾರಿ ಸುಂಕ ಪ್ರಮಾಣಕ್ಕೆ ಇಳಿಕೆ ಮಾಡಲಿ ಎಂದು ಕಾಂಗ್ರೆಸ್ ಪಕ್ಷ ಸವಾಲು ಕೂಡ ಹಾಕಿತು. ಇಂದು ಭಾನುವಾರ ಮಹಾರಾಷ್ಟ್ರ ಸರಕಾರ ವ್ಯಾಟ್ ಇಳಿಕೆ ಕ್ರಮ ಕೈಗೊಂಡು ಗಮನ ಸೆಳೆದಿದೆ. ರಾಜಸ್ಥಾನ ಸರಕಾರ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ತೆರಿಗೆಯನ್ನು 2.48 ಮತ್ತು 1.16 ರೂನಷ್ಟು ಇಳಿಕೆ ಮಾಡಿದೆ.

ತೆರಿಗೆ ಕಡಿತ, ಸಹಾಯಧನ ಹಣದುಬ್ಬರದ ವಿರುದ್ದ ಸರ್ಕಾರದ ಸಮರತೆರಿಗೆ ಕಡಿತ, ಸಹಾಯಧನ ಹಣದುಬ್ಬರದ ವಿರುದ್ದ ಸರ್ಕಾರದ ಸಮರ

Maharashtra Joins Rajasthan in Slashing VAT on Petrol and Diesel

ಇನ್ನು, ಬಿಜೆಪಿ ಆಡಳಿತ ಇರುವ ಎಲ್ಲಾ ರಾಜ್ಯಗಳು ಈ ಹಿಂದೆಯೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಇಳಿಕೆ ಮಾಡಿದ್ದವು.

(ಒನ್ಇಂಡಿಯಾ ಸುದ್ದಿ)

English summary
The Maharashtra government has decided to cut the VAT on petrol and diesel a day after the Narendra Modi government announced it would decrease the excise duty on them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X