ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಷಾರ್! ಕಳ್ಳರು ಪಿಪಿಇ ಕಿಟ್ ಧರಿಸಿಯೂ ಬರ್ತಾರೆ

|
Google Oneindia Kannada News

ಮುಂಬೈ, ಜುಲೈ 7: ಕೊರೊನಾ ವೈರಸ್ ಭೀತಿಯಿಂದಾಗಿ ಕಳ್ಳತನ, ದರೋಡೆ ಪ್ರಕರಣಗಳು ಕಡಿಮೆಯಾಗಿದೆ ಎಂದು ಹೇಳಲಾಗುತ್ತಿತ್ತು.

ಆದರೆ ಈಗ ಕಳ್ಳರೂ ಜಾಗೃತರಾಗಿದ್ದಾರೆ ಪಿಪಿಇ ಕಿಟ್ ಧರಿಸಿಯೇ ದರೋಡೆ ಮಾಡಲು ಆರಂಭಿಸಿದ್ದಾರೆ.ಮಹಾರಾಷ್ಟ್ರದ ಸತಾರಾದ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಕಳ್ಳರು ಪಿಪಿಇ ಕಿಟ್ ಧರಿಸಿ ಕೈಚಳಕ ತೋರಿಸಿದ್ದಾರೆ 780 ಗ್ರಾಂ ಚಿನ್ನವನ್ನು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಪೈಜ್ ಜೆಟ್ ಪೈಲಟ್‌ ಹಣೆಗೆ ಗನ್ ಇಟ್ಟು, ಚಾಕುವಿನಿಂದ ಇರಿದು ದರೋಡೆಸ್ಪೈಜ್ ಜೆಟ್ ಪೈಲಟ್‌ ಹಣೆಗೆ ಗನ್ ಇಟ್ಟು, ಚಾಕುವಿನಿಂದ ಇರಿದು ದರೋಡೆ

ಕಳ್ಳತನದ ಬಳಿಕ ಪೊಲೀಸರು ಸಿಸಿಟಿವಿ ವೀಕ್ಷಿಸಿದಾಗ ಪಿಪಿಇ ಕಿಟ್ ಧರಿಸಿದ್ದ ಕಳ್ಳರು ಶೋಕೇಸ್ ಹಾಗೂ ಕಪ್‌ಬೋರ್ಡ್‌ನಲ್ಲಿ ಇರಿಸಿದ್ದ ಚಿನ್ನವನ್ನು ದೋಚಿ ಪರಾರಿಯಾಗಿದ್ದಾರೆ.

Maharashtra Jewellery Shop Looted Robbers Seen In Wearing PPE Kits

ಕಳ್ಳರು ಮಾಸ್ಕ್ ಧರಿಸಿದ್ದರು, ಕಪ್ಪು ಕೋಟ್ ಧರಿಸಿದ್ದರು, ಕೈಗವಸು ಹಾಕಿದ್ದರು. ಪ್ರಕರಣವು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.78 ತೊಲ( ಒಂದು 10 ಗ್ರಾಂ) ಚಿನ್ನ ಕಳ್ಳತನವಾಗಿರುವುದಾಗಿ ಚಿನ್ನದಂಗಡಿ ಮಾಲೀಕರು ತಿಳಿಸಿದ್ದಾರೆ.

ಲಾಕ್‌ಡೌನ್ ಸಡಿಲಗೊಂಡ ಬಳಿಕ ಕಳ್ಳತನ, ದರೋಡೆ ಪ್ರಕರಣಗಳು ಹೆಚ್ಚಾಗಿವೆ. ಮಹಾರಾಷ್ಟ್ರದಲ್ಲಿ 2 ಲಕ್ಷದ 7 ಸಾವಿರ ಕೊರೊನಾ ಸೋಂಕಿತ ಪ್ರಕರಣಗಳಿವೆ. 1 ಲಕ್ಷದ 12 ಸಾವಿರ ಮಂದಿ ಗುಣಮುಖರಾಗಿದ್ದಾರೆ. 8,822 ಮಂದಿ ಸಾವನ್ನಪ್ಪಿದ್ದಾರೆ.

English summary
Burglars wearing personal protective equipment (PPE) kits broke into a jewellery shop in Maharashtra's Satara district and walked away with 780 grams of gold, police said today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X