ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಶ್ಲೀಲ ಜಾಹಿರಾತು ಪ್ರಚೋದನಕಾರಿ, ರೇಪ್ ತಡೆಯಲಾಗದು'

By Srinath
|
Google Oneindia Kannada News

ಮುಂಬೈ, ಜೂನ್ 11: ಮಹಾರಾಷ್ಟ್ರದ ಗೃಹಸಚಿವ ಆರ್ ಆರ್ ಪಾಟೀಲ್ ಮತ್ತೊಮ್ಮೆ ತಮ್ಮ ಸ್ಥಾನದ ಜವಾಬ್ದಾರಿಯನ್ನು ಮರೆತು ವಿವಾದಾತ್ಮಕ/ಪ್ರಚೋದನಕಾರಿ ಹೇಳಿಕೆ ನೀಡಿ, ಕೆಂಗಣ್ಣಿಗೆ ಗುರಿಯಾಗಿದ್ದಾರೆ. 'ಅಶ್ಲೀಲ ಜಾಹೀರಾತು ಪ್ರಚೋದನಕಾರಿ, ಅದು ಮಹಿಳೆಯರ ಮೇಲೆ ಅಪರಾಧಗಳಿಗೆ ಕಾರಣೀಭೂತವಾಗಿದೆ. ಹಾಗೆಯೇ, ಅತ್ಯಾಚಾರವನ್ನು ತಡೆಯಲಾಗದು' ಎಂದು ಗೃಹ ಸಚಿವ ಪಾಟೀಲ್ ಇಂದು ಹೇಳಿದ್ದಾರೆ.

ತನ್ಮೂಲಕ, ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯವೆಸುಗುವವರ ವಿರುದ್ಧ ಹೋರಾಡಲು ಸಾಧ್ಯವಾಗದು ಎಂದು ಮಹಾರಾಷ್ಟ್ರದ ಗೃಹಸಚಿವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

maharashtra-home-minister-rr-patil-claimed-that-rapes-cant-be-stopped

ಇಂದು ಬುಧವಾರ ಮಾಧ್ಯಮದವರೆದುರು ಮಾತನಾಡಿದ ಆರ್ ಆರ್ ಪಾಟೀಲ್, ನಾವು ಒಂದೊಂದು ಮನೆಗೂ ಒಬ್ಬೊಬ್ಬ ಪೊಲೀಸರನ್ನು ನೇಮಕ ಮಾಡಿದರೂ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಹತ್ತಿಕ್ಕಲಾಗದು ಎಂದು ವಿಷಾದದಿಂದ ಹೇಳಿದರು. ಜತೆಗೆ, ಟಿವಿಗಳಲ್ಲಿ ಬರುತ್ತಿರುವ ಅಶ್ಲೀಲ ಜಾಹೀರಾತುಗಳು ಪ್ರಚೋದನಕಾರಿಯಾಗಿವೆ. ಇವು ಅತ್ಯಾಚಾರ ಮಾಡುವವರಿಗೆ ಪ್ರಚೋದನಕಾರಿಯಾಗಿವೆ' ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಆರ್ ಆರ್ ಪಾಟೀಲರಿಂದ ಇಂತಹ ಹೇಳಿಕೆ ಹೊರಬೀಳುತ್ತಿದ್ದಂತೆ ವ್ಯಾಪಕ ಟೀಕೆಗಳು ಹರಿದುಬರುತ್ತಿವೆ. 'ಮಹಾರಾಷ್ಟ್ರದ ಗೃಹ ಸಚಿವರು ಅಸಮರ್ಥರು ಎಂಬುದು ಸಾಬೀತಾಗಿದೆ. ಅವರು ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದಾರೆ. ಇಂತಹವರಿಂದ ಕಾನೂನು ಸುವ್ಯವಸ್ಥೆ ಪಾಲಿಸಲಾಗದು' ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

English summary
Maharashtra Home Minister RR Patil claimed that rapes can't be stopped. He said, "Even if we provide one policeman per house we can't stop crimes against women." He, however, blamed the advertisements which are aired on television. Patil said, "Rise in atrocities against women due to obscene images used in advertisements."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X