ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಲಸಿಕೆ ಹಂಚಿಕೆಯಲ್ಲಿ ತಾರತಮ್ಯ: ಬಿಜೆಪಿ ಆಡಳಿತದ ರಾಜ್ಯಗಳಿಗೆ ಹೆಚ್ಚು ಡೋಸ್ ಪೂರೈಕೆ

|
Google Oneindia Kannada News

ಮುಂಬೈ, ಏಪ್ರಿಲ್ 8: ಕೊರೊನಾ ವೈರಸ್ ಲಸಿಕೆಗಳ ವಿತರಣೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ಆರೋಪಿಸಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಲಸಿಕೆಗಳನ್ನು ಕಳುಹಿಸುವ ಮೂಲ ಮಲತಾಯಿ ಧೋರಣೆ ಪ್ರದರ್ಶಿಸುತ್ತಿದೆ ಎಂದು ಅವರು ದೂರಿದ್ದಾರೆ.

ಕೋವಿಡ್ ಸಾಂಕ್ರಾಮಿಕಕ್ಕೆ ದೇಶದಲ್ಲಿಯೇ ಅತ್ಯಂತ ಹೊಡೆತಕ್ಕೆ ತುತ್ತಾಗಿರುವ ಮಹಾರಾಷ್ಟ್ರದಲ್ಲಿ ಕೋವಿಡ್ ಲಸಿಕೆಗಳ ಕೊರತೆ ಉಂಟಾಗಿದೆ ಎಂದು ರಾಜೇಶ್ ತೋಪೆ ಬುಧವಾರ ಹೇಳಿದ್ದರು. ಆದರೆ ಲಸಿಕೆಗಳ ಕೊರತೆಯಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಪ್ರತಿಕ್ರಿಯಿಸಿದ್ದರು.

ದೇಶದಲ್ಲಿ ಕೋವಿಡ್ ಲಸಿಕೆಗೆ ಕೊರತೆ ಉಂಟಾಗಿಲ್ಲ: ಕೇಂದ್ರ ಸರ್ಕಾರದೇಶದಲ್ಲಿ ಕೋವಿಡ್ ಲಸಿಕೆಗೆ ಕೊರತೆ ಉಂಟಾಗಿಲ್ಲ: ಕೇಂದ್ರ ಸರ್ಕಾರ

'ನಮಗೆ ಹೆಚ್ಚುವರಿ ಲಸಿಕೆ ಸಂಗ್ರಹ ದೊರಕಿದೆ ಎಂಬ ಮಾಹಿತಿ ಈಗಷ್ಟೇ ಬಂದಿದೆ. ಈಗ ನಮ್ಮ ಬಳಿ 17 ಲಕ್ಷ ಡೋಸ್ ಲಸಿಕೆ ಇದೆ. ಆದರೆ ನಾವು ಮಾಡಿರುವ 40 ಲಕ್ಷ ಡೋಸ್ ಲಸಿಕೆಗೆ ಹೋಲಿಸಿದರೆ ಇದು ಈಗಲೂ ತೀರಾ ಕಡಿಮೆ' ಎಂದು ತೋಪೆ ಹೇಳಿದ್ದಾರೆ.

 Maharashtra Health Minister Rajesh Tope Alleges, BJP Ruled States Gets More Covid-19 Vaccine

ಮಹಾರಾಷ್ಟ್ರದಲ್ಲಿ ಕೋವಿಡ್ ಲಸಿಕೆ ಕೊರತೆ ಉಂಟಾಗಿದ್ದು, ಈಗಾಗಲೇ ಅನೇಕ ಕೇಂದ್ರಗಳಲ್ಲಿ ಲಸಿಕೆ ಸಂಗ್ರಹ ಖಾಲಿಯಾಗಿದೆ. ಇನ್ನು ಮುರು ದಿನಗಳಲ್ಲಿ ಎಲ್ಲ ಡೋಸ್‌ಗಳೂ ಮುಕ್ತಾಯವಾಗಲಿವೆ. ಪ್ರತಿ ವಾರ ನಮಗೆ 40 ಲಕ್ಷ ಡೋಸ್ ಲಸಿಕೆ ಬೇಕು. ಮಹಾರಾಷ್ಟ್ರವು ಲಸಿಕೆ ವಿತರಣೆಯಲ್ಲಿ ಮುಂಚೂಣಿಯಲ್ಲಿದೆ. ಆದರೆ ಬೇರೆ ರಾಜ್ಯಗಳಿಗೆ ಬೃಹತ್ ಪ್ರಮಾಣದಲ್ಲಿ ಲಸಿಕೆಗಳನ್ನು ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕೋವಿಡ್ ಲಸಿಕೆ ಖಾಲಿ: ಇರುವ ಸಂಗ್ರಹ ಮೂರು ದಿನದವರೆಗೆ ಮಾತ್ರಮಹಾರಾಷ್ಟ್ರದಲ್ಲಿ ಕೋವಿಡ್ ಲಸಿಕೆ ಖಾಲಿ: ಇರುವ ಸಂಗ್ರಹ ಮೂರು ದಿನದವರೆಗೆ ಮಾತ್ರ

ಉತ್ತರ ಪ್ರದೇಶಕ್ಕೆ 48 ಲಕ್ಷ ಡೋಸ್, ಮಧ್ಯಪ್ರದೇಶಕ್ಕೆ 40 ಲಕ್ಷ ಡೋಸ್, ಗುಜರಾತ್‌ಗೆ 30 ಲಕ್ಷ ಮತ್ತು ಹರ್ಯಾಣಕ್ಕೆ 24 ಲಕ್ಷ ಡೋಸ್‌ಗಳನ್ನು ಪ್ರತಿ ವಾರ ರವಾನಿಸಲಾಗುತ್ತಿದೆ. ಗುಜರಾತ್‌ನಲ್ಲಿ ಆರು ಕೋಟಿ ಜನಸಂಖ್ಯೆ ಇದೆ. ಅಲ್ಲಿಗೆ 1 ಕೋಟಿ ಡೋಸ್ ನೀಡಲಾಗಿದೆ. ನಮ್ಮಲ್ಲಿ 12 ಕೋಟಿ ಜನಸಂಖ್ಯೆ ಇದೆ. ನಮಗೆ 1.04 ಕೋಟಿ ಡೋಸ್ ನೀಡಿದ್ದಾರೆ ಎಂದಿದ್ದಾರೆ.

English summary
Maharashtra Health Minister Rajesh Tope alleges against the centre that BJP ruled states are getting more Covid-19 vaccine doses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X