ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶವಗಳ ಪಕ್ಕದಲ್ಲಿ ರೋಗಿಗೆ ಚಿಕಿತ್ಸೆ: ಮಹಾರಾಷ್ಟ್ರ ಆರೋಗ್ಯ ಸಚಿವ ಸ್ಪಷ್ಟನೆ

|
Google Oneindia Kannada News

ಮುಂಬೈ, ಮೇ 7: ಮಹಾರಾಷ್ಟ್ರದ ಸಿಯೋನ್ ಆಸ್ಪತ್ರೆಯಲ್ಲಿ ಶವಗಳ ಪಕ್ಕದಲ್ಲಿ ಇತರೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶವಗಳನ್ನು ಕಪ್ಪು ಬಣ್ಣದ ಕವರ್‌ನಲ್ಲಿ ಮುಚ್ಚಲಾಗಿದೆ. ಅದರ ಪಕ್ಕದಲ್ಲೆ ಬೇರೆ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ಕೊರೊನಾ ವೈರಸ್‌ ಅಟ್ಟಹಾಸ ಮಾಡುತ್ತಿರುವ ಈ ಸಮಯದಲ್ಲಿ ಆಸ್ಪತ್ರೆ ಸಿಬ್ಬಂದಿ ಈ ರೀತಿ ನಿರ್ಲಕ್ಷ್ಯ ತೋರುತ್ತಿರುವುದು ಮತ್ತಷ್ಟು ಅಪಾಯಕ್ಕೆ ಕಾರಣವಾಗುತ್ತಿದೆ ಎಂದು ಟೀಕೆ ವ್ಯಕ್ತವಾಯಿತು.

ವಿಡಿಯೋ: ಮುಂಬೈನ ಸರ್ಕಾರಿ ಆಸ್ಪತ್ರೆಯಲ್ಲಿ ಶವಗಳ ಬಳಿಯೇ ರೋಗಿಗಳಿಗೆ ಚಿಕಿತ್ಸೆ ವಿಡಿಯೋ: ಮುಂಬೈನ ಸರ್ಕಾರಿ ಆಸ್ಪತ್ರೆಯಲ್ಲಿ ಶವಗಳ ಬಳಿಯೇ ರೋಗಿಗಳಿಗೆ ಚಿಕಿತ್ಸೆ

ಈ ಕುರಿತು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಪ್ರತಿಕ್ರಿಯೆ ನೀಡಿದ್ದು, ''ಸಿಯಾನ್ ಆಸ್ಪತ್ರೆಯ ವಿಡಿಯೋ ಮೇಲೆ ರಾಜಕೀಯ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಪ್ರೋಟೋಕಾಲ್ ಪ್ರಕಾರ, ರೋಗಿಯೊಬ್ಬರು ಸತ್ತರೆ ರೋಗ ಹರಡುವುದನ್ನು ತಪ್ಪಿಸಲು ದೇಹವನ್ನು ಕಪ್ಪು ಬಣ್ಣದ ಕವರ್‌ನಲ್ಲಿ ಮುಚ್ಚಬೇಕಾಗುತ್ತದೆ' ಎಂದು ಸ್ಪಷ್ಟನೆ ನೀಡಿದ್ದಾರೆ.

Maharashtra Health Minister Clarified About Viral Video Of Sion Hospital

''30 ನಿಮಿಷದೊಳಗೆ ಮೃತರ ಸಂಬಂಧಿಕರು ದೇಹವನ್ನು ತೆಗೆದುಕೊಂಡು ಹೋಗಬೇಕು. ಆದರೆ ಕೆಲವೊಮ್ಮೆ ಕುಟುಂಬದವರು ಹಿಂಜರಿಯುತ್ತಿದ್ದಾರೆ. ಆ ಸಮಯದಲ್ಲಿ ಅದನ್ನು ಶವಾಗಾರಕ್ಕೆ ರವಾನಿಸಲಾಗುತ್ತೆ. ಈ ವೇಳೆ ಎಲ್ಲ ಪ್ರಕ್ರಿಯೆ ಅನುಸರಿಸಲು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ, 30 ನಿಮಿಷಗಳಿಗಿಂತ ಕಡಿಮೆ ಸಮಯದಲ್ಲಿ ಶವದ ರವಾನೆ ಕಾರ್ಯ ಮಾಡಬೇಕೆಂದು ಸೂಚನೆ ನೀಡಿದ್ದೇವೆ'' ಎಂದಿದ್ದಾರೆ.

ಇದಕ್ಕೂ ಮುಂಚೆ ಆಸ್ಪತ್ರೆ ನಿರ್ವಹಣಾ ಮಂಡಳಿ ಈ ಬಗ್ಗೆ ಸ್ಪಷ್ಟನೆ ನೀಡಿತ್ತು. ಕೊವಿಡ್‌ನಿಂದ ಮೃತಪಟ್ಟವರ ಶವಗಳನ್ನು ಸ್ವೀಕರಿಸಲು ಹಂಜರಿಯುತ್ತಿದ್ದಾರೆ. ಶವಗಳನ್ನು ಗಮನಿಸದೆ ಅಲ್ಲಿಡಲು ಅದೂ ಕಾರಣವಾಗಿದೆ. ಶವಗಳನ್ನು ಈಗ ಅಲ್ಲಿಂದ ತೆಗೆಯಲಾಗಿದೆ. ಆಸ್ಪತ್ರೆಯ ಶವಾಗಾರದಲ್ಲಿ 15 ಸ್ಲಾಟ್‌ಗಳಿದ್ದು ಈಗಾಗಲೇ 11 ಭರ್ತಿ ಯಾಗಿದೆ. ನಾವು ಎಲ್ಲಾ ಮೃತದೇಹಗಳನ್ನು ಅಲ್ಲಿಗೆ ಸಾಗಿಸಿದರೆ ಕೊವಿಡ್‌ನಿಂದ ಮೃತಪಡದ ಶವಗಳನ್ನು ಕುಟುಂಬಸ್ಥರು ತೆಗೆದುಕೊಂಡು ಹೋಗಲು ತೊಂದರೆಯಾಗುತ್ತದೆ ಎಂದು ಹೇಳಿದ್ದರು.

English summary
Maharashtra Health Minister Rajesh Tope has clarified about A video from Sion Hospital has gone viral on social media where a body can be seen with a patient.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X