ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಜೊತೆಗಿನ ಡೀಲ್ ಸ್ಥಗಿತ; 5000 ಕೋಟಿ ರು ಮಹಾ ಆಘಾತ

|
Google Oneindia Kannada News

ಮುಂಬೈ, ಜೂನ್ 22: ಭಾರತ ಹಾಗೂ ಚೀನಾ ನಡುವೆ ಲಡಾಕ್ ನಲ್ಲಿ ಇತ್ತೀಚೆಗೆ ನಡೆದ ಸೇನಾ ಸಂಘರ್ಷದ ನಂತರ ಹಲವು ಕಠಿಣ ನಿರ್ಧಾರವನ್ನು ಭಾರತ ಕೈಗೆತ್ತಿಕೊಳ್ಳುತ್ತಿದೆ. ಈ ನಡುವೆ ಚೀನಾ ಮೂಲ ಕಂಪನಿಗಳ ಜೊತೆ ಮೂಲ ಸೌಕರ್ಯ ಯೋಜನೆಗಳ ಕುರಿತಂತೆ ಮಹಾರಾಷ್ಟ್ರ ಸರ್ಕಾರವು ಕೋಟ್ಯಂತರ ರುಪಾಯಿ ಒಪ್ಪಂದ ಮಾಡಿಕೊಂಡಿತ್ತು. ಈಗ ಎಲ್ಲಾ ಒಪ್ಪಂದಗಳನ್ನು ಸ್ಥಗಿತಗೊಳಿಸುವ ಮೂಲಕ ಚೀನಾಕ್ಕೆ ಭಾರಿ ಆಘಾತ ನೀಡಿದೆ.

ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಸಲಹೆಯಂತೆ ಚೀನಾ ಮೂಲದ ಕಂಪನಿಗಳ ಜೊತೆ ಯಾವುದೇ ವ್ಯವಹಾರವನ್ನು ಮುಂದುವರೆಸದಿರಲು ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಚೀನಾ ಕಂಪನಿಗಳ ಜೊತೆ ಈಗಾಗಲೇ ಮಾಡಿಕೊಂಡಿರುವ ಒಪ್ಪಂದ, ಯೋಜನೆ, ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ.

Boycott Chinese products: ನಿಷೇಧದಿಂದ ಚೀನಾಕ್ಕಿಂತ ಭಾರತಕ್ಕೆ ದೊಡ್ಡ ಹೊಡೆತ

ಮ್ಯಾಗ್ನೆಟಿಕ್ ಮಹಾರಾಷ್ಟ್ರ 2.0 ಹೂಡಿಕೆದಾರರ ಸಮಾವೇಶದಲ್ಲಿ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು. ಆದರೆ, ಇದೇ ವೇಳೆ ಲಡಾಕ್ ನ ಗಾಲ್ವಾನ್ ಕಣಿವೆಯ ಬಳಿ ಚೀನಾ ಹಾಗೂ ಭಾರತ ನಡುವೆ ಸಂಘರ್ಷ ನಡೆದು 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಚೀನಾದ 35ಕ್ಕೂ ಅಧಿಕ ಮಂದಿ ಯೋಧರು ಮೃತಪಟ್ಟ ಘಟನೆ ನಡೆದಿತ್ತು.

5000 ಕೋಟಿ ರು ಯೋಜನೆ:

5000 ಕೋಟಿ ರು ಯೋಜನೆ:

ಮಹಾರಾಷ್ಟ್ರದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಚೀನಾ ಮೂಲದ ಮೂರು ಕಂಪನಿಗಳ ಜೊತೆ ಮಹಾರಾಷ್ಟ್ರ ಸರ್ಕಾರವು ಒಪ್ಪಂದ ಮಾಡಿಕೊಂಡಿತ್ತು. ಆದರೆ, ಕೇಂದ್ರ ಸರ್ಕಾರದ ಸಲಹೆಯಂತೆ ಎಲ್ಲವನ್ನು ಸ್ಥಗಿತದಲ್ಲಿಡಲಾಗಿದೆ ಎಂದು ಮಹಾರಾಷ್ಟ್ರದ ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ ಹೇಳಿದ್ದಾರೆ.

ಪ್ರಮುಖ ಒಪ್ಪಂದಗಳು;

ಪ್ರಮುಖ ಒಪ್ಪಂದಗಳು;

ಚೀನಾದ ಪ್ರಮುಖ ಆಟೋಮೊಬೈಲ್ ಕಂಪನಿ ಗ್ರೇಟ್ ವಾಲ್ ಮೋಟರ್ಸ್ ಜೊತೆಗೆ ಮಹಾರಾಷ್ಟ್ರ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಹಂತ ಹಂತವಾಗಿ 1 ಬಿಲಿಯನ್ ಯುಎಸ್ ಡಾಲರ್ ಹೂಡಿಕೆಯನ್ನು ಮಹಾರಾಷ್ಟ್ರದ ಕಂಪನಿಯಲ್ಲಿ ಚೀನಾ ಹೂಡಿಕೆ ಮಾಡಲು ಮುಂದಾಗಿದೆ. ಮಹಾರಾಷ್ಟ್ರ ಸುಮಾರು 3,000 ಮಂದಿ ಸ್ಥಳೀಯರಿಗೆ ಉದ್ಯೋಗದ ಭರವಸೆ ನೀಡಿದೆ.

ಯಾವ ಯಾವ ಕಂಪನಿ ಜೊತೆ ಒಪ್ಪಂದ

ಯಾವ ಯಾವ ಕಂಪನಿ ಜೊತೆ ಒಪ್ಪಂದ

ಚೀನಾದ ಹೆಂಗ್ಲಿ ಇಂಜಿನಿಯರಿಂಗ್, ಪಿಎಂಐ ಎಲೆಕ್ಟ್ರೊ ಮೊಬಿಲಿಟಿ ಸಲ್ಯೂಷಸ್ ಜಂಟಿ ಸಹಭಾಗಿತ್ವದಲ್ಲಿ ಫೋಟನ್ ಹಾಗೂ ಗ್ರೇಟ್ ವಾಲ್ ಮೋಟರ್ಸ್ ಜೊತೆ ಒಪ್ಪಂದವಾಗಿದೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ತಲೆಗಾಂವ್ ನಲ್ಲಿ ಬಹುತೇಕ ಎಲ್ಲಾ ಕಂಪನಿಗಳ ಘಟಕಗಳು ತಲೆ ಎತ್ತಲಿವೆ. ಕೊವಿಡ್ 19 ನಿಂದಾಗಿ ಆರ್ಥಿಕ ಹೊಡೆತಕ್ಕೆ ಸಿಲುಕಿರುವ ಮಹಾರಾಷ್ಟ್ರ ರಾಜ್ಯವು ಈ ಒಪ್ಪಂದಗಳ ಮೂಲಕ ಆರ್ಥಿಕ ಪುನಶ್ಚೇತನಕ್ಕೆ ಯತ್ನಿಸಿದೆ. ಚೀನಾ ಅಲ್ಲದೆ, ಸಿಂಗಪುರ, ದಕ್ಷಿಣ ಕೊರಿಯಾ, ಯುಎಸ್ ಕಂಪನಿಗಳ ಜೊತೆ ಕೂಡಾ ಒಪ್ಪಂದವಾಗಿದೆ.

ಬಿಎಸ್ಎನ್ ಎಲ್ ಗೆ ಸರ್ಕಾರದ ಸೂಚನೆ

ಬಿಎಸ್ಎನ್ ಎಲ್ ಗೆ ಸರ್ಕಾರದ ಸೂಚನೆ

ಟೆಲಿಕಾಂ ಉಪಕರಣಗಳಿಗೆ ಚೀನಾಕ್ಕೆ ಮೊರೆ ಹೋಗದಂತೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್, ಎಂಟಿಎನ್ ಎಲ್ ಗೆ ಕೇಂದ್ರ ಸರ್ಕಾರ ಸೂಚಿಸಿದೆ. ಆತ್ಮ ನಿರ್ಭರ ಭಾರತದ ಮೂಲಕ ದೇಶಿ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ರೈಲ್ವೆ ಕೂಡಾ ಚೀನಾ ಜೊತೆಗಿನ 470 ಕೋಟಿ ರು ಮೌಲ್ಯದ ಒಪ್ಪಂದವನ್ನು ಪಕ್ಕಕ್ಕಿಟ್ಟಿದೆ.

English summary
Following S Jaishankar led Union Ministry of External Affairs (MEA)'s advisory to not sign any further agreements with Chinese companies, Maharashtra Government has put three recently signed agreements with total proposed investment to the tune of Rs 5,000 crore on hold.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X