ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಜಯ್ ದತ್ ಜೈಲು ಶಿಕ್ಷೆ ಅವಧಿ 4 ದಿನ ಹೆಚ್ಚಳ?

By Kiran B Hegde
|
Google Oneindia Kannada News

ಮುಂಬೈ, ಫೆ. 19: ಅಪರಾಧ ಸಾಬೀತಾಗಿ ಶಿಕ್ಷೆ ಅನುಭವಿಸುತ್ತಿದ್ದರೂ ಜೈಲಿನಿಂದ ಪದೇ ಪದೆ ರಜೆ ಪಡೆದು ಮನೆಯಲ್ಲಿ ಹಾಯಾಗಿರುತ್ತಿದ್ದ ಸಂಜಯ್ ದತ್‌ ವರ್ತನೆ ತೀವ್ರ ಟೀಕೆಗೊಳಗಾಗಿತ್ತು. ಈ ಕುರಿತು ತನಿಖೆ ನಡೆಸುವಂತೆ ಮಹಾರಾಷ್ಟ್ರ ಸರ್ಕಾರ ಆದೇಶ ನೀಡಿತ್ತು.

ಸಂಜಯ್ ದತ್ ಅವರು ರಜೆ ಅವಧಿ ಮುಗಿದರೂ ಹೆಚ್ಚಿನ ದಿನಗಳ ಕಾಲ ಮನೆಯಲ್ಲಿಯೇ ಇದ್ದದ್ದು ಸಾಬೀತಾದರೆ ಅವರ ಜೈಲು ಶಿಕ್ಷೆ ಅವಧಿಯನ್ನು ನಾಲ್ಕು ದಿನಗಳ ಕಾಲ ಹೆಚ್ಚಿಸುವ ಇಂಗಿತವನ್ನು ಮಹಾರಾಷ್ಟ್ರ ಗೃಹ ಸಚಿವಾಲಯ ಆದೇಶ ನೀಡಿದೆ. [ಮಹಾರಾಷ್ಟ್ರಕ್ಕೆ ಸಂಜಯ್ ತಲೆನೋವು]

dutt

"ಸಂಜಯ್ ದತ್ ಅವರ ರಜೆ ಅವಧಿಯನ್ನು ನಿಯಮ ಮೀರಿ ಹೆಚ್ಚಿಸಿದ್ದು ಹಾಗೂ ರಜೆ ಅವಧಿ ಮುಗಿದರೂ ಜೈಲಿಗೆ ವಾಪಸ್ ಕರೆಸಲು ಕ್ರಮ ಕೈಗೊಳ್ಳದ ಜೈಲು ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸಲಾಗುವುದು" ಎಂದು ಗೃಹ ಸಚಿವ ರಾಮ್ ಶಿಂಧೆ ತಿಳಿಸಿದ್ದಾರೆ.

ಅಲ್ಲದೆ, ಜೈಲು ನಡವಳಿಕೆಗಳ ಕುರಿತು ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಕಾನೂನು ರೂಪಿಸಲಾಗುವುದು ಎಂದು ಶಿಂಧೆ ತಿಳಿಸಿದ್ದಾರೆ. [ಹೆಂಡ್ತಿ ನೋಡ್ಕೋಳಕ್ಕೆ ಪೆರೋಲ್ ಬೇಕಂತೆ]

ವಿವಾದವೇನು? : ಬಾಲಿವುಡ್ ನಟ ಸಂಜಯ್ ದತ್ ಅಕ್ರಮವಾಗಿ ಶಸ್ತ್ರಾಸ್ತ್ರ ಸಂಗ್ರಹಿಸಿದ್ದ ಅಪರಾಧ ಸಾಬೀತಾದ ಕಾರಣ ಜೈಲು ಶಿಕ್ಷೆಗೊಳಗಾಗಿದ್ದರು. ಆದರೆ, ಪದೇ ಪದೆ ರಜೆ ಪಡೆಯುತ್ತಿದ್ದರು. ರಜೆ ಪಡೆದ ನಂತರವೂ ನಿಗದಿತ ಸಮಯದಲ್ಲಿ ಜೈಲಿಗೆ ವಾಪಸ್ಸಾಗಿರಲಿಲ್ಲ. ಇತರ ಖೈದಿಗಳಿಗೆ ಇಲ್ಲದ ರಿಯಾಯಿತಿ ಸಂಜಯ್ ದತ್‌ಗೆ ಮಾತ್ರ ಏಕೆ ಸಿಗುತ್ತಿದೆ ಎಂಬ ಪ್ರಶ್ನೆ ಮಾಧ್ಯಮಗಳಲ್ಲಿ ಪ್ರಕಟವಾಗಿ ದೇಶಾದ್ಯಂತ ಟೀಕೆಗೊಳಗಾಗಿತ್ತು.

English summary
Actor Sanjay Dutt's prison term would be extended to four more days. As he spent extra days out jail when his furlough period ended and a decision on extension of his furlough was pending.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X