ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಮುಂಬೈ, ಪುಣೆಯಲ್ಲಿ ಮಿಲಿಟರಿ ಲಾಕ್‌ಡೌನ್‌ ಜಾರಿ?

|
Google Oneindia Kannada News

ಮುಂಬೈ, ಮೇ 27: ಭಾರತದ ಪಾಲಿಗೆ ಮಹಾರಾಷ್ಟ್ರ ಕೊರೊನಾ ವೈರಸ್ ಹಾಟ್‌ಸ್ಪಾಟ್ ರಾಜ್ಯವಾಗಿದೆ. ಇಡೀ ದೇಶದಲ್ಲಿ 1.51 ಲಕ್ಷ ಕೇಸ್ ದಾಖಲಾಗಿದ್ದರೆ, ಮಹಾರಾಷ್ಟ್ರ ಒಂದೇ ರಾಜ್ಯದಲ್ಲಿ 54 ಸಾವಿರ ಸೋಂಕು ಪತ್ತೆಯಾಗಿದೆ.

Recommended Video

ಹೊನ್ನಾಳಿಗೆ ತಪ್ಪಿದ ಭಾರೀ ಗಂಡಾಂತರ..! | MP Renukacharya

ಮುಂಬೈನಲ್ಲಿ 32 ಸಾವಿರ ಸೋಂಕು ಹಾಗು ಪುಣೆಯಲ್ಲಿ 6.5 ಸಾವಿರ ಸೋಂಕು ವರದಿಯಾಗಿದೆ. ಸದ್ಯದ ಪರಿಸ್ಥಿತಿ ನೋಡಿದ್ರೆ ಮುಂಬೈ, ಪುಣೆ, ಥಾಣೆ ನಗರಗಳಲ್ಲಿ ನಿಯಂತ್ರಣ ಕೈತಪ್ಪಿದೆ ಎಂಬ ಆರೋಪಗಳು ಕೇಳಿಬರುತ್ತಿದೆ.

ಉದ್ಧವ್ ಠಾಕ್ರೆ ಜೊತೆ ರಾಹುಲ್ ಗಾಂಧಿ ಸೋಶಿಯಲ್ ಡಿಸ್ಟೆನ್ಸ್: ಸ್ಪಷ್ಟನೆಉದ್ಧವ್ ಠಾಕ್ರೆ ಜೊತೆ ರಾಹುಲ್ ಗಾಂಧಿ ಸೋಶಿಯಲ್ ಡಿಸ್ಟೆನ್ಸ್: ಸ್ಪಷ್ಟನೆ

ಮುಂಬೈ ಮತ್ತು ಪುಣೆ ನಗರದಲ್ಲಿ ಮಿಲಿಟರಿ ಲಾಕ್‌ಡೌನ್‌ ಜಾರಿ ಮಾಡಲಾಗುತ್ತಿದೆ ಎಂಬ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಶನಿವಾರದಿಂದ 10 ದಿನಗಳ ಕಾಲ ಈ ಎರಡು ನಗರಗಳಲ್ಲಿ ಮಿಲಿಟರಿ ನಿಯಂತ್ರಣ ಮಾಡಲಿದ್ದಾರೆ. ಹಾಗಾಗಿ, ಅಗತ್ಯ ಸಾಮಾಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳಿ ಎಂಬ ಸಂದೇಶ ರವಾನೆಯಾಗುತ್ತಿದೆ.

 Maharashtra Govt Clarifies No military lockdown of Mumbai, Pune

ತರಕಾರಿ, ಹಾಲು ಸೈನ್ಯದ ನಿಯಂತ್ರಣದಲ್ಲಿರುತ್ತೆ. ಕೇವಲ ಔಷಧಿ ಮಾತ್ರ ಲಭ್ಯವಾಗಿರುತ್ತೆ. ಈ ಕುರಿತು ಮಹಾರಾಷ್ಟ್ರ ಸರ್ಕಾರ ಸಭೆ ನಡೆಸಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

ಆದರೆ, ಇದು ಸುಳ್ಳು ಸುದ್ದಿ. ಮುಂಬೈ ಮತ್ತು ಪುಣೆ ನಗರಗಳಲ್ಲಿ ಮಿಲಿಟರಿ ಲಾಕ್‌ಡೌನ್‌ ಮಾಡುವ ಸಾಧ್ಯತೆ ಇಲ್ಲ. ಎಲ್ಲ ಸರಬರಾಜು ಎಂದಿನಂತೆ ಇರಲಿದೆ. ಆತಂಕ ಬೇಡ. ಲಾಕ್‌ಡೌನ್‌ ಮಾರ್ಗಸೂಚಿಗಳನ್ನು ಪಾಲಿಸಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

English summary
There will be a military lockdown in Mumbai and Pune for 10 days from Saturday. Maharashtra Govt clarifies, its fake news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X