ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಲಸೆ ಕಾರ್ಮಿಕರು ಊರಿಗೆ ಹೋಗಲು ಮಹಾರಾಷ್ಟ್ರ ಸರ್ಕಾರ ಅನುಮತಿ

|
Google Oneindia Kannada News

ಮುಂಬೈ, ಏಪ್ರಿಲ್ 17: ಮಹಾರಾಷ್ಟ್ರದ ಬಾಂದ್ರಾದಲ್ಲಿ ವಲಸೆ ಕಾರ್ಮಿಕರು ಲಾಕ್‌ಡೌನ್‌ ಉಲ್ಲಂಘನೆ ಮಾಡಿ ಬಸ್ ನಿಲ್ದಾಣ ಹಾಗು ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದ ಘಟನೆಗೆ ಸಂಬಂಧಿಸಿದಂತೆ ಆರೋಪ-ಪ್ರತ್ಯಾರೋಪಗಳು ಇನ್ನು ನಿಂತಿಲ್ಲ.

ಮೈತ್ರಿ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎಂಬ ಉದ್ದೇಶದಿಂದ ಬಿಜೆಪಿ ಪೂರ್ವನಿಯೋಜಿತವಾಗಿ ಇಂತಹ ಕೆಲಸ ಮಾಡಿಸಿದೆ ಎಂದು ಆಡಳಿತ ಪಕ್ಷ ಟೀಕಿಸಿದೆ. ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ಸೋತಿದೆ ಎಂದು ವಿರೋಧ ಪಕ್ಷದವರು ಆರೋಪಿಸುತ್ತಿದ್ದಾರೆ.

ನಡೆದುಕೊಂಡೆ ಊರ ಕಡೆ ಮುಖ ಮಾಡಿದ ವಲಸೆ ಕಾರ್ಮಿಕರುನಡೆದುಕೊಂಡೆ ಊರ ಕಡೆ ಮುಖ ಮಾಡಿದ ವಲಸೆ ಕಾರ್ಮಿಕರು

ಈ ಮಧ್ಯೆ 'ಲಾಕ್‌ಡೌನ್‌ ಮುಗಿಯವರೆಗೂ ವಲಸೆ ಕಾರ್ಮಿಕರು ರಾಜ್ಯ ಬಿಟ್ಟು ಹೋಗುವಂತಿಲ್ಲ. ನಮ್ಮ ರಾಜ್ಯದಲ್ಲಿ ನೀವೇಲ್ಲ ಸುರಕ್ಷಿತವಾಗಿರುತ್ತೀರಾ. ಲಾಕ್‌ಡೌನ್ ಮುಗಿದ ಮೇಲೆ ನಿಮ್ಮನ್ನು ಕಳುಹಿಸಿಕೊಡುವ ಕೆಲಸ ಮಾಡುತ್ತೇವೆ' ಎಂದು ಸ್ವತಃ ಮುಖ್ಯಮಂತ್ರಿ ಭರವಸೆ ಕೊಟ್ಟಿದ್ದರು. ಊಟ, ಆಶ್ರಯ ನೀಡುತ್ತೇವೆ ಎಂದು ಭರವಸೆ ಕೊಟ್ಟರೂ ಇದ್ಯಾವುದಕ್ಕೂ ಬಗ್ಗದ ವಲಸೆ ಕಾರ್ಮಿಕರು, ನಡೆದುಕೊಂಡು ಸೈಕಲ್‌ಗಳಲ್ಲಿ ಊರಿನ ಕಡೆ ಸಾಗುತ್ತಿದ್ದಾರೆ.

Maharashtra Govt Allows Migrant Sugarcane Workers To Go Back To Their Villages

ಇದೀಗ, ಮಹಾರಾಷ್ಟ್ರ ಸರ್ಕಾರ ತನ್ನ ನಿಲುವು ಬದಲಿಸಿಕೊಂಡಿದೆ. ಕಬ್ಬಿನ ಕಾರ್ಮಿಕರ ವಿಚಾರದಲ್ಲಿ ಠಾಕ್ರೆ ಸರ್ಕಾರ ಊರುಗಳಿಗೆ ಹೋಗಲು ಅನುಮತಿ ನೀಡಿದೆ.

ವೈದ್ಯಕೀಯ ಪರೀಕ್ಷೆ ಮುಗಿಸಿದ ಬಳಿಕ ಒಂದು ಲಕ್ಷ ವಲಸೆ ಕಬ್ಬಿನ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಬಹುದು ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ. ಈ ಕಾರ್ಮಿಕರಿಗೆ ಸಂಬಂಧಿಸಿದಂತೆ ಊಟದ ವ್ಯವಸ್ಥೆ ಮತ್ತು ಸಾರಿಗೆ ವ್ಯವಸ್ಥೆ ಎಲ್ಲವನ್ನು ಸಕ್ಕರೆ ಕಾರ್ಖಾನೆ ಮಾಲೀಕರು ನೋಡಿಕೊಳ್ಳುತ್ತಾರೆ ಎಂದು ತಿಳಿಸಿದೆ.

ಬಾಂದ್ರಾದ ವಲಸೆ ಕಾರ್ಮಿಕರಿಗೆ ಸಿಎಂ ಉದ್ಧವ್ ಠಾಕ್ರೆ ಅಭಯಬಾಂದ್ರಾದ ವಲಸೆ ಕಾರ್ಮಿಕರಿಗೆ ಸಿಎಂ ಉದ್ಧವ್ ಠಾಕ್ರೆ ಅಭಯ

ಇದು ಸಾರ್ವಜನಿಕ ವಲಯದಲ್ಲಿ ವಿರೋಧಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ತಡೆಯುವಲ್ಲಿ, ಸರ್ಕಾರ ವಿಫಲವಾಗಿದೆ. ಈಗ ವಲಸೆ ಕಾರ್ಮಿಕರ ಸುರಕ್ಷಿತ ನೋಡಿಕೊಳ್ಳಲು ಸಾಧ್ಯವಾಗದೆ, ಅವರನ್ನು ಹೋಗಲು ಅನುಮತಿ ಕೊಟ್ಟಿದೆ ಎಂದು ಟೀಕಿಸುತ್ತಿದ್ದಾರೆ.

English summary
Maharashtra Government allows over 1 lakh migrant sugarcane workers to go back to their villages after a medical checkup, amid coronavirus lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X