ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಮೇ 1ರಿಂದ 18ರಿಂದ 44 ವಯಸ್ಸಿನವರಿಗೆ ಕೊರೊನಾ ಲಸಿಕೆ ಸಿಗಲ್ಲ

|
Google Oneindia Kannada News

ಮುಂಬೈ, ಏಪ್ರಿಲ್ 28: ಮಹಾರಾಷ್ಟ್ರದಲ್ಲಿ ಮೇ 1 ರಿಂದ 18ರಿಂದ 44ವರ್ಷ ವಯಸ್ಸಿನವರಿಗೆ ಕೊರೊನಾ ಲಸಿಕೆ ಸಿಗುವುದಿಲ್ಲ ಎಂದು ಸರ್ಕಾರ ಹೇಳಿದೆ.

ಲಸಿಕೆ ಪೂರೈಕೆ ಬಗ್ಗೆ ಅನುಮಾನ ಇರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ, ಆದರೆ 18 ರಿಂದ 44 ವರ್ಷದವರಿಗೆ ಲಸಿಕೆಯನ್ನು ಉಚಿತವಾಗಿ ನೀಡುವ ನಿರ್ಧಾರಕ್ಕೆ ಸರ್ಕಾರ ಬದ್ಧವಾಗಿದೆ. ಇದಕ್ಕೆ ಸರ್ಕಾರ 6,500 ಕೋಟಿ ವ್ಯಯಿಸಬೇಕಾಗಿದೆ ಎಂದು ಹೇಳಲಾಗಿದೆ.

ಭಾರತದಲ್ಲಿ ಒಂದೇ ದಿನ 25,56,182 ಜನರಿಗೆ ಕೊರೊನಾವೈರಸ್ ಲಸಿಕೆಭಾರತದಲ್ಲಿ ಒಂದೇ ದಿನ 25,56,182 ಜನರಿಗೆ ಕೊರೊನಾವೈರಸ್ ಲಸಿಕೆ

ಸ್ಪುಟ್ನಿಕ್ V ಲಸಿಕೆ ತರಿಸಿಕೊಳ್ಳುವ ಬಗ್ಗೆಯೂ ಮುಖ್ಯಮಂತ್ರಿಗಳ ಕಚೇರಿ ಚಿಂತನೆ ನಡೆಸುತ್ತಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರದ ನೆರವು ಕೋರಲಿದ್ದೇವೆ ಎಂದು ತಿಳಿಸಿದ್ದಾರೆ.

 Maharashtra Government Will Not Start Covid-19 Vaccinations For Ages 18 To 44 From May 1

18 ರಿಂದ 44 ವರ್ಷದವರಿಗೆ ಲಸಿಕೆ ನೀಡುವ ಅಭಿಯಾನವನ್ನು ಮೇ 1 ರಿಂದ ಆರಂಭಿಸುವಂತೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚಿಸಿತ್ತು. ಆದರೆ ಇದರಿಂದ ಉಂಟಾಗುವ ಭಾರಿ ಬೇಡಿಕೆ ನಿಭಾಯಿಸುವಲ್ಲಿ ಹಲವಾರು ರಾಜ್ಯಗಳು ತೊಂದರೆ ಎದುರಿಸುತ್ತಿವೆ ಎನ್ನಲಾಗಿದೆ.

ನಮ್ಮಲ್ಲಿ ಲಸಿಕೆಯ ದಾಸ್ತಾನು ಇಲ್ಲ, ಬೇಡಿಕೆ ಮತ್ತು ಪೂರೈಕೆ ನಡುವೆ ಸಾಕಷ್ಟು ಅಂತರ ಸೃಷ್ಟಿಯಾಗುವುದು ಬೇಡ, ಹೀಗಾಗಿ ಮೇ 1 ರಿಂದ ಲಸಿಕೆ ವಿತರಣೆ ಆರಂಭಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ, ಲಾಕ್‌ಡೌನ್ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು 6 ತಿಂಗಳ ಗುರಿ ನಿಗದಿಪಡಿಸಲಾಗಿದೆ. ಇದಕ್ಕೆ ಯೋಜನೆ ರೂಪಿಸಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ.

English summary
Concerned about its supplies of the Covid-19 vaccine, the Uddhav Thackeray-led Maha Vikas Aghadi government has decided not to commence inoculations for ages 18 to 44 from May 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X