ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಯಿಬಾಬಾ ಟ್ರಸ್ಟ್‌ ಸಾಲ ಪಡೆಯಲಿದೆ ಮಹಾರಾಷ್ಟ್ರ ಸರ್ಕಾರ

|
Google Oneindia Kannada News

ನಾಗ್ಪುರ, ಡಿಸೆಂಬರ್ 09 : ಮಹಾರಾಷ್ಟ್ರ ಸರ್ಕಾರ ಸಾಯಿಬಾಬಾ ಟ್ರಸ್ಟ್‌ನಿಂದ 500 ಕೋಟಿ ಸಾಲ ಪಡೆಯಲು ಒಪ್ಪಂದ ಮಾಡಿಕೊಂಡಿದೆ. ಎನ್‌ಸಿಪಿ ಸರ್ಕಾರದ ಕ್ರಮವನ್ನು ಟೀಕಿಸಿದೆ.

ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನಿಂದ ಮಹಾರಾಷ್ಟ್ರ ಬಡ್ಡಿ ರಹಿತವಾದ 500 ರೂ. ಕೋಟಿ ಸಾಲ ಪಡೆಯಲು ಒಪ್ಪಂದಕ್ಕೆ ಸಹಿ ಹಾಕಿದೆ. ಕಾಲುವೆಗಳನ್ನು ನಿರ್ಮಿಸಲು ಈ ಹಣ ಬಳಕೆ ಮಾಡುವುದಾಗಿ ಸರ್ಕಾರ ಹೇಳಿದೆ.

ರೈತರ ಸಾಲಮನ್ನಾಕ್ಕೆ ಚಾಲನೆ, 477 ರೈತರಿಗೆ ಋಣ ಮುಕ್ತ ಪತ್ರ ವಿತರಣೆರೈತರ ಸಾಲಮನ್ನಾಕ್ಕೆ ಚಾಲನೆ, 477 ರೈತರಿಗೆ ಋಣ ಮುಕ್ತ ಪತ್ರ ವಿತರಣೆ

'ರಾಜ್ಯ ಸರ್ಕಾರ ದಿವಾಳಿ ಆಗಿರುವುದಕ್ಕೆ ದೇವಾಲಯಗಳಿಂದ ಸಾಲ ಪಡೆಯುತ್ತಿರುವುದೇ ಸಾಕ್ಷಿಯಾಗಿದೆ' ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಧನಂಜಯ್ ಮುಂಡೆ ಟೀಕಿಸಿದ್ದಾರೆ.

'ಸಾಲಮನ್ನಾ ಮಾಡಿ ಅಂದ್ರೆ ಮಂಚಕ್ಕೆ ಕರೀತಾರೆ', ರೈತ ಮಹಿಳೆ ಕಣ್ಣೀರು'ಸಾಲಮನ್ನಾ ಮಾಡಿ ಅಂದ್ರೆ ಮಂಚಕ್ಕೆ ಕರೀತಾರೆ', ರೈತ ಮಹಿಳೆ ಕಣ್ಣೀರು

Maharashtra gove

ಕೆಲವು ದಿನಗಳ ಹಿಂದೆ ಎಸ್‌ಎಸ್‌ಎಸ್‌ಟಿ ಮತ್ತು ಗೋದಾವರಿ-ಮರಾಠವಾಡ ನೀರಾವರಿ ಅಭಿವೃದ್ಧಿ ನಿಗಮ 500 ಕೋಟಿ ಸಾಲ ಪಡೆಯುವ ಒಪ್ಪಂದಕ್ಕೆ ಸಹಿ ಹಾಕಿದ್ದವು.

ರೈತರಿಂದ ಸಿಎಂಗೆ ಕ್ಲಾಸ್‌, ಮತ್ತೆ ಹಂಗಿನ ಮಾತಾಡಿದ ಕುಮಾರಸ್ವಾಮಿರೈತರಿಂದ ಸಿಎಂಗೆ ಕ್ಲಾಸ್‌, ಮತ್ತೆ ಹಂಗಿನ ಮಾತಾಡಿದ ಕುಮಾರಸ್ವಾಮಿ

'ಸಮೃದ್ಧಿ ಕಾರಿಡಾರ್ ಮತ್ತು ಬುಲೆಟ್ ರೈಲ್ವೇ ಯೋಜನೆಗಳಿಗೆ ಅಪಾರ ಹಣವಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಹಾಗಿದ್ದರೆ, ದೇವಾಲಯಗಳಿಂದ ಹಣ ಪಡೆಯುವ ಅಗತ್ಯವೇನಿತ್ತು?' ಎಂದು ಎನ್‌ಸಿಪಿ ಪ್ರಶ್ನಿಸಿದೆ.

'ನೀರಾವರಿಗಾಗಿ ಮೀಸಲಿಟ್ಟಿದ್ದ 28 ಸಾವಿರ ಕೋಟಿಯನ್ನು ಬಳಸದ ರಾಜ್ಯ ಸರ್ಕಾರ ದೇವಾಲಯಗಳ ಹಣದ ಮೇಲೆ ಕಣ್ಣಿಟ್ಟಿದೆ. ಪ್ರಧಾನಿ ಮತ್ತು ಮುಖ್ಯಮಂತ್ರಿ ಅವರು ದೇವಸ್ಥಾನದ ಹಣವನ್ನು ಲೂಟಿ ಮಾಡುತ್ತಿದ್ದಾರೆ' ಎಂದು ಪ್ರತಿಪಕ್ಷಗಳು ಕಿಡಿ ಕಾರಿವೆ.

English summary
Maharashtra government singed for agreement to borrow loan of 500 crore from Shri Saibaba Sansthan Trust, Shirdi. Opposition party criticized the government move.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X