• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹತ್ ರೂಪಾಯಿಗೊಂದ್, ಹತ್ತು ರೂಪಾಯಿಗೊಂದ್, ಇದು ಊಟದ ರೇಟ್!

|

ಮುಂಬೈ, ನವೆಂಬರ್.28: ಮಹಾರಾಷ್ಟ್ರದ 18ನೇ ಹಾಗೂ ಶಿವಸೇನೆ ಪಕ್ಷದಿಂದ ಆಯ್ಕೆಯಾದ ಮೂರನೇ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 56 ಸ್ಥಾನಗಳಲ್ಲಿ ಗೆಲುವು ದಾಖಲಿಸಿರುವ ಶಿವಸೇೆನೆಗೆ ಕಾಂಗ್ರೆಸ್ ಹಾಗೂ ಎನ್ ಸಿಪಿ ಪಕ್ಷಗಳು ಬೆಂಬಲ ನೀಡಿವೆ.

ಮುಖ್ಮಮಂತ್ರಿ ಉದ್ಧವ್ ಠಾಕ್ರೆ ಜೊತೆಗೆ ಶಿನಸೇನೆಯ ಆರು, ಕಾಂಗ್ರೆಸ್ ನಿಂದ ಆರು ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಆರು ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಎನ್ ಸಿಪಿಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಕಾಂಗ್ರೆಸ್ ಗೆ ವಿಧಾನಸಭೆ ಸ್ಪೀಕರ್ ಸ್ಥಾನ ನೀಡುವ ಬಗ್ಗೆ ಒಪ್ಪಂದವಾಗಿದೆ. ಆದರೆ, ಈವರೆಗೆ ಉಪ ಮುಖ್ಯಮಂತ್ರಿ ಯಾರು ಎಂಬುದು ತೀರ್ಮಾನವಾಗಿಲ್ಲ ಎಂದು ತಿಳಿದು ಬಂದಿದೆ.

Live: ಸಾಮ್ನಾ ಪತ್ರಿಕೆ ಸಂಪಾದಕ ಹುದ್ದೆಗೆ ಉದ್ಧವ್ ಠಾಕ್ರೆ ರಾಜೀನಾಮೆ

ಮಹಾರಾಷ್ಟ್ರದಲ್ಲಿ ಪಟ್ಟಕ್ಕೆ ಏರಿದಿ ಮೈತ್ರಿಕೂಡ ಮತದಾರರಿಗೆ ಬಿಗ್ ಗಿಫ್ಟ್ ಕೊಟ್ಟಿದೆ. ಅಭಿವೃದ್ಧಿ ಹೆಸರು ಹೇಳಿಕೊಂಡು ಮೈತ್ರಿ ಮಾಡಿಕೊಂಡಿರುವ ಶಿವಸೇನೆ-ಕಾಂಗ್ರೆಸ್-ಎನ್ ಸಿಪಿ ಪಕ್ಷಗಳು ಸರ್ಕಾರದ ಸಾಮಾನ್ಯ ಯೋಜನಾ ಪಟ್ಟಿಯನ್ನು ರಿಲೀಸ್ ಮಾಡಿದೆ. ಜಸ್ಟ್ 10 ರೂಪಾಯಿಗೆ ಮಹಾರಾಷ್ಟ್ರದಲ್ಲಿ ಇನ್ಮುಂದೆ ಸಾಮಾನ್ಯ ಜನರಿಗೆ ಹೊಟ್ಟೆತುಂಬಾ ಗುಣಮಟ್ಟದ ಊಟ ನೀಡಲು ಮೈತ್ರಿ ಸರ್ಕಾರ ಪ್ಲ್ಯಾನ್ ರೂಪಿಸಿದೆ.

ಹಾಗಾದ್ರೆ ಮಿತ್ರಕೂಟ ಬಿಡುಗಡೆ ಮಾಡಿರುವ ಕಾಮನ್ ಮಿನಿಮಮ್ ಪ್ರೊಗ್ರಾಮ್ ನಲ್ಲಿ ಯಾವ ವಲಯಗಳಿಗೆ ಏನೇನು ಸಿಕ್ಕಿದೆ ಎಂಬುದರ ಕುರಿತು ಒಂದು ಸಂಪೂರ್ಣ ಚಿತ್ರಣ ನಿಮ್ಮ ಮುಂದಿದೆ.

ರಾಜ್ಯದಲ್ಲಿ ಅನ್ನದಾತರಿಗೆ ಆದ್ಯತೆ

ರಾಜ್ಯದಲ್ಲಿ ಅನ್ನದಾತರಿಗೆ ಆದ್ಯತೆ

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿರುವ ಮಿತ್ರಪಕ್ಷಗಳು ರಾಜ್ಯದ ರೈತರಿಗೆ ಬಂಪರ್ ಕೊಡುಗೆಯನ್ನೇ ನೀಡಿವೆ. ಸಾಮಾನ್ಯ ಯೋಜನಾ ಪಟ್ಟಿಯಲ್ಲಿ ರೈತಾಪಿ ವರ್ಗಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಈ ಕುರಿತು ಪಟ್ಟಿಯಲ್ಲಿ ಇರುವ ಅಂಶಗಳನ್ನು ಒಮ್ಮೆ ನೋಡುವುದಾದರೆ.

- ಅತಿಶೀಘ್ರದಲ್ಲೇ ರಾಜ್ಯದ ರೈತರ ಸಾಲಮನ್ನಾ ಘೋಷಿಸುವುದು

- ಮಹಾರಾಷ್ಟ್ರದಲ್ಲಿ ರೌದ್ರಮಳೆ ಹಾಗೂ ಪ್ರವಾಹಕ್ಕೆ ತುತ್ತಾಗಿ ನಲುಗಿರುವ ರೈತರಿಗೆ ಶೀಘ್ರದಲ್ಲಿ ನೆರವು

- ನೆರೆ ಸಂತ್ರಸ್ತರ ಜೊತೆಗೆ ಹಾಳಾಗಿರುವ ರೈತರ ಬೆಳೆಗೆ ಪರಿಹಾರ ನೀಡುವುದು

- ರೈತರ ಬೆಳೆ ಪರಿಹಾರಕ್ಕಾಗಿ ವಿನೂತನ ವಿಮಾ ಯೋಜನೆ ಜಾರಿಗೊಳಿಸುವುದು

- ರೈತರ ಬೆಳೆಗೆ ತಕ್ಕ ಬೆಲೆ ಸಿಗುವಂತೆ ಬೆಂಬಲ ಬೆಲೆ ಘೋಷಿಸುವುದು

- ರಾಜ್ಯದ ಬರಪೀಡಿತ ಪ್ರದೇಶಗಳಿಗೆ ನೀರು ಸೌಲಭ್ಯ ಒದಗಿಸುವುದು

ಶಾಸಕರಾಗದೇ ಸಿಎಂ ಪಟ್ಟಕ್ಕೇರಿದವರ ಪೈಕಿ ಉದ್ಧವ್ ಮೊದಲಿಗರಲ್ಲ!

ರಾಜ್ಯದ ಯುವಕರಿಗೆ ಸರ್ಕಾರಿ ಕೆಲಸ

ರಾಜ್ಯದ ಯುವಕರಿಗೆ ಸರ್ಕಾರಿ ಕೆಲಸ

ಮಹಾರಾಷ್ಟ್ರದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳಿಗೆ ತಕ್ಷಣಕ್ಕೆ ಭರ್ತಿ ಮಾಡಿಕೊಳ್ಳುವುದಕ್ಕೆ ಸರ್ಕಾರ ತೀರ್ಮಾನಿಸಿದೆ. ರಾಜ್ಯದ ಜನರಿಗೆ ಉದ್ಯೋಗ ನೀಡುವ ಭರವಸೆಯನ್ನು ಸರ್ಕಾರ ನೀಡಿದೆ. ಅಷ್ಟೇ ಅಲ್ಲದೇ, ವಿದ್ಯಾವಂತ ನಿರುದ್ಯೋಗಿಗಳಿಗೆ ಸರ್ಕಾರದಿಂದಲೇ ಫೆಲೋಶಿಪ್ ನೀಡಲಾಗುತ್ತದೆ. ಇನ್ನು, ರಾಜ್ಯ ಸರ್ಕಾರದ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ.80ರಷ್ಟು ಮೀಸಲಾತಿ ನೀಡಲಾಗುವುದು ಎಂದು ಸರ್ಕಾರದ ಸಾಮಾನ್ಯ ಯೋಜನಾ ಪಟ್ಟಿಯಲ್ಲಿ ಹೇಳಲಾಗಿದೆ.

ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಸೌಲಭ್ಯ

ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಸೌಲಭ್ಯ

ಮಹಾರಾಷ್ಟರದಲ್ಲಿ ಮಹಿಳೆಯರ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಮೈತ್ರಿ ಸರ್ಕಾರ ಹೇಳಿದೆ. ಇದರ ಜೊತೆಗೆ ಆರ್ಥಿಕವಾಗಿ ದುರ್ಬಲರಾಗಿರುವ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ತೀರ್ಮಾನಿಸಲಾಗಿದೆ. ಇದರ ಜೊತೆಗೆ ಉದ್ಯೋಗಸ್ಥ ಮಹಿಳೆಯರಿಗಾಗಿ ಜಿಲ್ಲಾಕೇಂದ್ರ ಹಾಗೂ ನಗರ ಪ್ರದೇಶಗಳಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರ ಮಾಸಿಕ ಭತ್ಯೆ ಹಾಗೂ ಸೌಲಭ್ಯ ಹೆಚ್ಚಿಸುವುದು. ಮಹಿಳಾ ಸಬಲೀಕರಣ ದೃಷ್ಟಿಯಿಂದ ಮಹಿಳಯ ಸುರಕ್ಷತಾ ತಂಡವನ್ನು ರಚಿಸಲಾಗುತ್ತದೆ ಎಂದು ಹೇಳಲಾಗಿದೆ.

ಪಕ್ಷಕ್ಕೆ ವಂಚಿಸಿದ್ದರೂ ಅಜಿತ್ ಪವಾರ್‌ಗೆ ಡಿಸಿಎಂ ಹುದ್ದೆ ಗ್ಯಾರಂಟಿ?

ಶಿಕ್ಷಣ, ನಗರಾಭಿವೃದ್ಧಿ, ಕಲೆ ಮತ್ತು ಸಂಸ್ಕೃತಿಗೂ ಒತ್ತು

ಶಿಕ್ಷಣ, ನಗರಾಭಿವೃದ್ಧಿ, ಕಲೆ ಮತ್ತು ಸಂಸ್ಕೃತಿಗೂ ಒತ್ತು

ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿನ ಗುಣಮಟ್ಟವನ್ನು ಹೆಚ್ಚಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕಾಗಿ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಲು ಮೈತ್ರಿ ಸರ್ಕಾರ ತೀರ್ಮಾನಿಸಿದೆ. ಇದರ ಜೊತೆಗೆ ನಗರಾಭಿವೃದ್ಧಿಗೂ ಆದ್ಯತೆ ನೀಡಲಾಗಿದ್ದು, ಮುಖ್ಯಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ ಉತ್ತಮ ರಸ್ತೆಗಳ ನಿರ್ಮಾಣ ಮಾಡಲಾಗುತ್ತದೆ. ನಗರ ಪಂಚಾಯಿತಿ, ಪುರಸಭೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ನೀಡಲು ಸರ್ಕಾರ ಯೋಜನೆ ರೂಪಿಸಲಿದೆ.

ಸಾಂಸ್ಕೃತಿಕ ಪ್ರದೇಶಗಳಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಪ್ರವಾಸಿಗರಿಗೆ ಅನುಕೂಲವಾಗುವಂತೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಮೈತ್ರಿಕೂಟದ ಸಾಮಾನ್ಯ ಕಾರ್ಯಕ್ರಮ ಪಟ್ಟಿಯಲ್ಲಿ ಹೇಳಲಾಗಿದೆ. ಇದರ ಜೊತೆಗೆ ಹಿರಿಯ ನಾಗರಿಕರಿಗೆ ನೀಡುತ್ತಿದ್ದ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shivsena-Congress-NCP Released The Common Minimum Program. Special Gift For Common People From New Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more