ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ಠಕ್ಕರ್ ಕೊಟ್ಟ ಠಾಕ್ರೆ, ಡಿ.1ರಂದು ಸಿಎಂ ಆಗಿ ಪದಗ್ರಹಣ

|
Google Oneindia Kannada News

ಮುಂಬೈ, ನವೆಂಬರ್.26: ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬರುವ ಸರ್ಕಾರಗಳ ಮೇಲೆ ಜನರಿಗೆ ನಂಬಿಕೆಯೇ ಇಲ್ಲದಂತಾಗಿ ಬಿಟ್ಟಿದೆ. ಏಕೆಂದರೆ ಇಂದು ರಾಜ್ಯದಲ್ಲಿದ್ದ ಸರ್ಕಾರ ನಾಳೆ ಇರೋದಿಲ್ಲ. ನಾಳೆ ಅಸ್ತಿತ್ವಕ್ಕೆ ಬರುವ ಸರ್ಕಾರ ಇನ್ನೆರೆಡು ದಿನಗಳಲ್ಲಿ ಉಳಿಯುತ್ತೋ ಇಲ್ಲವೋ ಎಂಬುದರ ಬಗ್ಗೆಯೂ ಗ್ಯಾರೆಂಟಿ ಇರೋದಿಲ್ಲ.

ಹೌದು, ಇತ್ತೀಚಿನ ರಾಜಕೀಯ ಬೆಳವಣಿಗೆ ಅಂಥದೊಂದು ಅನುಮಾನವನ್ನು ಜನರ ಮನಸಿನಲ್ಲಿ ಹುಟ್ಟಿಕೊಳ್ಳುವಂತೆ ಮಾಡಿದೆ. ಕಳೆದ ನವೆಂಬರ್.23ರಂದು ಮುಖ್ಮಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ದೇವೇಂದ್ರ ಫಡ್ನವೀಸ್ ಹಾಗೂ ಉಪಮುಖ್ಯಮಂತ್ರಿ ಅಜಿತ್ ಪವಾರ್ ಇಬ್ಬರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವಿಶ್ವಾಸಮತ ಯಾಚನೆಗೂ ಮುನ್ನ ಶಸ್ತ್ರತ್ಯಾಗ ಮಾಡಿದ ದೇವೇಂದ್ರವಿಶ್ವಾಸಮತ ಯಾಚನೆಗೂ ಮುನ್ನ ಶಸ್ತ್ರತ್ಯಾಗ ಮಾಡಿದ ದೇವೇಂದ್ರ

ಕಳೆದ 11 ದಿನಗಳಿಂದ ಸರ್ಕಾರ ರಚನೆ ಬಗ್ಗೆ ಚರ್ಚೆ ನಡೆಸುತ್ತಿದ್ದ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್ ಸಿಪಿ ಪಕ್ಷಗಳು ಇದೀಗ ಸರ್ಕಾರ ರಚಿಸಲು ಮುಂದಾಗಿವೆ. ನವೆಂಬರ್.26ರಂದು ದೇವೇಂದ್ರ ಫಡ್ನವೀಸ್ ತಮ್ಮ ಮುಖ್ಮಯಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದು, ನಾಳೆ ಅಂದರೆ ನವೆಂಬರ್.27ರಂದು ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ಆಹ್ವಾನ ನೀಡುವಂತೆ ಮಿತ್ರಪಕ್ಷಗಳು ಮನವಿ ಮಾಡಲಿವೆ.

 Maharashtra Government: Sena-NCP-Cong alliance to ask governor for oath taking ceremony by tomorrow

ಸಂಜೆ ಏಳು ಗಂಟೆಗೆ ರಾಜಭವನಕ್ಕೆ ಮಿತ್ರಪಕ್ಷ:

ಇಂದು ಸಂಜೆ 7 ಗಂಟೆ ವೇಳೆಗೆ ರಾಜಭವನಕ್ಕೆ ಶಿವಸೇನೆ, ಕಾಂಗ್ರೆಸ್, ಎನ್ ಸಿಪಿ ಪಕ್ಷಗಳ ನಾಯಕರು ರಾಜಭವನಕ್ಕೆ ತೆರಳಲಿದ್ದಾರೆ. ನವೆಂಬರ್.27ರಂದು ಮಿತ್ರಪಕ್ಷಗಳು ಸರ್ಕಾರ ರಚಿಸಲು ಅವಕಾಶ ನೀಡಬೇಕು. ಜೊತೆಗೆ ನಾಳೆ ಮುಖ್ಯಮಂತ್ರಿ ಪ್ರಮಾಣವಚನಕ್ಕೆ ಆಹ್ವಾನ ನೀಡುವಂತೆ ರಾಜ್ಯಪಾಲ ಭಗತ್ ಸಿಂಗ್ ಕೌಶಿಯಾರ್ ಅವರಿಗೆ ಮನವಿ ಸಲ್ಲಿಸಲಿದ್ದಾರೆ.

18 ದಿನಗಳಲ್ಲೇ ಮಹಾರಾಷ್ಟ್ರಕ್ಕೆ ಇಬ್ಬರು ಮುಖ್ಯಮಂತ್ರಿಗಳು!18 ದಿನಗಳಲ್ಲೇ ಮಹಾರಾಷ್ಟ್ರಕ್ಕೆ ಇಬ್ಬರು ಮುಖ್ಯಮಂತ್ರಿಗಳು!

ಒಬ್ಬರು ಮುಖ್ಯಮಂತ್ರಿ, ಇಬ್ಬರು ಉಪ ಮುಖ್ಯಮಂತ್ರಿ

ನಾಳೆ ಮಿತ್ರಪಕ್ಷಗಳು ಒಮ್ಮತದಿಂದ ಆಯ್ಕೆ ಮಾಡಿರುವ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಿಂದ ಒಬ್ಬರು ಹಾಗೂ ಎನ್ ಸಿಪಿ ಯಿಂದ ಒಬ್ಬರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

English summary
MaharashtraGovernment: Sena-NCP-Cong Alliance To Ask Governor For Oath Taking Ceremony By Tomorrow. Uddhav To Be The CM, NCP And Congress To get one DCM Each.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X