ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಪರೀಕ್ಷೆ ಬೆಲೆ ಇಳಿಕೆ ಮಾಡಿದ ಮಹಾರಾಷ್ಟ್ರ ಸರ್ಕಾರ

|
Google Oneindia Kannada News

ಮುಂಬೈ, ಜೂನ್ 13: ಮಹಾರಾಷ್ಟ್ರ ಸರ್ಕಾರ ಕೊರೊನಾ ವೈರಸ್ ಪರೀಕ್ಷೆಯ ಬೆಲೆ ಇಳಿಕೆ ಮಾಡಿದೆ. ಖಾಸಗಿ ಲ್ಯಾಬ್‌ಗಳಲ್ಲಿ ಕೊವಿಡ್ ಪರೀಕ್ಷೆ ಮಾಡಲು ನಿಗದಿಯಾಗಿದ್ದ ಬೆಲೆಯಲ್ಲಿ ಇಳಿಕೆ ಮಾಡಿ ಆದೇಶ ಹೊರಡಿಸಿದೆ.

Recommended Video

ಅಮೂಲ್ಯ ಲಿಯೊನಾ ಸಿಕ್ಕಿದೆ ಬೇಲ್..! | Amulya Leone gets bail | Oneindia Kannada

ಈ ಕುರಿತು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಮಾಹಿತಿ ನೀಡಿದ್ದು ''ಈ ಹಿಂದೆ ಖಾಸಗಿ ಪ್ರಯೋಗಾಲಯದಲ್ಲಿ ಕೊರೊನಾ ಪರೀಕ್ಷೆ ಮಾಡಲು 4400 ರೂಪಾಯಿ ಪಡೆಯುತ್ತಿದ್ದರು. ಇನ್ಮುಂದೆ 2200 ರೂಪಾಯಿಗೆ ಕೊರೊನಾ ಪರೀಕ್ಷೆ ಮಾಡಲಿದೆ'' ಎಂದು ಹೇಳಿದ್ದಾರೆ.

ಭಾರತದಲ್ಲಿ ಕೊರೊನಾ ದಿಕ್ಕು ಬದಲಿಸಿದ 'ಐದು' ಮಹಾನಗರಗಳುಭಾರತದಲ್ಲಿ ಕೊರೊನಾ ದಿಕ್ಕು ಬದಲಿಸಿದ 'ಐದು' ಮಹಾನಗರಗಳು

ಕೊರೊನಾ ಪರೀಕ್ಷೆಯ ದರವನ್ನು ಕಡಿಮೆ ಮಾಡುವುದರಿಂದ ಸಾರ್ವಜನಿಗೆ ಸಹಾಯವಾಗುತ್ತದೆ ಎಂದು ಟೋಪೆ ಹೇಳಿದ್ದಾರೆ. 'ಆಸ್ಪತ್ರೆಗಳಿಂದ ವೈರಲ್ ಟ್ರಾನ್ಸ್‌ಪೋರ್ಟ್ ಮೀಡಿಯಾ (ವಿಟಿಎಂ) ಮೂಲಕ ಸ್ವ್ಯಾಬ್‌ಗಳನ್ನು ಸಂಗ್ರಹಿಸಲು 2,200 ರೂ.ಗಳನ್ನು ವಿಧಿಸಲಾಗುವುದು. ಒಂದು ವೇಳೆ ಮನೆಯಿಂದ ಸ್ವ್ಯಾಬ್ ಸಂಗ್ರಹಿಸಿದರೆ 2,800 ರೂ. ವೆಚ್ಚವಾಗಲಿದೆ' ಎಂದು ಆರೋಗ್ಯ ಇಲಾಖೆ ಘೋಷಿಸಿದೆ.

ಆರಂಭದಲ್ಲಿ ಕೊವಿಡ್ ಪರೀಕ್ಷೆ ಶುಲ್ಕ 5200 ರೂಪಾಯಿ ಇತ್ತು. ಅದನ್ನು ಕಡಿಮೆ ಮಾಡಿ 4400 ರೂಪಾಯಿ ಕೊರೊನಾ ಪರೀಕ್ಷೆ ಮಾಡಲಾಯಿತು. ಈಗ ಮತ್ತೊಮ್ಮೆ ಬೆಲೆ ಇಳಿಕೆ ಮಾಡಲಾಗಿದೆ.

Maharashtra Government caps maximum price for COVID19 tests Rs 2200

ಕೊವಿಡ್-19 ಪರೀಕ್ಷೆಗಾಗಿ ಪ್ರಸ್ತುತ ರಾಜ್ಯದಲ್ಲಿ 91 ಲ್ಯಾಬ್‌ಗಳಿವೆ ಮತ್ತು ಸುಮಾರು ನಾಲ್ಕರಿಂದ ಐದು ಪ್ರಯೋಗಾಲಯಗಳು ನಡೆಯುತ್ತಿವೆ ಎಂದು ಸಚಿವರು ಹೇಳಿದ್ದಾರೆ. ಅಂದ್ಹಾಗೆ, ಖಾಸಗಿ ಲ್ಯಾಬ್‌ಗಳಲ್ಲಿ ಬೆಲೆ ನಿಗದಿ ಮಾಡಲು ಸರ್ಕಾರದ ಕಡೆಯಿಂದ ಸಮಿತಿಯೊಂದನ್ನು ರಚಿಸಿ ವರದಿ ಪಡೆದುಕೊಂಡಿದೆ. ಆ ಬಳಿಕವಷ್ಟೇ 2200 ರೂಪಾಯಿ ನಿಗದಿ ಪಡಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಐಸಿಎಂಆರ್ ಆದೇಶದಿಂದ ಇನ್ನುಳಿದ ರಾಜ್ಯಗಳಲ್ಲಿ ಕೊವಿಡ್ ಪರೀಕ್ಷೆಗೆ 4500 ರೂಪಾಯಿ ನಿಗದಿಯಾಗಿದೆ.

English summary
Maharashtra Government caps maximum price for COVID19 tests (RT-PCR) at Rs 2200, the earlier price was 4400.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X