ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ಬೆಲೆ ನಿಗದಿ ಪಡಿಸಿದ ಸರ್ಕಾರ

|
Google Oneindia Kannada News

ಮುಂಬೈ, ಜೂನ್ 4: ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡವರಿಗೆ ಬ್ಲ್ಯಾಕ್ ಫಂಗಸ್ ಅಥವಾ ಮೂಕೋರ್ಮೈಕೋಸಿಸ್ ಈಗ ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಮಹಾರಾಷ್ಟ್ರದಲ್ಲಿ ಈ ಸಾಂಕ್ರಾಮಿಕ ರೋಗಕ್ಕೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳಿಗೆ ಅಲ್ಲಿನ ಸರ್ಕಾರ ಬೆಲೆ ನಿಗದಿಪಡಿಸಿದೆ.

ಮಹಾರಾಷ್ಟ್ರದಲ್ಲಿ ಈ ಮಾರಕ ಫಂಗಸ್‌ಗೆ ತುತ್ತಾಗಿರುವವರ ಸಂಖ್ಯೆ 5000 ದಾಟಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳು ಈ ರೋಗಿಗಳ ಚಿಕಿತ್ಸೆಗೆ ಮನಬಂದಂತೆ ದರ ನಿಗದಿಪಡಿಸದಂತೆ ಸೂಚಿಸಿದೆ. ರಾಜ್ಯ ಆರೋಗ್ಯ ಇಲಾಖೆ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ಬಾಂಬೆ ಪಬ್ಲಿಕ್ ಟ್ರಸ್ಟ್ಸ್ ಆಕ್ಟ್, 1950 ರ ಅಡಿಯಲ್ಲಿ ನೋಂದಾಯಿಸಲಾದ ಎಲ್ಲಾ ಆಸ್ಪತ್ರೆಗಳು ಬ್ಲ್ಯಾಕ್‌ಫಂಗಸ್ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ನಿಗದಿಪಡಿಸಿದ ಶುಲ್ಕವನ್ನು ಅನುಸರಿಸಲು ತಿಳಿಸಿದೆ.

ಬ್ರಿಟನ್‌ಗೆ ಮಾರಕವಾಗುತ್ತಿದೆ ಕೋವಿಡ್-19 ಡೆಲ್ಟಾ ರೂಪಾಂತರಿಬ್ರಿಟನ್‌ಗೆ ಮಾರಕವಾಗುತ್ತಿದೆ ಕೋವಿಡ್-19 ಡೆಲ್ಟಾ ರೂಪಾಂತರಿ

ಈ ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್‌ನ ಚಿಕಿತ್ಸೆಗೆ ಮಹಾರಾಷ್ಟ್ರ ರಾಜ್ಯ ಸರ್ಕಾರ 28 ವಿಧದ ಶಸ್ತ್ರಚಿಕಿತ್ಸೆಗಳನ್ನು ಗುರುತಿಸಿದೆ. ಈ ಶಸ್ತ್ರಚಿಕಿತ್ಸೆಗಳಿಗೆ ಕನಿಷ್ಟ 6 ಸಾವಿರದಿಂದ ಒಂದು ಲಕ್ಷದವರೆಗೆ ಬೆಲೆ ನಿಗದಿಗೊಳಿಸಿದೆ. ಇದು ಪ್ರದೇಶ ಮತ್ತು ಚಿಕಿತ್ಸೆಯ ಸಂಕೀರ್ಣತೆಯನ್ನು ಅವಲಂಬಿಸಿರುತ್ತದೆ. ಈ ಆದೇಶ ಜುಲೈ 31ರ ವರೆಗೆ ಜಾರಿಯಲ್ಲಿರಲಿದೆ ಎಂದು ಸರ್ಕಾರ ತಿಳಿಸಿದೆ.

Maharashtra government caps Black Fungus treatment rates for pvt hospitals

"ಮುಂಬೈ, ಪುಣೆ, ನಾಗ್ಪುರದಂತಹ ಮೆಟ್ರೋ ನಗರಗಳಲ್ಲಿ ಕೆಲವು ಸುಸಜ್ಜಿತ ಖಾಸಗಿ ಆಸ್ಪತ್ರೆಗಳಿವೆ. ಅಲ್ಲಿ ಮ್ಯೂಕೋಮೈಕೋಸಿಸ್ ಪ್ರಕರಣಗಳನ್ನು ನಿರ್ವಹಿಸಲು ಮೆದುಳು, ಮೂಗು, ಕಣ್ಣು, ಕಿವಿ ತಜ್ಞರು ಲಭ್ಯವಿರುತ್ತಾರೆ. ಸಾಮಾನ್ಯವಾಗಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳು ಎಂದು ಕರೆಯಲ್ಪಡುವ ಅಂತಾ ಆಸ್ಪತ್ರೆಗಳಲ್ಲಿ ರೋಗಿ ಚಿಕಿತ್ಸೆಗೆ ಬಯಸಿದರೆ ಶುಲ್ಕಗಳು ಸಾಮಾನ್ಯವಾಗಿ ದೊಡ್ಡದಾಗಿರುತ್ತವೆ. ಆದರೆ ಈ ಅಧಿಸೂಚನೆಯಿಂದಾಗಿ ಈ ಬೆಲೆಗಳು ಕಡಿಮೆಯಾಗುತ್ತದೆ. ರೋಗಿಗಳು ಅಂತಹ ಸುಸಜ್ಜಿತ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ಪಡೆಯಬಹುದು" ಎಂದು ಸಾರ್ವಜನಿಕ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಮ್ಲಜನಕ ಸಾಂದ್ರಕದ ಬೆಲೆ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರಆಮ್ಲಜನಕ ಸಾಂದ್ರಕದ ಬೆಲೆ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರ

ಈ ಅಧಿಸೂಚನೆಯ ಪ್ರಕಾರ ರೋಗಿಗಳಿಗೆ ಆರೋಗ್ಯ ಸೇವೆ ನೀಡಲು ಆಸ್ಪತ್ರೆಗಳು ಅಥವಾ ವೈದ್ಯರು ನಿರಾಕರಿಸಿದರೆ ವಿವಿಧ ಕಾನೂನುಗಳ ಅಡಿಯಲ್ಲಿ ದಂಡ ವಿಧಿಸುವ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.

English summary
Maharashtra government caps Black Fungus treatment rates for pvt hospitals. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X