ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಅನ್ ಲಾಕ್: ಬಟ್ಟೆ ಅಂಗಡಿಗಳ ಟ್ರಯಲ್ ರೂಮ್ ನಿಷೇಧ

|
Google Oneindia Kannada News

ಮುಂಬೈ, ಮೇ 31: ಮಹಾರಾಷ್ಟ್ರ ಸರ್ಕಾರ ಮೂರು ಹಂತದಲ್ಲಿ ಲಾಕ್‌ ಡೌನ್ ಸಡಿಲಿಕೆ ಅನ್ನು ಮಾಡಲಾಗುತ್ತದೆ. Mission Begin Again ಎಂಬ ವಾಕ್ಯದ ಮೂಲಕ ಮತ್ತೆ ಸಹಜ ಜೀವನಕ್ಕೆ ಮಹಾರಾಷ್ಟ್ರ ಮರಳುತ್ತಿದೆ.

ಮಹಾರಾಷ್ಟ್ರ ಭಾರತದಲ್ಲಿಯೇ ಅತಿ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿದೆ. ಬರೋಬ್ಬರಿ 65168 ಕೇಸ್‌ಗಳು ಪತ್ತೆಯಾಗಿವೆ. ಆದರೂ, ಲಾಕ್‌ ಡೌನ್ ಸಡಿಲಿಕೆ ಮಾಡುವ ಅನಿವಾರ್ಯತೆ ಇದೆ. ಕೊರೊನಾ ವೈರಸ್‌ಗೆ ಲಾಕ್‌ಡೌನ್ ಒಂದೇ ಪರಿಹಾರವಲ್ಲ ಎಂದು ಅನೇಕ ರಾಜ್ಯ ಸರ್ಕಾರಗಳು ತಿಳಿಸಿವೆ.

ಅಂತರರಾಜ್ಯ ಪ್ರಯಾಣಿಕರು ಕರ್ನಾಟಕಕ್ಕೆ ಬರಲು ಹೊಸ ಮಾರ್ಗಸೂಚಿಅಂತರರಾಜ್ಯ ಪ್ರಯಾಣಿಕರು ಕರ್ನಾಟಕಕ್ಕೆ ಬರಲು ಹೊಸ ಮಾರ್ಗಸೂಚಿ

ಜೂನ್ 3ಕ್ಕೆ ಮೊದಲ ಹಂತ, ಜೂನ್ 5ಕ್ಕೆ ಎರಡನೇ ಹಂತ ಹಾಗೂ ಜೂನ್ 8ಕ್ಕೆ ಮೂರನೇ ಹಂತದ ಮೂಲಕ ಲಾಕ್‌ಡೌನ್ ಸಡಿಲಿಕೆ ಆಗಲಿದೆ. ಮೊದಲ ಹಂತದಲ್ಲಿ ಉದ್ಯಾನವನ ಹಾಗೂ ಕ್ರೀಡಾಂಗಣ, ಎರಡನೇ ಹಂತದಲ್ಲಿ ಮಾಲ್ ಮತ್ತು ಮಾರುಕಟ್ಟೆ, ಮೂರನೇ ಹಂತದಲ್ಲಿ ಸ್ಪಾ, ಸಲೂನ್, ಶಾಲೆಗಳನ್ನು ತೆರೆಯಲು ಇರುವ ನಿರ್ಬಂಧ ಹಾಗೆಯೇ ಮುಂದುವರೆಯಲಿದೆ.

ಉದ್ಯಾನವನ, ಆಟದ ಮೈದಾನ

ಉದ್ಯಾನವನ, ಆಟದ ಮೈದಾನ

ಜೂನ್ 3 ರಿಂದ ದೈಹಿಕ ಚಟುವಟಿಕೆಗಳಾದ ಸೈಕ್ಲಿಂಗ್, ಜಾಗಿಂಗ್, ಕಡಲತೀರಗಳು, ಉದ್ಯಾನವನಗಳು, ಆಟದ ಮೈದಾನಗಳು, ಉದ್ಯಾನಗಳು ಮತ್ತು ವಾಯುವಿಹಾರಕ್ಕೆ ಅವಕಾಶ ನೀಡಲಾಗಿದೆ. ಕ್ರೀಡಾ ಸಂಕೀರ್ಣಗಳು ಮತ್ತು ಸ್ಟೇಡಿಯಾಗಳಲ್ಲಿ ವ್ಯಾಯಾಮ ಮಾಡಬಹುದಾಗಿದೆ. ಆದರೆ, ಬೆಳಿಗ್ಗೆ 5 ರಿಂದ ಸಂಜೆ 7 ರವರೆಗೆ ಮಾತ್ರ ಅನುಮತಿಸಲಾಗಿದೆ. ಈ ವೇಳೆ ಯಾವುದೇ ಗುಂಪು ಚಟುವಟಿಕೆ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ.

ಟ್ರಯಲ್ ರೂಮ್‌ಗೆ ಅನುಮತಿ ಇಲ್ಲ

ಟ್ರಯಲ್ ರೂಮ್‌ಗೆ ಅನುಮತಿ ಇಲ್ಲ

ಜೂನ್ 5 ರಿಂದ ಮಾಲ್‌ಗಳು ಮತ್ತು ಮಾರುಕಟ್ಟೆ ಸಂಕೀರ್ಣಗಳನ್ನು ಹೊರತುಪಡಿಸಿ ಎಲ್ಲಾ ಮಾರುಕಟ್ಟೆಗಳನ್ನು ತೆರೆಯಬಹುದಾಗಿದೆ. ಆದರೆ, ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ಮಾತ್ರ ಅವಕಾಶವಿದೆ. ಬಟ್ಟೆ ಅಂಗಡಿಗಳಲ್ಲಿ ಟ್ರಯಲ್ ರೂಮ್‌ಗೆ ಅನುಮತಿ ಇಲ್ಲ. ಸಾಮಾಜಿಕ ಅಂತರ ಇಲ್ಲದೆ, ಜನಸಂದಣಿ ಕಂಡು ಬಂದರೆ, ಅಧಿಕಾರಿಗಳು ತಕ್ಷಣವೇ ಅಂತಹ ಅಂಗಡಿಗಳು ಅಥವಾ ಮಾರುಕಟ್ಟೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ.

ಜೂನ್ 1ರಿಂದ 30ರ ತನಕ 5ನೇ ಹಂತದ ಲಾಕ್ ಡೌನ್; ಮಾರ್ಗಸೂಚಿ ವಿವರಗಳುಜೂನ್ 1ರಿಂದ 30ರ ತನಕ 5ನೇ ಹಂತದ ಲಾಕ್ ಡೌನ್; ಮಾರ್ಗಸೂಚಿ ವಿವರಗಳು

ಜೂನ್ 8ರ ನಂತರ

ಜೂನ್ 8ರ ನಂತರ

ಜೂನ್ 8ರ ನಂತರವೂ ಹಲವಾರು ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಶಾಲೆಗಳು, ಕಾಲೇಜುಗಳು, ಶೈಕ್ಷಣಿಕ ತರಬೇತಿ ಮತ್ತು ತರಬೇತಿ ಸಂಸ್ಥೆಗಳು, ಮೆಟ್ರೋ ರೈಲು, ಚಿತ್ರಮಂದಿರಗಳು, ಜಿಮ್, ಈಜುಕೊಳಗಳು, ಸಭಾಂಗಣಗಳು, ಸ್ಪಾ, ಸಲೊನ್, ಕಟ್ಟಿಂಗ್ ಶಾಪ್, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲು ಸದ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

ಪ್ರಯಾಣಿಕರ ಗಮನಕ್ಕೆ

ಪ್ರಯಾಣಿಕರ ಗಮನಕ್ಕೆ

ಅಗತ್ಯ ವಸ್ತುಗಳಿಗೆ ದೂರದ ಸರಬರಾಜು ಮಾಡಲು ಅನುಮತಿ ನೀಡಿಲ್ಲ. ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಸಾರಿಗೆಯಲ್ಲಿ ಪ್ರಯಾಣಿಕರಿಗೆ ಪ್ರಯಾಣಿಸಬಹುದು. ದ್ವಿಚಕ್ರ ವಾಹನಗಳು ಒಬ್ಬರು ಮಾತ್ರ ಪ್ರಯಾಣ ಮಾಡಬೇಕು. ಆಟೋ, ಕಾರ್‌ಗಳಲ್ಲಿ ಒಬ್ಬರು ಅಥವಾ ಇಬ್ಬರು ಪ್ರಯಾಣ ಮಾಡಬಹುದು. ಎಲ್ಲ ಖಾಸಗಿ ಸಂಸ್ಥೆಗಳು 10 ರಷ್ಟು ಉದ್ಯೋಗಿಗಳನ್ನು ಬಳಸಿಕೊಂಡು ಕಾರ್ಯ ನಿರ್ವಹಿಸಬೇಕು.

English summary
Unlock Maharashtra: Maharashtra government announced new guidelines for the extended lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X