• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತ್ರಿಮೈತ್ರಿ ಸರ್ಕಾರ ಬೆಂಬಲಕ್ಕೆ ನಿಂತ 169 ಶಾಸಕರು, ಸರ್ಕಾರ ಭದ್ರ

|

ಮುಂಬೈ, ನವೆಂಬರ್ 30: ಎನ್‌ಸಿಪಿ-ಶಿವಸೇನಾ-ಕಾಂಗ್ರೆಸ್‌ ನ ತ್ರಿಮೈತ್ರಿ ಸರ್ಕಾರ ಶನಿವಾರ ಬಹುಮತ ಸಾಬೀತಿನ ಅಗ್ನಿಪರೀಕ್ಷೆ ಎದುರಿಸುತ್ತಿದೆ. ವಿಶ್ವಾಸಮತದಲ್ಲಿ ಜಯಿಸುವ ವಿಶ್ವಾಸದಲ್ಲಿದೆ.

ಗುರುವಾರವಷ್ಟೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ಅವರು ಪ್ರಮಾಣ ವಚನ ಸ್ವೀಕರಿಸಿದ್ದು, ಇಂದು ಶನಿವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.

ತಮಗೆ 162 ಶಾಸಕರ ಬೆಂಬಲ ಇರುವುದಾಗಿ ಕೆಲವು ದಿನಗಳ ಹಿಂದೆ ಹೇಳಿದ್ದ ಮೈತ್ರಿ ಪಕ್ಷಗಳು, ಇಂದಿನ ವಿಶ್ವಾಸಮತವನ್ನು ಸುಲಭವಾಗಿ ಜಯಿಸುವ ವಿಶ್ವಾಸದಲ್ಲಿವೆ.

Maharashtra Coalition Government Floor Test LIVE Updates

ಎನ್‌ಸಿಪಿ ಶಾಸಕ ದಿಲೀಪ್ ವಾಲ್ಸೆ ಪಾಟೀಲ್ ಅವರು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಆಗಿದ್ದು, ಇಂದಿನ ವಿಶ್ವಾಸಮತ ಯಾಚನೆ ಕಾರ್ಯವನ್ನು ನಡೆಸಿಕೊಡಲಿದ್ದಾರೆ.

ಡಿಸೆಂಬರ್ 3 ರ ಒಳಗೆ ಬಹುಮತ ಸಾಬೀತು ಮಾಡುವಂತೆ ರಾಜ್ಯಪಾಲ ಬಿ.ಎಸ್.ಕೊಶ್ಯಾರಿ ಸೂಚಿಸಿದ್ದರು. ಹಾಗಾಗಿ ಇಂದು ವಿಶ್ವಾಮತ ಯಾಚನೆ ಮಾಡಲು ಮೈತ್ರಿ ಸರ್ಕಾರ ಸಜ್ಜಾಗಿದೆ. ಇಂದು ಮಧ್ಯಾಹ್ನ 2 ಗಂಟೆ ವೇಳೆಗೆ ವಿಶ್ವಾಸಮತ ಯಾಚನೆ ನಡೆಯಲಿದೆ.

ಹಲವು ನಾಟಕೀಯ ತಿರುವುಗಳ ನಂತರ ಗುರುವಾರ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರೊಂದಿಗೆ ಎನ್‌ಸಿಪಿ, ಶಿವಸೇನಾ, ಕಾಂಗ್ರೆಸ್‌ನ ಆರು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

Newest First Oldest First
3:17 PM, 30 Nov
ಎನ್‌ಸಿಪಿಯ 54 ಶಾಸಕರು, ಕಾಂಗ್ರೆಸ್‌ನ 44 ಶಿವಸೇನಾ ಪಕ್ಷದ 56 ಶಾಸಕರ ಜೊತೆಗೆ ಹದಿನೈದು ಪಕ್ಷೇತರ ಶಾಸಕರು ಸರ್ಕಾರದ ಪರ ಮತ ಚಲಾಯಿಸಿದರು. ಒವೈಸಿ ಯ ಎಐಎಂಐಎಂ ನ ಇಬ್ಬರು ಶಾಸಕರು, ಸಿಪಿಐಎಂ ನ ಒಬ್ಬ ಶಾಸಕ ಹಾಗೂ ಎಂಎನ್‌ಎಂ ನ ಒಬ್ಬ ಶಾಸಕ ತಟಸ್ಥವಾಗಿದ್ದು, ಮತ ಚಲಾಯಿಸಲಿಲ್ಲ.
2:54 PM, 30 Nov
ತಲೆ ಎಣಿಕೆ ಕಾರ್ಯ ಸಾಗುತ್ತಿದ್ದು, ಈಗಾಗಲೇ ಕನಿಷ್ಟ ಬಹುಮತದ ಸಂಖ್ಯೆ 145 ಅನ್ನು ದಾಟಿದ್ದು, 169 ಸಂಖ್ಯಾಬಲವನ್ನು ಠಾಕ್ರೆ ಸರ್ಕಾರ ಗಳಿಸುವ ಸಾಧ್ಯತೆ ಇದೆ.
2:51 PM, 30 Nov
ಬಿಜೆಪಿಯಿಂದ ಆಯ್ಕೆ ಆಗಿದ್ದ ಹಂಗಾಮಿ ಸ್ಪೀಕರ್ ಅನ್ನು ತೆರವುಗೊಳಿಸಿ ಹೊಸ ಹಂಗಾಮಿ ಸ್ಪೀಕರ್ ಅನ್ನು ಆಯ್ಕೆ ಮಾಡಿದ್ದನ್ನು ದೇವೇಂದ್ರ ಫಡ್ನವೀಸ್ ತೀವ್ರವಾಗಿ ವಿರೋಧಿಸಿದ್ದು. ಗುರುವಾರ ನಡೆದ ಪ್ರಮಾಣ ವಚನ ಕಾರ್ಯವೂ ಸಹ ಸಂವಿಧಾನಾತ್ಮಕವಾಗಿ ನಡೆದಿಲ್ಲ. ಹಲವರು ಶರದ್ ಪವಾರ್, ಸೋನಿಯಾ ಗಾಂಧಿ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಇದು ಸಂವಿಧಾನದ ನಿಯಮಗಳಿಗೆ ವಿರುದ್ಧ. ಹಂಗಾಮಿ ಸ್ಪೀಕರ್ ಅನ್ನು ಬದಲಾಯಿಸಿರುವುದು ದೇಶದಲ್ಲಿ ಇದೇ ಮೊದಲು, ಇದರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.
2:47 PM, 30 Nov
ಸದನದ ಒಳಗೆ ತಲೆಎಣಿಕೆ ನಡೆಯುತ್ತಿದ್ದು, ಶಾಸಕರು ಒಬ್ಬೊಬ್ಬರಾಗಿ ಎದ್ದು ತನ್ನ ಹೆಸರು, ಕ್ಷೇತ್ರವನ್ನು ಹೇಳಿ ಸಂಖ್ಯೆಯನ್ನು ಹೇಳುತ್ತಿದ್ದಾರೆ.
2:39 PM, 30 Nov
ಸದನದ ಒಳಗೆ ತಲೆಎಣಿಕೆ ಪ್ರಕ್ರಿಯೆ ಜಾರಿಯಲ್ಲಿದ್ದು, ಬಿಜೆಪಿ ಶಾಸಕರು ಸದನದಿಂದ ಹೊರನಡೆದಿದ್ದರಿಂದ ಸುಲಭವಾಗಿ ವಿಶ್ವಾಸಮತ ಯಾಚನೆ ಮುಗಿಯಲಿದೆ.
2:38 PM, 30 Nov
ವಿಶ್ವಾಸಮತ ಯಾಚನೆಯನ್ನು ವಿರೋಧಿಸಿ ಬಿಜೆಪಿ ಶಾಸಕರು ಸದನದಿಂದ ಹೊರನಡೆದಿದ್ದಾರೆ. ಸದನದಿಂದ ಹೊರಗೆ ಬಂದ ದೇವೇಂದ್ರ ಫಡ್ನವೀಸ್ ಸುದ್ದಿಗಾರರೊಂದಿಗೆ ಮಾತನಾಡಿ, ಈ ಅಧಿವೇಶನವು ಅಸಾಂವಿಧಾನಿಕ ಎಂದು ಆರೋಪಿಸಿದರು.
2:37 PM, 30 Nov
ವಿಧಾನಭವನದ ಬೆಲ್ ಹೊಡೆದಿದ್ದು, ಎಲ್ಲ ಬಾಗಿಲುಗಳನ್ನು ಬಂದ್ ಮಾಡಲು ಸ್ಪೀಕರ್ ಅವರು ಸೂಚಿಸಿದರು.
2:36 PM, 30 Nov
ಹಲವು ಶಾಸಕರಿಗೆ ಮಧ್ಯರಾತ್ರಿಯ ನಂತರ ಮಾಹಿತಿ ನೀಡಿದ ಕಾರಣ ಎಲ್ಲಾ ಬಿಜೆಪಿ ಶಾಸಕರು ಸದನದಲ್ಲಿ ಹಾಜರಿಲ್ಲ ಎಂದ ದೇವೇಂದ್ರ ಫಡ್ನವೀಸ್. ಹಂಗಾಮಿ ಸ್ಪೀಕರ್ ಅನ್ನು ಏಕೆ ಬದಲಾಯಿಸಲಾಯಿತು ಎಂದು ಪ್ರಶ್ನೆ ಮಾಡಿದರು.
2:34 PM, 30 Nov
ಮಹಾರಾಷ್ಟ್ರದ ಇತಿಹಾಸದಲ್ಲಿ ಸ್ಪೀಕರ್ ಆಯ್ಕೆಯ ಮೊದಲು ವಿಶ್ವಾಸಮತ ಯಾಚನೆ ನಡೆಯುತ್ತಿದೆ ಎಂದು ಬಿಜೆಪಿಯ ದೇವೇಂದ್ರ ಫಡ್ನವೀಸ್ ಹೇಳಿದರು. ಇದರ ಬೆನ್ನಲ್ಲೆ ಬಿಜೆಪಿ ಶಾಸಕರು ಗಲಾಟೆ ಆರಂಭಿಸಿದರು.
2:33 PM, 30 Nov
ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ತಲೆ ಎಣಿಕೆಗೆ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
1:24 PM, 30 Nov
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಇಂದು ಸಿಎಂ ಉದ್ಧವ್ ಠಾಕ್ರೆ ವಿಶ್ವಾಸಮತ ಯಾಚನೆ ಮಾಡುತ್ತಿದ್ದು, ಈ ಸಂಭಂದ ಕಾಂಗ್ರೆಸ್ ಪಕ್ಷವು ತನ್ನ ಶಾಸಕರಿಗೆ ವ್ಹಿಪ್ ಜಾರಿ ಮಾಡಿ, ವಿಶ್ವಾಸಮತದ ಪರ ಮತ ಚಲಾಯಿಸುವಂತೆ ಆದೇಶಿಸಿದೆ.
12:32 PM, 30 Nov
ಕಾಂಗ್ರೆಸ್‌ ನ ನಾನಾ ಪಟೋಲೆ ಅವರು ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಎನ್‌ಸಿಪಿ-ಶಿವಸೇನಾ-ಕಾಂಗ್ರೆಸ್‌ ಮುಖಂಡರು ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು.
10:53 AM, 30 Nov
ಬಿಜೆಪಿ ಸಹ ಸ್ಪೀಕರ್ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದು, ಕಿಸನ್ ಕತೋರೆ ಅವರನ್ನು ಸ್ಪೀಕರ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಸ್ಪೀಕರ್ ಅಭ್ಯರ್ಥಿಯಾಗಿ ನಾನಾ ಪಟೋಲೆ ಅವರು ಮೈತ್ರಿ ಪಕ್ಷದಿಂದ ನಾಮಪತ್ರ ಸಲ್ಲಿಸಲಿದ್ದಾರೆ. ಇವರು ಕಾಂಗ್ರೆಸ್‌ನ ಶಾಸಕರಾಗಿದ್ದಾರೆ.
10:48 AM, 30 Nov
ಹಂಗಾಮಿ ಸ್ಪೀಕರ್ ಆಗಿದ್ದ ಕಾಳಿದಾಸ ಕೊಲಾಂಬ್ಕರ್ ಅವರನ್ನು ಬದಲಾಯಿಸಿ ದಿಲಿಪ್ ವಾಲ್ಸೆ ಪಾಟೀಲ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಇದು ನಿಯಮಗಳಿಗೆ ವಿರುದ್ಧ. ಪ್ರಮಾಣ ವಚನ ಸಹ ನಿಯಮಗಳಿಗೆ ಬದ್ಧವಾಗಿ ತೆಗೆದುಕೊಳ್ಳಲಾಗಿಲ್ಲ. ಹೊಸ ಮೈತ್ರಿ ಸರ್ಕಾರವು ನಿಯಮಗಳನ್ನು ಉಲ್ಲಂಘಿಸುತ್ತಿದೆ. ಈ ಬಗ್ಗೆ ನಾವು ರಾಜ್ಯಪಾಲರಿಗೆ ದೂರು ನೀಡುತ್ತೇವೆ, ಸುಪ್ರೀಂಕೋರ್ಟ್ ನಲ್ಲಿಯೂ ಅರ್ಜಿ ಸಲ್ಲಿಸಲಿದ್ದೇವೆ- ಚಂದ್ರಕಾಂತ್ ಪಾಟೀಲ್, ಬಿಜೆಪಿ ಶಾಸಕ
10:43 AM, 30 Nov
ಮಹಾರಾಷ್ಟ್ರ ವಿಧಾನಭವನ ಕ್ಕೆ ಶಾಸಕರು ಆಗಮಿಸುತ್ತಿದ್ದು, ಎನ್‌ಸಿಪಿ-ಶಿವಸೇನಾ-ಕಾಂಗ್ರೆಸ್‌ ನ ಸದಸ್ಯರು ಉತ್ಸುಕತೆಯಿಂದ ಓಡಾಡುತ್ತಿದ್ದಾರೆ. ಮೊದಲಿಗೆ ಸ್ಪೀಕರ್ ಆಯ್ಕೆ ನಡೆಯಲಿದೆ. ನಂತರ ವಿಶ್ವಾಸಮತ ಯಾಚನೆ ನಡೆಯಲಿದೆ.
10:37 AM, 30 Nov
ಕಾಂಗ್ರೆಸ್‌ನ ಹಿರಿಯ ಶಾಸಕ ನಾನಾ ಪಟೋಲೆ ಅವರು ಸ್ಪೀಕರ್ ಸ್ಥಾನಕ್ಕೆ ಮೈತ್ರಿ ಪಕ್ಷಗಳ ಅಭ್ಯರ್ಥಿ ಆಗಿದ್ದಾರೆಂದು ಕಾಂಗ್ರೆಸ್ ಮುಖಂಡ ಬಾಳಾಸಾಹೇಬ್ ತಾರೋಟ್ ಹೇಳಿದ್ದಾರೆ.
10:35 AM, 30 Nov
ವಿಶ್ವಾಸಮತವನ್ನು ಸಾಬೀತು ಮಾಡುತ್ತೇವೆ ಎಂದು ಅಜಿತ್ ಪವಾರ್ ವಿಶ್ವಾಸದಿಂದ ನುಡಿದಿದ್ದಾರೆ. ಅಜಿತ್ ಪವಾರ್ ನಿನ್ನೆ ಸಂಜೆ ಬಿಜೆಪಿ ಸಂಸದ ಪ್ರತಾಪ್ ರಾವ್ ಚಿಕ್ಕಾಲಿಕಾರ್ ಅವರನ್ನು ಭೇಟಿ ಆಗಿದ್ದರಿಂದ ಮತ್ತೆ ಬಿಜೆಪಿ ಜೊತೆ ಕೈ ಸೇರಿಸುವ ಸಾಧ್ಯತೆಯ ಬಗ್ಗೆ ಅನುಮಾನ ಹುಟ್ಟಿತ್ತು.

English summary
Maharashtra Floor Test Live Updates in Kannada: Shiv Sena chief Uddhav Thackeray along with the Maha Vikas Aghadi government will face the floor test in the Assembly today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X