ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಮೀನುಗಾರರ ಅದೃಷ್ಟದ ಮೀನು, 30 ಕೇಜಿ 5.5 ಲಕ್ಷಕ್ಕೆ ಮಾರಾಟ

|
Google Oneindia Kannada News

ಮುಂಬೈ, ಆಗಸ್ಟ್ 7: ಅದು ಘೋಲ್ ಮೀನು. ಅದನ್ನು ಮೀನುಗಾರರು ಅದೃಷ್ಟ ಅಂತಲೇ ಕರೆಯುತ್ತಾರೆ. ಮೂವತ್ತು ಕೇಜಿ ತೂಗುವ ಅಂಥ ಅದೃಷ್ಟವೊಂದು ಇಲ್ಲಿನ ಮೀನುಗಾರರ ಬಲೆಗೆ ಭಾನುವಾರ ಬಿದ್ದಿತ್ತು. ಅದರ ಮರುದಿನ, ಅಂದರೆ ಸೋಮವಾರದ ಬೆಳಗ್ಗೆ ಮೂವತ್ತು ಕೇಜಿ ಮೀನು ಐದೂವರೆ ಲಕ್ಷಕ್ಕೆ ಮಾರಾಟ ಆಯಿತು.

ಅಂದಹಾಗೆ, ಈ ದುಬಾರಿ ಮೀನು ಬಲೆಗೆ ಬಿದ್ದಿದ್ದು ಮುಂಬೈ-ಪಲ್ಘಾರ್ ಕರಾವಳಿ ಸಾಲಿನಲ್ಲಿ. ಮಹೇಶ್ ಮೆಹರ್ ಹಾಗೂ ಅವರ ಸೋದರ ಭರತ್ ತಮ್ಮ ಪುಟ್ಟ ದೋಣಿ (ಸಾಯಿಲಕ್ಷ್ಮಿ) ಜತೆಗೆ ಶುಕ್ರವಾರ ಸಮುದ್ರಕ್ಕೆ ಇಳಿಯುವಾಗ ಅಂಥದ್ದೊಂದು ಅದೃಷ್ಟ ಬರುತ್ತದೆ ಎಂಬ ನಿರೀಕ್ಷೆ ಕೂಡ ಇರಲಿಲ್ಲ. ಇತರ ಜಾತಿ ಮೀನಿನ ಜತೆ ಘೋಲ್ ಕೂಡ ಬಿದ್ದಿತ್ತು.

ಬುಡಮೇಲಾದ ಮೀನು ವ್ಯಾಪಾರ: ಸಾಮಾಜಿಕ ಜಾಲತಾಣದ ಮೊರೆಹೋದ ಮಹಿಳೆಯರು ಬುಡಮೇಲಾದ ಮೀನು ವ್ಯಾಪಾರ: ಸಾಮಾಜಿಕ ಜಾಲತಾಣದ ಮೊರೆಹೋದ ಮಹಿಳೆಯರು

ಈ ಮೀನಿನ ಅಂಗಗಳಿಗೆ ವೈದ್ಯಕೀಯ ಮೌಲ್ಯವಿದೆ. ಸ್ಥಳೀಯ ಮಾರುಕಟ್ಟೆಗೆ ಹೋಲಿಸಿದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಸಿಕ್ಕಾಪಟ್ಟೆ ಜಾಸ್ತಿ ಇದೆ. ಅಂದರೆ ಕೇಜಿಗೆ 800ರಿಂದ 1000 ರುಪಾಯಿ ಬೆಲೆ ಇದೆ. ಸಿಂಗಾಪೂರ್, ಮಲೇಷಿಯಾ, ಹಾಂಕಾಂಗ್, ಜಪಾನ್ ನಲ್ಲಿ ವಿಪರೀತ ಬೇಡಿಕೆಯಿದೆ.

Maharashtra fishermen brothers net a fish lottery worth Rs 5.5 lakh

ಮಹೇಶ್ ಹಾಗೂ ಭರತ್ ಗೆ ಸಿಕ್ಕ ಮೀನು ಮರು ದಿನ ಮಾರುಕಟ್ಟೆಯಲ್ಲಿ ಇಪ್ಪತ್ತು ನಿಮಿಷದಲ್ಲೇ ಮಾರಾಟವಾಗಿದೆ. ಬಂದ ದುಡ್ಡಲ್ಲಿ ದೋಣಿ ರಿಪೇರಿ ಮಾಡಿಸಿ, ಬಲೆ ಸರಿ ಮಾಡಿಸಿಕೊಳ್ಳಬೇಕು ಎಂದು ಈ ಸೋದರರು ಹೇಳಿದ್ದಾರೆ.

ಮೀನು ಮಾರಿ ಟ್ರೋಲ್ ಆದ ಹುಡುಗಿ ಈಗ ramp ಮೇಲೆ!ಮೀನು ಮಾರಿ ಟ್ರೋಲ್ ಆದ ಹುಡುಗಿ ಈಗ ramp ಮೇಲೆ!

ಘೋಲ್ ಮೀನು ಹಿಂದೂ ಮಹಾಸಾಗರ ಹಾಗೂ ಪೆಸಿಫಿಕ್ ಸಾಗರದಲ್ಲಿ ಕಂಡುಬರುತ್ತದೆ. ಪರ್ಷಿಯನ್ ಗಲ್ಫ್ ರಾಷ್ಟ್ರಗಳು, ಪಾಕಿಸ್ತಾನ, ಭಾರತ, ಬಾಂಗ್ಲಾದೇಶ್, ಬರ್ಮಾ, ಉತ್ತರ ಜಪಾನ್, ಪಪುವಾ ನ್ಯೂ ಗಿನಿವಾ ಹಾಗೂ ಉತ್ತರ ಆಸ್ಟ್ರೇಲಿಯಾದಲ್ಲಿ ಘೋಲ್ ಮೀನು ಕಂಡುಬರುತ್ತದೆ.

English summary
Two fishermen brothers from Maharashtra sold a 30-kg ghoghol fish for Rs 5.5 lakh on Monday. The fish is a delicacy, but more than that it is prized in east Asia for the medicinal properties of its internal organs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X