ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಚುನಾವಣೆಯಲ್ಲಿ ಕುಟುಂಬ ರಾಜಕೀಯದ ಬೇರುಗಳು

|
Google Oneindia Kannada News

ಮುಂಬೈ, ಅಕ್ಟೋಬರ್ 15: ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನಾ ಮೈತ್ರಿ ಸಾಧಿಸಿ ಕಣಕ್ಕಿಳಿದಿವೆ. ಕಾಂಗ್ರೆಸ್ ಹಾಗೂ ಎನ್ಸಿಪಿ ವಿರುದ್ಧ ನೇರ ಸಮರ ಸಾರಿವೆ. ಅಕ್ಟೋಬರ್ 21ರಂದು ಮತದಾನ ಹಾಗೂ ಅಕ್ಟೋಬರ್ 24ರಂದು ಫಲಿತಾಂಶ ಹೊರಬರಲಿದೆ.

ಎಬಿಪಿ ನ್ಯೂಸ್ -ಸಿ ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟಕ್ಕೆ ಭರ್ಜರಿ ಜಯ ಸಿಗಲಿದೆ ಎಂದು ತಿಳಿದು ಬಂದಿದೆ. ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಲ್ಲಿ 3239 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಹಾಗೂ ಶಿವಸೇನಾ ಮೈತ್ರಿಕೂಟದ ವಿರುದ್ಧ ಕಾಂಗ್ರೆಸ್ ಹಾಗೂ ಎನ್ಸಿಪಿ ಮೈತ್ರಿ ವಿರುದ್ಧ ನೇರ ಹಣಾಹಣಿ ನಿರೀಕ್ಷಿಸಲಾಗಿದೆ.

ಮಹಾರಾಷ್ಟ್ರ ಚುನಾವಣೆ: ಬಿಜೆಪಿ ಮೈತ್ರಿಕೂಟಕ್ಕೆ ಸಿಹಿ ಸುದ್ದಿ ಕೊಟ್ಟ ಸಮೀಕ್ಷೆಮಹಾರಾಷ್ಟ್ರ ಚುನಾವಣೆ: ಬಿಜೆಪಿ ಮೈತ್ರಿಕೂಟಕ್ಕೆ ಸಿಹಿ ಸುದ್ದಿ ಕೊಟ್ಟ ಸಮೀಕ್ಷೆ

ರಾಯಲ್ ಫ್ಯಾಮಿಲಿ, ಸೆಲೆಬ್ರಿಟಿಗಳು, ಕುಟುಂಬ ರಾಜಕೀಯದ ಬೇರುಗಳು ಮಹಾರಾಷ್ಟ್ರದ ರಾಜಕಾರಣದಲ್ಲಿ ಬಲವಾಗಿ ಬೇರೂರಿವೆ. 288 ಸ್ಥಾನಕ್ಕಾಗಿ ಒಟ್ಟು 3,239 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಗೋಪಿನಾಥ್ ಮುಂಡೆ ಕುಟುಂಬಸ್ಥರು

ಗೋಪಿನಾಥ್ ಮುಂಡೆ ಕುಟುಂಬಸ್ಥರು

ಪಾರ್ಲಿ: ಗೋಪಿನಾಥ್ ಮುಂಡೆ ಪುತ್ರಿ ಪಂಕಜಾ ಮುಂಡೆ ಹಾಗೂ ಅವರ ಕಸಿನ್ ಧನಂಜಯ್ ಮುಂಡೆ ಅವರು ಚುನಾವಣಾ ಕಣದಲ್ಲಿದ್ದಾರೆ. ಪಂಕಜಾ ಮುಂಡೆ.

ಬೀಡ್: ಎನ್ಸಿಪಿಯ ಸಂದೀಪ್ ಕ್ಷೀರ್ ಸಾಗರ್ ಹಾಗೂ ಅವರ ಅಂಕಲ್ ಜಯದತ್ತ ಕ್ಷೀರ್ ಸಾಗರ್ (ಶಿವಸೇನಾ) ಅವರು ಕಣದಲ್ಲಿದ್ದಾರೆ.ರಾಜ್ಯದ ಉದ್ಯೋಗ ಖಾತ್ರಿ ಸಚಿವ ಜಯದತ್ ಅವರು ಮತ್ತೊಮ್ಮೆ ವಿಧಾನಸಭೆಗೆ ಪ್ರವೇಶ ಬಯಸಿದ್ದಾರೆ.

ಪಂಡಿತ್ ಕುಟುಂಬ ವರ್ಗ ಕದನ

ಪಂಡಿತ್ ಕುಟುಂಬ ವರ್ಗ ಕದನ

ಗೆವ್ರಾಯ್: ಪಂಡಿತ್ ಕುಟುಂಬ ವರ್ಗ ತುಂಬಾ ಸಂಕೀರ್ಣವಾದ ಸ್ಪರ್ಧೆಯಲ್ಲಿವೆ. ಶಿವರಾಜ್ ಪಂಡಿತ್ ಅವರು ದಶಕಗಳಿಂದ ಹೊಂದಿದ್ದ ಕ್ಷೇತ್ರದಲ್ಲಿ ಅವರ ಕಸಿನ್ ಬದಾಮ್ ರಾಮ್ ಅವರು ಪ್ರಭುತ್ವ ಹೊಂದಿದ್ದಾರೆ. ಈಗ ಬಿಜೆಪಿಯಿಂದ ಲಕ್ಷ್ಮಣ್ ಪವಾರ್ ಟಿಕೆಟ್ ಪಡೆದುಕೊಂಡಿದ್ದಾರೆ. ಎನ್ಸಿಪಿಯಿಂದ ಬದಾಮ್ ರಾಮ್ ಅಳಿಯ ಅಮರ್ ಸಿಂಗ್ ಪಂಡಿತ್ ಗೆ ಟಿಕೆಟ್ ನೀಡಲಾಗಿದೆ. ಇದಲ್ಲದೆ ಬದಾಮ್ ರಾಮ್ ಕೂಡಾ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ನಿಲಂಗೇಕರ್ ಕುಟುಂಬದವರು

ನಿಲಂಗೇಕರ್ ಕುಟುಂಬದವರು

ನಿಲಾಂಗ: ನಿಲಂಗೇಕರ್ ಕುಟುಂಬದವರು ಪ್ರಾಬಲ್ಯ ಹೊಂದಿರುವ ಈ ಕ್ಷೇತ್ರದಲ್ಲಿ ಮಾಜಿ ಸಿಎಂ ಶಿವಾಜಿರಾವ್ ಪಾಟೀಲ್ ನಿಲಂಗೇಕರ್ ಅವರ ಪುತ್ರ ಅಶೋಕ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಬಿಜೆಪಿಯಿಂದ ಅಶೋಕ್ ಅವರ ಅಳಿಯ ಸಂಭಾಜಿರಾವ್ ಪಾಟೀಲ್ ನಿಲಂಗೇಕರ್ ಅವರಿಗೆ ಸ್ಥಾನ ನೀಡಲಾಗಿದೆ. ಸಂಭಾಜಿರಾವ್ ಪಾಟೀಲ್ ಅವರ ದಿವಂಗತ ತಂದೆ ದಿಲೀಪ್ ಹಾಗೂ ಅಶೋಕ್ ಅವರು ಸೋದರರು.

ನಾಯ್ಕ್ ಕುಟುಂಬ ವರ್ಗದ ಸ್ಪರ್ಧೆ

ನಾಯ್ಕ್ ಕುಟುಂಬ ವರ್ಗದ ಸ್ಪರ್ಧೆ

ಅಹೇರಿ: ಎನ್ಸಿಪಿಯಿಂದ ಧರ್ಮರಾವ್ ಬಾಬಾ ಅತ್ರಾಮ್ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದರೆ ಅವರ ಅಳಿಯ ಹಾಲಿ ಸಚಿವ ಅಂಬರೀಷ್ ರಾವ್ ಅತ್ರಾಮ್.

ಪುಸದ್: ನಾಯ್ಕ್ ಕುಟುಂಬ ವರ್ಗದ ಸದಸ್ಯರ ನಡುವೆ ಪೈಪೋಟಿ ಜೋರಾಗಿದೆ. ಬಿಜೆಪಿಯಿಂದ ನಿಲಾಯ್ ನಾಯ್ಕ್ ಸ್ಪರ್ಧಿಸಿದ್ದರೆ, ಎನ್ಸಿಪಿಯಿಂದ ಅವರ ಸಂಬಂಧಿ ಇಂದ್ರನಿಲ್ ನಾಯ್ಕ್(ಮಾಜಿ ಶಾಸಕ, ರಾಜ್ಯ ಸಚಿವ ಮನೋಹರ್ ನಾಯ್ಕ್ ಪುತ್ರ) ಸ್ಪರ್ಧಿಸಿದ್ದಾರೆ.

English summary
A total of 3,239 candidates are in the fray for 288 seats, polling for which will be held on October 2. Here is a look at the family members who are contesting against each other in Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X