ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಚುನಾವಣೆ: ವೊರ್ಲಿಯಿಂದ ಆದಿತ್ಯ ಠಾಕ್ರೆ ಕಣಕ್ಕೆ

|
Google Oneindia Kannada News

ಮುಂಬೈ, ಸೆಪ್ಟೆಂಬರ್ 30: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ತನ್ನ 11 ಅಭ್ಯರ್ಥಿಗಳನ್ನು ಶಿವಸೇನೆ ಭಾನುವಾರ ಘೋಷಣೆ ಮಾಡಿದ್ದು, ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ವೋರ್ಲಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಆದಿತ್ಯ ಠಾಕ್ರೆ ಅವರನ್ನು ಈ ಮುನ್ನ ಶಿವಸೇನೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹಲವು ಬಾರಿ ಬಹಿರಂಗವಾಗಿಯೇ ಹೇಳಿತ್ತು. ಆದರೆ ಬಿಜೆಪಿ ಮತ್ತು ಶಿವಸೇನೆ ನಡುವೆ ಸೀಟು ಹಂಚಿಕೆ ವಿವಾದ ಎದ್ದ ಸಂದರ್ಭದಲ್ಲಿ, 'ದೇವೇಂದ್ರ ಫಡ್ನವಿಸ್ ಅವರೇ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ. ಒಪ್ಪುವವರು ಜೊತೆಗಿರಲಿ, ಇಲ್ಲವೆಂದರೆ ಮೈತ್ರಿ ಬಿಡಲಿ' ಎಂಬರ್ಥದಲ್ಲಿ ಬಿಜೆಪಿ ಮಾತನಾಡಿತ್ತು. ಆದರೆ ಬಿಜೆಪಿ ಜೊತೆ ಮೈತ್ರಿ ಕಳೆದುಕೊಳ್ಳುವುದಕ್ಕೆ ಇಷ್ಟವಿಲ್ಲದ ಶಿವಸೇನೆ ಫಡ್ನವಿಸ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಒಪ್ಪಿಕೊಂಡಿದ್ದು, ಈ ಮೈತ್ರಿ ಅಧಿಕಾರಕ್ಕೆ ಬಂದರೆ ಆದಿತ್ಯ ಠಾಕ್ರೆ ಅವರನ್ನು ಉಪಮುಖ್ಯಮಂತ್ರಿ ಹುದ್ದೆಗೆ ನೀಡಲು ಒತ್ತಾಯಿಸುವ ಸಾಧ್ಯತೆ ಇದೆ.

ಮಹಾರಾಷ್ಟ್ರದಲ್ಲಿ ಮೈತ್ರಿ ಸುಗಮ... ಶಿವಸೇನೆಗೆ ಡಿಸಿಎಂ ಪೋಸ್ಟ್ ಪಕ್ಕಾ!ಮಹಾರಾಷ್ಟ್ರದಲ್ಲಿ ಮೈತ್ರಿ ಸುಗಮ... ಶಿವಸೇನೆಗೆ ಡಿಸಿಎಂ ಪೋಸ್ಟ್ ಪಕ್ಕಾ!

Maharashtra Elections: Shiv Senas Aditya Thackeray To Contest From Worli

ಚುನಾವಣೆಗೆ ನಿಂತು ದಾಖಲೆ ಬರೆಯಲಿದ್ದಾರೆ ಆದಿತ್ಯ ಠಾಕ್ರೆ

28 ವರ್ಷ ವಯಸ್ಸಿನ ಆದಿತ್ಯ ಠಾಕ್ರೆ ಚುನಾವನೆಗೆ ಸ್ಪರ್ಧಿಸುವ ಮೂಲಕ ಒಂದು ಹೊಸ ದಾಖಲೆ ಸೃಷ್ಟಿಸಲಿದ್ದಾರೆ. ಮಹಾರಾಷ್ಟ್ರ ರಾಜಕೀಯದಲ್ಲಿ ಶಿವಸೇನೆ ಸಕ್ರಿಯವಾಗಿದ್ದರೂ, ಶಿವಸೇನೆಯ ಸಂಸ್ಥಾಪಕಾರದ ಠಾಕ್ರೆ ಕುಟುಂಬದಿಂದ ಯಾರೊಬ್ಬರೂ ಇದುವರೆಗೆ ಚುನಾವಣೆಗೆ ನಿಂತಿರಲಿಲ್ಲ. ಆದರೆ ಈ ಬಾರಿ ಆದಿತ್ಯ ಠಾಕ್ರೆ ಸ್ಪರ್ಧಿಸುತ್ತಿರುವುದು ಮತ್ತು ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಸಾಧ್ಯತೆ ಇರುವವುದು ಸಾಕಷ್ಟು ಕುತೂಹಲ ಸೃಷ್ಟಿಸಿದೆ.

ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಉಭಯ ಪಕ್ಷಗಳ ನಡುವೆಯೂ ಇದ್ದ ಭಿನ್ನಾಭಿಪ್ರಾಯ ತಹಬಂಧಿಗೆ ಬಂದಿದ್ದು, ಬಿಜೆಪಿ ಒಟ್ಟು 288 ಕ್ಷೇತ್ರಗಳಲ್ಲಿ ಬಿಜೆಪಿ 144, ಶಿವಸೇನೆ 126 ಮತ್ತು ಇತರ ಸಣ್ಣ ಪುಟ್ಟ ಮೈತ್ರಿಪಕ್ಷಗಳು 18 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ.

English summary
Maharashtra Assembly Elections: Shiv Sena's Aditya Thackeray To Contest From Worli
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X