ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿನಿಮಾದಿಂದ ಪ್ರೇರಣೆ; 10 ರೂ. ನಾಣ್ಯದಲ್ಲಿ ಠೇವಣಿ ಕಟ್ಟಿದ ಅಭ್ಯರ್ಥಿ!

|
Google Oneindia Kannada News

ಮುಂಬೈ, ಅಕ್ಟೋಬರ್ 09 : ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯೊಬ್ಬರು 10 ರೂ. ನಾಣ್ಯದ ಮೂಲಕ ಠೇವಣಿ ಕಟ್ಟಿದ್ದಾರೆ. ಹತ್ತು ರೂ. ನಾಣ್ಯ ಚಲಾವಣೆ ಆಗುವುದಿಲ್ಲ ಎಂದು ಸುದ್ದಿ ಹಬ್ಬಿಸುತ್ತಿದ್ದವರಿಗೆ ಈ ಮೂಲಕ ಉತ್ತರ ಕೊಟ್ಟಿದ್ದಾರೆ.

ಲಾಥೂರ್ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸಂತೋಷ್ ಸಾಬ್ ಡೇ ಕಣಕ್ಕಿಳಿದಿದ್ದಾರೆ. ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು ಈಗಾಗಲೇ ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣಗೊಂಡಿದೆ. ನಾಮಪತ್ರ ಸಲ್ಲಿಕೆ ಕೊನೆ ದಿನ ಸಂತೋಷ್ ನಾಮಪತ್ರ ಸಲ್ಲಿಸಿದರು.

ಮದುಮಗನ ವೇಷ ಧರಿಸಿ ಕುದುರೆಯೇರಿ ಬಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿಮದುಮಗನ ವೇಷ ಧರಿಸಿ ಕುದುರೆಯೇರಿ ಬಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ

ನಾಮಪತ್ರ ಸಲ್ಲಿಸುವಾಗ 10 ಸಾವಿರ ರೂ. ಠೇವಣಿ ಕಟ್ಟಬೇಕು. ಸಂತೋಷ್ 10 ರೂ. ನಾಣ್ಯದ ಮೂಲಕ ಠೇವಣಿ ಕಟ್ಟಿದರು. ಈ ಮೂಲಕ ನಾಣ್ಯಗಳು ಚಲಾವಣೆಯಲ್ಲಿವೆ ಎಂಬ ಸಂದೇಶವನ್ನು ಜನರಿಗೆ ತಿಳಿಸಿದರು.

ಮೂಟೆಯಲ್ಲಿ ಚಿಲ್ಲರೆ ತಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ!ಮೂಟೆಯಲ್ಲಿ ಚಿಲ್ಲರೆ ತಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ!

Maharashtra elections 2019 Candidate Paid Poll Deposit In Rs 10 Coins

ಮರಾಠಿ ಭಾಷೆಯ Gallit Gondhal Dillit Mujra ಎಂಬ ಸಿನಿಮಾದಲ್ಲಿ ನಾಣ್ಯದ ಮೂಲಕ ಠೇವಣಿ ಕಟ್ಟುವ ದೃಶ್ಯವಿದೆ. ಈ ಸಿನಿಮಾದಿಂದ ಪ್ರೇರಿತಗೊಂಡು ತಾನು ಠೇವಣಿ ಕಟ್ಟಿದೆ ಎಂದು ಸಂತೋಷ್ ಹೇಳಿದ್ದಾರೆ.

ಚಿಲ್ಲರೆಯಲ್ಲೇ 25000 ರೂ. ಭದ್ರತಾ ಠೇವಣಿ ಇರಿಸಿದ ತ.ನಾಡು ಅಭ್ಯರ್ಥಿ!ಚಿಲ್ಲರೆಯಲ್ಲೇ 25000 ರೂ. ಭದ್ರತಾ ಠೇವಣಿ ಇರಿಸಿದ ತ.ನಾಡು ಅಭ್ಯರ್ಥಿ!

28 ವರ್ಷದ ಸಂತೋಷ್ ಕಾನೂನು ವಿಷಯದಲ್ಲಿ ಪದವಿ ಪಡೆದಿದ್ದಾರೆ. "ನಾನು ಸಿನಿಮಾ ಹಲವು ಬಾರಿ ನೋಡಿದ್ದೇನೆ. ಆದರೆ, 10 ರೂ. ನಾಣ್ಯ ಚಲಾವಣೆಯಲ್ಲಿದೆ ಎಂದು ಜನರಿಗೆ ತಿಳಿಸಲು ಠೇವಣಿ ಕಟ್ಟಿದ್ದೇನೆ" ಎಂದು ತಿಳಿಸಿದರು.

ಚುನಾವಣಾ ಆಯೋಗದ ಅಧಿಕಾರಿಗಳು ಮೊದಲು ನಾಣ್ಯದಲ್ಲಿನ ಠೇವಣಿ ಪಡೆಯಲು ನಿರಾಕರಿಸಿದರು. 1000 ರೂ. ಕಾಯಿನ್ ಕೊಡಿ, ಉಳಿದದ್ದು ನೋಟಿನಲ್ಲಿ ಕೊಡಿ ಎಂದರು. ಆದರೆ, ಈ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಠೇವಣಿ ಕಟ್ಟಿಸಿಕೊಂಡರು.

2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ವಿನಯ್ ರಾಜಾವತ್ 12, 500 ರೂ. ಶುಲ್ಕವನ್ನು 1 ಮತ್ತು 2 ರೂ. ನಾಣ್ಯದ ಮೂಲಕ ಪಾವತಿ ಮಾಡಿದ್ದರು.

English summary
Latur assembly seat independent candidate Santosh Sabde paid the poll deposit amount in Rs 10 coins. He is contesting as independent in Maharashtra assembly elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X