ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕನಾಥ್ ಶಿಂಧೆ ಸಂಪುಟ: ದೇವೇಂದ್ರಗೆ ಗೃಹ, ಯಾರಿಗೆ ಯಾವ ಖಾತೆ?

|
Google Oneindia Kannada News

ಮುಂಬೈ, ಆಗಸ್ಟ್ 14: ಮುಂಬೈನಲ್ಲಿ ಇತ್ತೀಚೆಗೆ ನಡೆದ ಅದ್ಧೂರಿ ಸಮಾರಂಭದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ ಮತ್ತು ಶಿವಸೇನೆ ಬಣದ ತಲಾ 9 ಶಾಸಕರು ಒಟ್ಟು 18 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದಾದ ಬಳಿಕ ಬಹು ನಿರೀಕ್ಷಿತ ಖಾತೆ ಹಂಚಿಕೆ ಪ್ರಕ್ರಿಯೆಯನ್ನು ಸಿಎಂ ಶಿಂಧೆ ಮುಗಿಸಿದ್ದು, ಭಾನುವಾರದಂದು ಖಾತೆ ಹಂಚಿಕೆ ಮಾಡಿದ್ದಾರೆ. ನಿರೀಕ್ಷೆಯಂತೆ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರಿಗೆ ಗೃಹ ಹಾಗೂ ವಿತ್ತ ಖಾತೆ ದಕ್ಕಿದೆ.

ಚಂದ್ರಕಾಂತ್ ಪಾಟೀಲ್, ಸುಧೀರ್ ಮುಂಗಂತಿವಾರ್, ಗಿರೀಶ್ ಮಹಾಜನ್, ಸುರೇಶ್ ಖಾಡೆ, ರಾಧಾಕೃಷ್ಣ ವಿಖೆ ಪಾಟೀಲ್, ರವೀಂದ್ರ ಚವ್ಹಾಣ್, ಮಂಗಲ್ ಪ್ರಭಾತ್ ಲೋಧಾ, ವಿಜಯಕುಮಾರ್ ಗಾವಿತ್ ಮತ್ತು ಅತುಲ್ ಸೇವ್ ಬಿಜೆಪಿ ಶಾಸಕರು ಸಂಪುಟ ಸ್ಥಾನ ಪಡೆದಿದ್ದಾರೆ.

ಬಂಡಾಯ ಶಿವಸೇನಾ ಬಣದಿಂದ ದಾದಾ ಭೂಸೆ, ಸಂದೀಪನ್ ಬುಮ್ರೆ, ಉದಯ್ ಸಮಂತ್, ತಾನಾಜಿ ಸಾವಂತ್, ಅಬ್ದುಲ್ ಸತ್ತಾರ್, ದೀಪಕ್ ಕೇಸರ್ಕರ್, ಗುಲಾಬ್ರಾವ್ ಪಾಟೀಲ್, ಸಂಜಯ್ ರಾಥೋಡ್ ಮತ್ತು ಶಂಭುರಾಜೇ ದೇಸಾಯಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಇಲ್ಲಿಸ್ಮರಿಸಬಹುದು.

Maharashtra: Eknath Shindes Cabinet list of portfolio allocation; Fadnavis gets Home, Finance

ಯಾರಿಗೆ ಯಾವ ಖಾತೆ?:
ಏಕನಾಥ್ ಶಿಂಧೆ: ಮುಖ್ಯಮಂತ್ರಿ, ನಗರಾಭಿವೃದ್ಧಿ, ಮಾಹಿತಿ ಮತ್ತು ತಂತ್ರಜ್ಞಾನ,ಸಾರಿಗೆ, ಮಾರ್ಕೆಟಿಂಗ್, ಸಾಮಾಜಿಕ ನ್ಯಾಯ, ಸಂತ್ರಸ್ತರ ಪುನರ್ವಸತಿ, ಪ್ರಕೃತಿ ವಿಕೋಪ ನಿರ್ವಹಣೆ, ಪರಿಸರ, ಮಣ್ಣು ಹಾಗೂ ಜಲ ಸಂರಕ್ಷಣೆ, ಅಲ್ಪಸಂಖ್ಯಾತ ಹಾಗೂ ವಕ್ಫ್ ಜೊತೆಗೆ ಮಿಕ್ಕ ಎಲ್ಲಾ ಖಾತೆಗಳು
ದೇವೇಂದ್ರ ಫಡ್ನವೀಸ್: ಗೃಹ, ವಿತ್ತ, ಯೋಜನಾ ಖಾತೆ, ಕಾನೂನು, ಜಲ ಸಂಪನ್ಮೂಲ, ವಸತಿ, ಇಂಧನ
ರಾಧಾಕೃಷ್ಣವಿಖೆ ಪಾಟೀಲ್: ಕಂದಾಯ.

ಸುಧೀರ್ ಮುಂಗಟಿವಾರ್: ಅರಣ್ಯ ಖಾತೆ
ಚಂದ್ರಕಾಂತ್ ಪಾಟೀಲ್: ಉನ್ನತ ತಂತ್ರಜ್ಞಾನ ಶಿಕ್ಷಣಾ, ಸಂಸದೀಯ ವ್ಯವಹಾರ
ದೀಪಕ್ ಕೆಸರ್ಕರ್: ಪ್ರಾಥಮಿಕ ಶಿಕ್ಷಣ
ಅಬ್ದುಲ್ ಸತ್ತಾರ್: ಕೃಷಿ
ವಿಜಯ್ ಕುಮಾರ್ ಗಾವಿತ್: ಬುಡಕಟ್ಟು ಸಮುದಾಯ ಅಭಿವೃದ್ಧಿ
ಗಿರೀಶ್ ಮಹಾಜನ್: ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಮೆಡಿಕಲ್ ಶಿಕ್ಷಣ, ಕ್ರೀಡೆ ಹಾಗೂ ಯುವಜನ ಕಲ್ಯಾಣ ಖಾತೆ
ಗುಲಾಬ್ ರಾವ್ ಪಾಟೀಲ್: ಜಲ ಪೂರೈಕೆ ಹಾಗೂ ಒಳಚರಂಡಿ
ದಾದಾ ಭುಸೆ: ಬಂದರು ಹಾಗೂ ಗಣಿಗಾರಿಕೆ
ಸಂಜಯ್ ರಾಥೋಡ್: ಆಹಾರ ಮತ್ತು ಡ್ರಗ್ಸ್
ಸುರೇಶ್ ಖಾಡೆ: ಕಾರ್ಮಿಕ
ಉದಯ್ ಸಾವಂತ್: ಕೈಗಾರಿಕೆ
ತಾನಾಜಿ ಸಾವಂತ್: ಸಾರ್ವಜನಿಕ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ
ರವೀಂದ್ರ ಚೌಹಾಣ್: ಆಹಾರ ಮತ್ತು ಪಡಿತ ವಿತರಣೆ, ಗ್ರಾಹಕ ಸಂರಕ್ಷಣೆ
ಅತುಲ್ ಸಾವೆ: ಸಹಕಾರ, ಹಿಂದುಳಿತ ವರ್ಗ, ಬಹುಜನ್ ಕಲ್ಯಾಣ ಖಾತೆ
ಮಂಗಳ್ ಪ್ರಭಾತ್ ಲೋಧಾ: ಪ್ರವಾಸೋದ್ಯಮ, ಕೌಶಲ್ಯಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ

ಜೂನ್ 30 ರಂದು ಶಿವಸೇನೆಯ ಬಂಡಾಯಗಾರ ಏಕನಾಥ್ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಮತ್ತು ದೇವೇಂದ್ರ ಫಡ್ನವಿಸ್ ಅವರ ಉಪನಾಯಕರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ನಂತರ ದೇವೇಂದ್ರ ಫಡ್ನವೀಸ್ ಮತ್ತು ಏಕನಾಥ್ ಶಿಂಧೆ ಅವರು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿಯಾಗಿ ಸರ್ಕಾರದ ಚುಕ್ಕಾಣಿ ಹಿಡಿಯಲು ಕೋರಿದ್ದರು.

Maharashtra: Eknath Shindes Cabinet list of portfolio allocation; Fadnavis gets Home, Finance

ಮೈತ್ರಿ ಸರ್ಕಾರಕ್ಕೆ ಬಹುಮತ: ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿರುವ ಏಕನಾಥ್ ಶಿಂಧೆ ಸರ್ಕಾರವು ಜುಲೈ 4ರಂದು ನಡೆದ ವಿಶ್ವಾಸಮತಯಾಚನೆಯಲ್ಲೂ ಪಾಸ್ ಆಗಿದೆ.

ಮಹಾರಾಷ್ಟ್ರ ವಿಶ್ವಾಸಮತಯಾಚನೆಯಲ್ಲಿ ಶಿಂಧೆ ಸರ್ಕಾರ ಪಾಸ್ಮಹಾರಾಷ್ಟ್ರ ವಿಶ್ವಾಸಮತಯಾಚನೆಯಲ್ಲಿ ಶಿಂಧೆ ಸರ್ಕಾರ ಪಾಸ್

33 ನಿಮಿಷಗಳಲ್ಲಿ ಶಿವಸೇನೆ ಮತ್ತು ಬಿಜೆಪಿ ನೇತೃತ್ವದ ಸರ್ಕಾರವು 164 ಮತಗಳ ಬೆಂಬಲದೊಂದಿಗೆ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ. ಆ ಮೂಲಕ 10 ದಿನಗಳ ಶಿವಸೇನೆ ಬಂಡಾಯವು ಹೊಸ ಸರ್ಕಾರದ ಅಸ್ತಿತ್ವದೊಂದಿಗೆ ಅಂತ್ಯವಾಗಿದೆ.

287 ಸದಸ್ಯರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪರವಾಗಿ 164 ಮತಗಳು ಬಿದ್ದಿದೆ. ಇನ್ನೊಂದು ಕಡೆ ಕಾಂಗ್ರೆಸ್, ರಾಷ್ಟ್ರೀಯವಾದಿ ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಬಣದ ಶಾಸಕರು ಸೇರಿ ಒಟ್ಟು 99 ಮತಗಳು ಠಾಕ್ರೆ ಬಣಕ್ಕೆ ಸಿಕ್ಕಿದೆ. ಇದರ ಹೊರತಾಗಿ 21 ಶಾಸಕರು ಕಲಾಪಕ್ಕೆ ಗೈರಾಗಿದ್ದರು.

English summary
Maharashtra Chief Minister Eknath Shinde on Sunday allocated portfolios to his ministers with his deputy Devendra Fadnavis scoring big ministries of Home and Finance among others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X