ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: 'ಮಹಾ' ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಅಜಯ್ ಚೌಧರಿ ನೇಮಕ

|
Google Oneindia Kannada News

ಮುಂಬೈ, ಜೂನ್ 24: ಮಹಾರಾಷ್ಟ್ರದಲ್ಲಿ ರಾಜಕೀಯದ ಬಿಕ್ಕಟ್ಟಿನ ಮಧ್ಯೆ ರಾಜ್ಯ ವಿಧಾನಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಶಾಸಕ ಅಜಯ್ ಚೌಧರಿ ಅನ್ನು ನೇಮಕ ಮಾಡಲಾಗಿದೆ.

ಬಂಡಾಯ ನಾಯಕ ಏಕನಾಥ್ ಶಿಂಧೆ ಮುನಿಸಿನ ಮಧ್ಯೆ ಶಿವಸೇನೆ ಸಲ್ಲಿಸಿದ ಪ್ರಸ್ತಾಪವನೆಯನ್ನು ವಿಧಾನಸಭೆಯ ಉಪ ಸಭಾಪತಿ ಶುಕ್ರವಾರ ಅನುಮೋದಿಸಿದ್ದಾರೆ. ಈ ಸಂಬಂಧ ಉಪ ಸ್ಪೀಕರ್ ಕಚೇರಿಯಿಂದ ಶಿವಸೇನೆ ಕಚೇರಿ ಕಾರ್ಯದರ್ಶಿಗೆ ಪತ್ರ ಕಳುಹಿಸಲಾಗಿದೆ.

ಮಹಾ ಬಿಕ್ಕಟ್ಟು: ಏಕನಾಥ್ ಶಿಂಧೆಯೇ ನಮ್ಮ ಶಾಸಕಾಂಗ ನಾಯಕ ಎಂದು 37 ಶಾಸಕರ ಪತ್ರ ಮಹಾ ಬಿಕ್ಕಟ್ಟು: ಏಕನಾಥ್ ಶಿಂಧೆಯೇ ನಮ್ಮ ಶಾಸಕಾಂಗ ನಾಯಕ ಎಂದು 37 ಶಾಸಕರ ಪತ್ರ

ಮಹಾರಾಷ್ಟ್ರ ರಾಜಕಾರಣದಲ್ಲಿನ ಚುರುಕಿನ ಬೆಳವಣಿಗೆಗಳ ಮಧ್ಯೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ನಾನು ರೆಡಿ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. ಅದೇ ಶಿವಸೇನೆ ಮುಖಂಡ ಸಂಜಯ್ ರಾವತ್ ಬಂಡಾಯದ ಬಗ್ಗೆ ಘಳಿಗೆಗೊಂದು ಹೇಳಿಕೆ ನೀಡುತ್ತಿದ್ದಾರೆ.

Maharashtra Deputy Speaker approves Shiv Sena proposal to appoint Ajay Chaudhary as CLP leader

12 ಶಾಸಕರ ಅನರ್ಹತೆಗೂ ಉದ್ಧವ್ ತಂಡದಿಂದ ಪತ್ರ: ಶಿವಸೇನೆ ಬಂಡಾಯ ಶಾಸಕ ಏಕನಾಥ್ ಶಿಂಧೆ ಬಣಕ್ಕೆ ತಿರುಗೇಟು ನೀಡುವುದಕ್ಕೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣವೂ ಸಕಲ ರೀತಿಯಲ್ಲಿ ಸಿದ್ಧವಾಗಿದೆ. ಏಕನಾಥ್ ಶಿಂಧೆ ಬಣದಲ್ಲಿ ಗುರುತಿಸಿಕೊಂಡಿರುವ 12 ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆಯೂ ಉಪ ಸಭಾಪತಿಗೆ ಪತ್ರ ಬರೆಯಲಾಗಿದೆ. ಇದರಿಂದ ಭವಿಷ್ಯದಲ್ಲಿ ವಿಶ್ವಾಸ ಮತಯಾಚನೆ ವೇಳೆ ಸಂಖ್ಯೆಗಳ ಲೆಕ್ಕಾಚಾರಕ್ಕೆ ಅನುಕೂಲಕರವಾಗಿ ಇರಲಿದೆ ಎಂಬುದು ಠಾಕ್ರೆ ಬಣದ ಯೋಜನೆಯಾಗಿದೆ.

ಬುಧವಾರ ಉದ್ಧವ್ ಠಾಕ್ರೆ ಕರೆದಿದ್ದ ಶಾಸಕಾಂಗ ಪಕ್ಷದ ಸಭೆಗೆ ತೆರಳಿದ ಶಾಸಕರನ್ನು ಅನರ್ಹಗೊಳಿಸುವುದಾಗಿ ಶಿವಸೇನೆ ಎಚ್ಚರಿಕೆ ನೀಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಏಕನಾಥ್ ಶಿಂಧೆ, "ಯಾರನ್ನು ಹೆದರಿಸಲು ಪ್ರಯತ್ನಿಸುತ್ತಿದ್ದೀರಿ? ನಿಮ್ಮ ಹೊಂದಾಣಿಕೆ ಮತ್ತು ಕಾನೂನು ನಮಗೂ ತಿಳಿದಿದೆ! ಸಂವಿಧಾನದ 10 ನೇ ಶೆಡ್ಯೂಲ್ ಪ್ರಕಾರ ವಿಪ್ ಸಭೆಗೆ ಅಲ್ಲ, ಸಭೆಗೆ ಅಲ್ಲ," ಎಂದು ಟ್ವೀಟ್ ಮಾಡಿದ್ದಾರೆ.

ಏಕನಾಥ್ ಬಣಕ್ಕೆ ಅನರ್ಹತೆ ತಪ್ಪಿಸುವ ಮ್ಯಾಜಿಕ್ ನಂಬರ್: ಪಕ್ಷಾಂತರ ನಿಷೇಧ ಕಾಯ್ದೆಯಿಂದ ಬಚಾವ್ ಆಗಿ ವಿಧಾನಸಭೆಯಲ್ಲಿ ಪಕ್ಷವನ್ನು ವಿಭಜಿಸಲು ಬೇಕಾದ ನಿರ್ಣಾಯಕ ಸಂಖ್ಯೆಯನ್ನು ಈಗಾಗಲೇ ಏಕನಾಥ್ ಶಿಂಧೆ ಗಳಿಸಿದ್ದಾರೆ. ಶಿವಸೇನೆಯ 55 ಶಾಸಕರಲ್ಲಿ 37 ಶಾಸಕರ ಬೆಂಬಲವನ್ನು ಪಡೆದುಕೊಂಡರೆ ಯಾವುದೇ ಅನರ್ಹತೆಯಿಲ್ಲದೇ ಪಕ್ಷವನ್ನು ವಿಭಜನೆ ಮಾಡಬಹುದು.

Maharashtra Deputy Speaker approves Shiv Sena proposal to appoint Ajay Chaudhary as CLP leader

ಈ ಲೆಕ್ಕಾಚಾರದಲ್ಲಿ ಶಿಂಧೆ 42 ಶಾಸಕರ ಬೆಂಬಲವನ್ನು ಪಡೆದುಕೊಂಡಿದ್ದು ಆಗಿದೆ. ಇದರ ಜೊತೆಗೆೆ ಮತ್ತಿಬ್ಬರು ಶಾಸಕರಾದ ದಾದಾ ಭೂಸೆ ಮತ್ತು ಸಂಜಯ್ ರಾಥೋಡ್ ಮತ್ತು ಒಬ್ಬ ಎಂಎಲ್‌ಸಿ ರವೀಬ್ದ್ರ ಫಠಕ್ ಕೂಡ ಶಿಂಧೆ ಬಣಕ್ಕೆ ಸೇರಿಕೊಳ್ಳಲು ಗುವಾಹಟಿ ಕಡೆಗೆ ಮುಖ ಮಾಡಿದ್ದಾರೆ.

English summary
Maharashtra Deputy Speaker approves Shiv Sena's proposal to appoint MLA Ajay Chaudhary as legislative party leader in the state Assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X