ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಅಂಕಿ-ಅಂಶಗಳ ಲೆಕ್ಕ ಸಿಕ್ಕಿಲ್ಲ!

|
Google Oneindia Kannada News

ಮುಂಬೈ, ಜೂನ್ 23: "ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸೋಂಕಿನ ಡೆಲ್ಟಾ ಪ್ಲಸ್ ರೂಪಾಂತರ ತಳಿಯ ಬಗ್ಗೆ ಎಚ್ಚರಿಸುವಂತಾ ಅಗತ್ಯ ಹಾಗೂ ನಿರ್ದಿಷ್ಟ ಅಂಕಿ-ಅಂಶಗಳು ಲಭ್ಯವಾಗಿಲ್ಲ," ಎಂದು ರಾಜ್ಯದ ಕೊವಿಡ್-19 ಟಾಸ್ಕ್ ಫೋರ್ಸ್ ಸದಸ್ಯ ಡಾ. ಶಶಾಂಕ್ ಜೋಶಿ ತಿಳಿಸಿದ್ದಾರೆ.

"ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿನ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಬೇಕು ಹಾಗೂ ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ," ಸಲಹೆ ನೀಡಿದ್ದಾರೆ.

ಡೆಲ್ಟಾ ಪ್ಲಸ್; ಕರ್ನಾಟಕಕ್ಕೆ ನೆರೆ ರಾಜ್ಯಗಳಿಂದಲೇ ಅಪಾಯ ಡೆಲ್ಟಾ ಪ್ಲಸ್; ಕರ್ನಾಟಕಕ್ಕೆ ನೆರೆ ರಾಜ್ಯಗಳಿಂದಲೇ ಅಪಾಯ

"ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ಸೋಂಕು ಹೊಂದಿರುವ 21 ಕೊರೊನಾವೈರಸ್ ಪ್ರಕರಣಗಳು ವರದಿಯಾಗಿವೆ," ಎಂದು ಆರೋಗ್ಯ ಸಚಿವ ರಾಜೇಶ್ ತೊಪೆ ಹೇಳಿದ್ದಾರೆ. "ರಾಜ್ಯದ ರತ್ನಗಿರಿ 9, ಜಲಗಾನ್ 7, ಮುಂಬೈ 2, ಪಾಲ್ಗರ್, ಥಾಣೆ ಮತ್ತು ಸಿಂಧುದುರ್ಗದಲ್ಲಿ ತಲಾ ಒಂದು ಸೇರಿದಂತೆ ಈವರೆಗೂ ಅತಿಹೆಚ್ಚು ಡೆಲ್ಟಾ ಪ್ಲಸ್ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ," ಎಂದಿದ್ದಾರೆ.

Maharashtra Coronavirus Task Force Member Tweet About Delta Plus Variant Data

ಡೆಲ್ಟಾ ಪ್ಲಸ್ ರೂಪಾಂತರದ ಬಗ್ಗೆ ಟ್ವೀಟ್:

"ಕೊರೊನಾವೈರಸ್ ಸೋಂಕಿನ ಡೆಲ್ಟಾ ಪ್ಲಸ್ ತಳಿಯು ಕಾಳಜಿಯ ರೂಪಾಂತರದ ಅಂಕಿ-ಅಂಶಗಳ ಬಗ್ಗೆ ಯಾವುದೇ ಸ್ಪಷ್ಟ ಎಚ್ಚರಿಕೆ ನೀಡಲು ಆಗುವುದಿಲ್ಲ. ಅದರ ಬದಲಿಗೆ ನಾವು ಕಟ್ಟುನಿಟ್ಟಾಗಿ ಕೊವಿಡ್-19 ನಿಯಂತ್ರಣ ಕ್ರಮಗಳಾದ ಜನ ಸಂದಣಿಯಿಂದ ಅಂತರ ಕಾಯ್ದುಕೊಳ್ಳುವುದು, ಡಬಲ್ ಮಾಸ್ಕ್ ಧರಿಸುವುದು ಹಾಗೂ ಲಸಿಕೆ ತೆಗೆದುಕೊಳ್ಳುವುದನ್ನು ಮುಂದುವರಿಸಬೇಕು," ಎಂದು ಕೊವಿಡ್ ಟಾಸ್ಕ್ ಫೋರ್ಸ್ ಸದಸ್ಯ ಡಾ. ಶಶಾಂಕ್ ಜೋಶಿ ಟ್ವೀಟ್ ಮಾಡಿದ್ದಾರೆ.

ಲಸಿಕೆ ವಿರತಣೆ ಜೊತೆ ರೂಪಾಂತರ ವೈರಸ್ ಪತ್ತೆಗೆ ಆದ್ಯತೆ

ಕೊರೊನಾವೈರಸ್ ಸೋಂಕಿನ ಡೆಲ್ಟಾ ಪ್ಲಸ್ ರೂಪಾಂತರ ತಳಿಯ ಪತ್ತೆಗೆ ಪ್ರಾಮಾಣಿಕವಾಗಿ ಪರೀಕ್ಷೆಗಳನ್ನು ನಡೆಸುವುದು. ಆದ್ಯತೆ ಮೇರೆಗೆ ಕೊವಿಡ್-19 ಲಸಿಕೆ ವಿತರಣೆ ಜೊತೆಗೆ ರೂಪಾಂತರ ತಳಿ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕಾಗಿದೆ. ಇದರ ಜೊತೆಗೆ ಸಾಂಕ್ರಾಮಿಕ ರೋಗದ ನಡುವಿನ ವೈದ್ಯಕೀಯ ಸಂಬಂಧವನ್ನು ಪತ್ತೆ ಮಾಡುವುದಕ್ಕಾಗಿ ಸೋಂಕು ತಗುಲಿದ ವ್ಯಕ್ತಿಗಳ ಮಾದರಿಯನ್ನು INSACOG ಪ್ರಯೋಗಾಲಯಗಳಿಗೆ ಕಳುಹಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.

"ದೇಶದ 28 ಕಡೆಗಳಲ್ಲಿ INSACOG ಪ್ರಯೋಗಾಲಯಗಳಿದ್ದು, ಹೊಸ ತಳಿಯ ಹರಡುವಿಕೆ ವೇಗ, ಶ್ವಾಸಕೋಶದ ಮೇಲೆ ಬೀರುವ ಪ್ರಭಾವ, ಮೊನೊಕ್ಲೋನಲ್ ಪ್ರತಿಕಾಯ ವ್ಯವಸ್ಥೆ ಇಳಿಮುಖಗೊಳಿಸುವಲ್ಲಿ ಹೊಸ ವೈರಸ್ ಪಾತ್ರದ ಬಗ್ಗೆ ಪರಿಶೋಧನೆ ನಡೆಸಲಾಗುತ್ತದೆ," ಎಂದು ಕೇಂದ್ರ ಆರೋಗ್ಯ ಸಚಿವಾಲಯ ಘೋಷಿಸಿದೆ.

9 ರಾಷ್ಟ್ರಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ವೈರಸ್

ವಿಶ್ವದ 9 ರಾಷ್ಟ್ರಗಳಲ್ಲಿ ಕೊರೊನಾವೈರಸ್ ಸೋಂಕಿನ ಡೆಲ್ಟಾ ಪ್ಲಸ್ ರೂಪಾಂತರ ತಳಿ ಪತ್ತೆಯಾಗಿದೆ. ಭಾರತವನ್ನು ಹೊರತುಪಡಿಸಿದಂತೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ, ಇಂಗ್ಲೆಂಡ್, ಪೊರ್ಚುಗಲ್, ಸ್ವಿಡ್ಜರ್ ಲ್ಯಾಂಡ್, ಜಪಾನ್, ಪೊಲ್ಯಾಂಡ್, ಚೀನಾ ಮತ್ತು ರಷ್ಯಾದಲ್ಲಿ ಹೊಸ ತಳಿಯು ಪತ್ತೆಯಾಗಿವೆ.

English summary
Maharashtra Coronavirus Task Force Member Tweet About Delta Plus Variant Data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X