ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ: 5 ದಿನದ ನಂತರ 8000ಕ್ಕಿಂತ ಕಡಿಮೆ ಕೊರೊನಾ ಕೇಸ್

|
Google Oneindia Kannada News

ಮುಂಬೈ, ಮಾರ್ಚ್.01: ಮಹಾರಾಷ್ಟ್ರದಲ್ಲಿ ಐದು ದಿನಗಳ ನಂತರದಲ್ಲಿ ಮೊದಲ ಬಾರಿಗೆ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 8000ಕ್ಕಿಂತ ಕಡಿಮೆ ದಾಖಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸೋಮವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ 6397 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 21,61,467ಕ್ಕೆ ಏರಿಕೆಯಾಗಿದೆ.

ಕೊರೊನಾ ಭೀತಿ: ಅಯ್ಯೋ.. ಭಾರತದಲ್ಲಿ ಹೀಗ್ಯಾಕಾಯ್ತು ಪರಿಸ್ಥಿತಿ!?ಕೊರೊನಾ ಭೀತಿ: ಅಯ್ಯೋ.. ಭಾರತದಲ್ಲಿ ಹೀಗ್ಯಾಕಾಯ್ತು ಪರಿಸ್ಥಿತಿ!?

ಕಳೆದ 24 ಗಂಟೆಗಳಲ್ಲಿ 30 ಮಂದಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 52184ಕ್ಕೆ ಏರಿಕೆಯಾಗಿದೆ. ಒಂದು ದಿನದಲ್ಲಿ 5754 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಈವರೆಗೂ ರಾಜ್ಯದಲ್ಲಿ 20,30,458 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

Maharashtra Coronavirus Cases Fall Below 8000 After Five Days

24 ಗಂಟೆಗಳಲ್ಲಿ 61,746 ಮಂದಿಗೆ ಕೊವಿಡ್-19 ಟೆಸ್ಟ್:

ರಾಜ್ಯದಲ್ಲಿ ಒಂದೇ ದಿನ 61,746 ಮಂದಿಗೆ ಕೊರೊನಾವೈರಸ್ ಸೋಂಕಿನ ತಪಾಸಣೆ ನಡೆಸಲಾಗಿದ್ದು, ಮಹಾರಾಷ್ಟ್ರದಲ್ಲಿ ಈವರೆಗೂ 1,63,46,358 ಜನರಿಗೆ ಕೊವಿಡ್-19 ತಪಾಸಣೆಯನ್ನು ನಡೆಸಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಐದು ದಿನ ರಾಜ್ಯದಲ್ಲಿ 8000 ಪ್ರಕರಣ:

ಮಹಾರಾಷ್ಟ್ರದಲ್ಲಿ ಐದು ದಿನಗಳ ಕಾಲ ನಿರಂತರವಾಗಿ 8000ಕ್ಕಿಂತ ಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಭಾನುವಾರ ರಾಜ್ಯದಲ್ಲಿ 8293 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. 3753 ಮಂದಿ ಗುಣಮುಖರಾಗಿದ್ದರೆ, 62 ಜನರು ಮಹಾಮಾರಿಗೆ ಬಲಿಯಾಗಿದ್ದರು.

English summary
Maharashtra Coronavirus Cases Fall Below 8000 After Five Days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X