ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ರಾಜಕೀಯ ಹೈಡ್ರಾಮ, ಶಾಸಕರ ಸಭೆ ಕರೆದ ಉದ್ಧವ್ ಠಾಕ್ರೆ

|
Google Oneindia Kannada News

ಮುಂಬೈ, ಜೂನ್ 21; ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮ ನಡೆದಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಅಲುಗಾಡಲು ಆರಂಭಿಸಿದೆ. ಮುಖ್ಯಮಂತ್ರಿಗಳು ತುರ್ತಾಗಿ ಶಾಸಕರ ಸಭೆ ಕರೆದಿದ್ದಾರೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ನಡೆದ ಬಳಿಕ ಉದ್ಧವ್ ಠಾಕ್ರೆ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ. ಪಕ್ಷದ 11 ಶಾಸಕರು ನಾಪತ್ತೆಯಾಗಿದ್ದು, ಗುಜರಾತ್‌ನ ರೆಸಾರ್ಟ್‌ನಲ್ಲಿದ್ದಾರೆ ಎಂಬ ವರದಿ ಇದೆ.

ಮಹಾರಾಷ್ಟ್ರ ಎಂಎಲ್‌ಸಿ ಚುನಾವಣೆ: ಅಲುಗಾಡಿದ ಠಾಕ್ರೆ ಸರ್ಕಾರ ಮಹಾರಾಷ್ಟ್ರ ಎಂಎಲ್‌ಸಿ ಚುನಾವಣೆ: ಅಲುಗಾಡಿದ ಠಾಕ್ರೆ ಸರ್ಕಾರ

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಧ್ಯಾಹ್ನ 2 ಗಂಟೆಗೆ ತುರ್ತಾಗಿ ಶಾಸಕರ ಸಭೆ ಕರೆದಿದ್ದಾರೆ. ಎಲ್ಲಾ ಶಾಸಕರು ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕು ಎಂದು ಪಕ್ಷ ಸೂಚನೆ ನೀಡಿದೆ.

ಮಸೀದಿಗಳಲ್ಲಿನ ಧ್ವನಿವರ್ಧಕ ತೆಗೆಯುವಂತೆ ಪ್ರಚೋದನೆ ನೀಡಿದ ರಾಜ್ ಠಾಕ್ರೆ ವಿರುದ್ಧ ಕೇಸ್ಮಸೀದಿಗಳಲ್ಲಿನ ಧ್ವನಿವರ್ಧಕ ತೆಗೆಯುವಂತೆ ಪ್ರಚೋದನೆ ನೀಡಿದ ರಾಜ್ ಠಾಕ್ರೆ ವಿರುದ್ಧ ಕೇಸ್

Maharashtra CM Uddhav Thackeray Calls Emergency Meeting Of MLAs

ವಿಧಾನ ಪರಿಷತ್ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಅಭ್ಯರ್ಥಿ ಕಾಂಗ್ರೆಸ್‌ನ ಚಂದ್ರಕಾಂತ್ ಹಂಡೋರೆ ಸೋಲು ಕಂಡಿದ್ದಾರೆ. ಬಿಜೆಪಿ ಚುನಾವಣೆಯಲ್ಲಿ 5 ಸ್ಥಾನಗಳಲ್ಲಿ ಜಯಗಳಿಸಿದೆ.

 ಮಹಾರಾಷ್ಟ್ರ; ಕಾಂಗ್ರೆಸ್‌ ಕಾರ್ಯದರ್ಶಿ ಸ್ಥಾನಕ್ಕೆ ಆಶಿಸ್‌ ರಾಜೀನಾಮೆ ಮಹಾರಾಷ್ಟ್ರ; ಕಾಂಗ್ರೆಸ್‌ ಕಾರ್ಯದರ್ಶಿ ಸ್ಥಾನಕ್ಕೆ ಆಶಿಸ್‌ ರಾಜೀನಾಮೆ

ಸೋಮವಾರ ನಡೆದ ಚುನಾವಣೆಯಲ್ಲಿ ಎನ್‌ಸಿಪಿ ಮತ್ತು ಶಿವಸೇನೆ ತಲಾ 2 ಸ್ಥಾನದಲ್ಲಿ ಜಯಗಳಿಸಿದೆ. ಕಾಂಗ್ರೆಸ್ ಒಂದು ಸ್ಥಾನದಲ್ಲಿ ಜಯಗಳಿಸಿದೆ. ಬಿಜೆಪಿಯ ಗೆದ್ದ ಅಭ್ಯರ್ಥಿ ಅಡ್ಡ ಮತದಾನವಾಗಿದೆ ಎಂದು ಹೇಳಿದ್ದಾರೆ.

ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವ ಶಿವಸೇನೆಯ 25 ಶಾಸಕರು ಗುಜರಾಜ್‌ನ ಸೂರತ್‌ನಲ್ಲಿರುವ ಹೋಟೆಲ್‌ನಲ್ಲಿದ್ದಾರೆ ಎಂಬ ಮಾಹಿತಿ ಇದೆ. ಲಿ ಮೆರಿಡಿಯನ್ ಹೋಟೆಲ್ 11 ಕೊಠಡಿಗಳನ್ನು ಸೋಮವಾರ ರಾತ್ರಿ ಕಾಯ್ದಿರಿಸಲಾಗಿತ್ತು.

ಮಹಾರಾಷ್ಟ್ರದ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ನೇತೃತ್ವದ 14 ಶಾಸಕರು ತಡರಾತ್ರಿ 1.30ರ ವೇಳೆಗೆ ಹೋಟೆಲ್‌ಗೆ ತಲುಪಿದೆ ಎಂಬ ಮಾಹಿತಿ ಇದೆ. ಹೋಟೆಲ್‌ಗೆ ಗುಜರಾತ್ ಪೊಲೀಸರು ಭದ್ರತೆಯನ್ನು ಸಹ ಒದಗಿಸಿದ್ದಾರೆ.

Recommended Video

ಬಾಲ್ಯದಲ್ಲಿ ಮೋದಿ ಮೊಸಳೆ ಹಿಡಿದು ಮನೆಗೆ ತಂದಿದ್ರಂತೆ!! ಪಠ್ಯಪುಸ್ತಕದಲ್ಲಿ ಮೋದಿ ಸಾಹಸ | Oneindia Kannada

English summary
Maharashtra chief minister Uddhav Thackeray called MLA's meeting on 2 pm. Two-and-a-half-year-old Uddhav Thackeray lead Maha Vikas Aghadi government is now under threat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X