ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ಉದ್ಧವ್ ಠಾಕ್ರೆ ಪ್ರಮಾಣ ವಚನ ಕಾರ್ಯಕ್ರಮ ಪೂರ್ಣ ಚಿತ್ರಣ

|
Google Oneindia Kannada News

ಮುಂಬೈ, ನವೆಂಬರ್ 28: ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್ ಪಕ್ಷಗಳು ಒಗ್ಗಟ್ಟಾಗಿ ಬಿಜೆಪಿಯನ್ನು ರಾಜಕೀಯವಾಗಿ ಮಣಿಸಿ ಅಧಿಕಾರದ ಗದ್ದುಗೆಯನ್ನು ಏರುತ್ತಿವೆ.

ಮೂರು ಪಕ್ಷಗಳ ಮೈತ್ರಿಯ ಮುಖವಾಗಿರುವ ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ಮಹಾರಾಷ್ಟ್ರದ 19 ನೇ ಮುಖ್ಯಮಂತ್ರಿಯಾಗಿ ಸಂಜೆ 6 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮಹಾರಾಷ್ಟ್ರದಲ್ಲಿ ರಾಜಕೀಯದಲ್ಲಿ ಛಾಪು ಮೂಡಿಸಿರುವ ಠಾಕ್ರೆ ಕುಟುಂಬದಿಂದ ಸಿಎಂ ಆಗುತ್ತಿರುವ ಮೊದಲ ಮೊದಲ ವ್ಯಕ್ತಿ ಉದ್ಧವ್ ಠಾಕ್ರೆ.

ಶಾಸಕರಾಗದೇ ಸಿಎಂ ಪಟ್ಟಕ್ಕೇರಿದವರ ಪೈಕಿ ಉದ್ಧವ್ ಮೊದಲಿಗರಲ್ಲ!ಶಾಸಕರಾಗದೇ ಸಿಎಂ ಪಟ್ಟಕ್ಕೇರಿದವರ ಪೈಕಿ ಉದ್ಧವ್ ಮೊದಲಿಗರಲ್ಲ!

ಹಲವು ರಾಜಕೀಯ ಏರಿಳಿತಗಳ ನಂತರ ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್ ಒಟ್ಟಾಗಿ ಸರ್ಕಾರ ರಚನೆ ಮಾಡಿದ್ದು, ಹಲವು ಕಾರಣಕ್ಕೆ ಈ ಮೈತ್ರಿ ಸರ್ಕಾರ ದೇಶದ ರಾಜಕೀಯ ಆಸಕ್ತರ ಗಮನ ಸೆಳೆದಿದೆ. ಪರಸ್ಪರ ವಿರುದ್ಧ ರಾಜಕೀಯ ಆದರ್ಶ, ಮೌಲ್ಯಗಳನ್ನು ಹೊಂದಿರುವ ಪಕ್ಷಗಳು ಒಂದಾಗಿ ಮಾಡಿರುವ ಸರ್ಕಾರದ ಮೇಲೆ ಬಿಜೆಪಿಯ ವಕ್ರಕಣ್ಣೂ ಸಹ ನೆಟ್ಟಿದೆ.

Maharashtra CM Oath Taking Ceremony Live Updates

ಉದ್ಧವ್ ಠಾಕ್ರೆ ಅವರ ಪ್ರಮಾಣ ವಚನ ಕಾರ್ಯಕ್ರಮವು ಮುಂಬೈನ ಶಿವಾಜಿ ಪಾರ್ಕ್‌ ನಲ್ಲಿ ಆಯೋಜಿಸಲಾಗಿದ್ದು, ಪ್ರಧಾನಿ ಮೋದಿ, ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗಿದೆ. ವಿಶೇಷವಾಗಿ 700 ರೈತರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

Newest FirstOldest First
7:50 PM, 28 Nov

ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಉದ್ಧವ್ ಠಾಕ್ರೆ ಅವರಿಗೆ ಟ್ವಿಟ್ಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಉಜ್ವಲ ಮಹಾರಾಷ್ಟ್ರ ನಿರ್ಮಾಣಕ್ಕಾಗಿ ಅವರು ದುಡಿಯುತ್ತಾರೆಂದು ನಂಬಿದ್ದೇನೆ ಎಂದು ಮೋದಿ ಹೇಳಿದ್ದಾರೆ.
7:46 PM, 28 Nov

ಕೆಲವೇ ನಿಮಿಷದಲ್ಲಿ ಉದ್ಧವ್ ಠಾಕ್ರೆ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯ ನಂತರ ಘೋಷಣೆ ಒಂದನ್ನು ಮಾಡುವ ಸಾಧ್ಯತೆ ಇದೆ.
7:08 PM, 28 Nov

ಪ್ರಮಾಣ ವಚನ ಕಾರ್ಯಕ್ರಮವು ಪೂರ್ಣವಾಗಿದ್ದು, ರಾಷ್ಟ್ರಗೀತೆಯೊಂದಿಗೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ.
7:06 PM, 28 Nov

ಕಾಂಗ್ರೆಸ್‌ನ ನಿತಿನ್ ರಾವತ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್‌ನ ಪರಿಶಿಷ್ಟ ವಿಭಾಗದ ಅಧ್ಯಕ್ಷ. ಈ ಹಿಂದೆ ಮಂತ್ರಿಯಾಗಿಯೂ ಇವರು ಕಾರ್ಯ ನಿರ್ವಹಿಸಿದ್ದರು.
7:03 PM, 28 Nov

ಕಾಂಗ್ರೆಸ್‌ ಶಾಸಕ ಬಾಳಾಸಾಹೇಬ್ ತೋರಾಠ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷರೂ ಆಗಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ಇವರು ಹೊಂದಿದ್ದಾರೆ. ಸಹಕಾರಿ ಬ್ಯಾಂಕ್ ಕಿಂಗ್ ಎಂದೇ ಇವರನ್ನು ಕರೆಯಲಾಗುತ್ತದೆ.
6:57 PM, 28 Nov

ಎನ್‌ಸಿಪಿಯ ಹಿರಿಯ ಶಾಸಕ ಚಗ್ಗನ್ ಬುಜ್‌ಬಲ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರು ಬಾಳ್ ಠಾಕ್ರೆ ವಿರುದ್ಧ ಮೊದಲ ಬಾರಿಗೆ ತೊಡೆತಟ್ಟಿದ್ದರು. ಮಹಾರಾಷ್ಟ್ರ ಸದನ್ ಹಗರಣದಲ್ಲಿ ಎರಡು ವರ್ಷ ಜೈಲಿನಲ್ಲಿದ್ದರು. ಬಾಳ್ ಠಾಕ್ರೆ ಬಂಧನದಲ್ಲಿ ಇವರ ಪಾತ್ರ ಇತ್ತು. ಬಾಳ್ ಠಾಕ್ರೆ ಸಮಯದಲ್ಲಿ ಇವರು ಶೀವಸೇನೆಯಲ್ಲಿಯೇ ಇದ್ದರು.
6:54 PM, 28 Nov

ಎನ್‌ಸಿಪಿಯ ಜಯಂತ್ ಪಾಟೀಲ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರು ಶರದ್ ಪವಾರ್ ಆಪ್ತರಾಗಿದ್ದಾರೆ.
Advertisement
6:51 PM, 28 Nov

ಶಿವಸೇನಾದ ಹಿರಿಯ ಶಾಸಕ ಸುಭಾಶ್ ದೇಸಾಯಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರು ವಿಧಾನಪರಿಷತ್ ಸದಸ್ಯರಾಗಿದ್ದಾರೆ.
6:48 PM, 28 Nov

ಶಿವಸೇನಾದ ಏಕನಾಥ್ ಶಿಂಧೆ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
6:44 PM, 28 Nov

ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕಾಲಿಗೆ ನಮಸ್ಕರಿಸಿ, ಶಿವಾಜಿ ಹಾಗೂ ಬಾಳಾ ಸಾಹೇಬ್ ಠಾಕ್ರೆ ಹೆಸರಲ್ಲಿ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರದ 19 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
6:42 PM, 28 Nov

ಎನ್‌ಸಿಪಿ ಶರದ್ ಪವಾರ್ ಅವರು ಕೊನೆಯದಾಗಿ ವೇದಿಕೆಗೆ ಆಗಮಿಸಿದ್ದಾರೆ. ವೇದಿಕೆ ಮೇಲಿದ್ದ ಎಲ್ಲರೂ ಎದ್ದು ನಿಂತು ಶರದ್ ಪವಾರ್ ಅವರನ್ನು ಸ್ವಾಗತಿಸಿದ್ದಾರೆ.
6:41 PM, 28 Nov

ಹೊಳೆಯುವ ಕೇಸರಿ ಬಣ್ಣದ ಕುರ್ತಾ ಧರಿಸಿ ಉದ್ಧವ್ ಠಾಕ್ರೆ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದು, ಕೆಲವೇ ಕ್ಷಣಗಳಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
Advertisement
6:40 PM, 28 Nov

ನಿಟಕಪೂರ್ವ ಮುಖ್ಯಮಂತ್ರಿ ದೇಂವೇಂದ್ರ ಫಡ್ನವೀಸ್ ಅವರು ವೇದಿಕೆಗೆ ಆಗಮಿಸಿದ್ದಾರೆ. ಎರಡು ದಿನಗಳ ಹಿಂದಷ್ಟೆ ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿ ಆಗಿದ್ದರು. ಬದಲಾದ ಸನ್ನಿವೇಶದಲ್ಲಿ ಇನ್ನು ಮುಂದೆ ಅವರು ವಿಪಕ್ಷ ನಾಯಕರಾಗಲಿದ್ದಾರೆ.
6:38 PM, 28 Nov

ಉದ್ಯಮಿ ಮುಖೇಶ್ ಅಂಬಾನಿ, ನೀತಾ ಅಂಬಾನಿ ಮತ್ತು ಅವರ ಪುತ್ರ ಸಹ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಅಮಿತಾಬ್ ಬಚ್ಚನ್ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.
6:37 PM, 28 Nov

ರಾಜ್ಯಪಾಲ ಭಗತ್‌ಸಿಂಗ್ ಕೋಶ್ಯಾರಿ ಅವರು ಶಿವಾಜಿ ಪಾರ್ಕ್‌ ಗೆ ಆಗಮಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಉದ್ಧವ್ ಠಾಕ್ರೆ ಆಗಮಿಸಲಿದ್ದಾರೆ.
6:36 PM, 28 Nov

ಅಹ್ಮದ್ ಪಟೇಲ್, ಮನೋಹರ ಜೋಷಿ, ಕಮಲನಾಥ, ಎಕೆ ಆಂಟೆನಿ, ಸಂಜಯ್ ರಾವತ್, ಮಲ್ಲಿಕಾರ್ಜುನ ಖರ್ಗೆ ಇನ್ನೂ ಹಲವರು ನಾಯಕರು ಈಗಾಗಲೇ ವೇದಿಕೆ ಮೇಲೆ ಆಗಮಿಸಿದ್ದಾರೆ.
6:31 PM, 28 Nov

ಉದ್ಧವ್ ಠಾಕ್ರೆ ಸೋದರ ಸಂಬಂಧಿ ಒಂದು ಕಾಲದ ಗೆಳೆಯ ರಾಜ್ ಠಾಕ್ರೆ ಸಹ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬಂದಿದ್ದಾರೆ. ರಾಜ್ ಠಾಕ್ರೆ ಮಹಾರಾಷ್ಟ್ರ ನವನಿರ್ಮಾಣ ಸೇನಾ ದ ಮುಖ್ಯಸ್ಥರಾಗಿದ್ದಾರೆ.
6:29 PM, 28 Nov

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದು, 'ಮಹಾರಾಷ್ಟ್ರದ 19 ನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ನಿಮಗೆ ಅಭಿನಂದನೆಗಳು, ಇದೊಂದು ಐತಿಹಾಸಿಕ ಘಟನೆ, ನಿಮ್ಮ ದೂರದೃಷ್ಟಿಯ ನಾಯಕತ್ವವನ್ನು ನಾನು ಪ್ರಶಂಸಿಸುತ್ತೇನೆ' ಎಂದು ಹೇಳಿದ್ದಾರೆ.
6:24 PM, 28 Nov

'ಮಹಾ ವಿಕಾಸ ಅಗಾಧಿ'ಯು ಸಾಮಾನ್ಯ ಕನಿಷ್ಟ ಕಾರ್ಯಕ್ರಮ ಬಿಡುಗಡೆ ಮಾಡಿದ್ದು, ರೈತರು ಮತ್ತು ಉದ್ಯೋಗ ನೀಡಿಕೆ ಸರ್ಕಾರದ ಮೊದಲ ಆದ್ಯತೆ ಎಂದು ಹೇಳಿದೆ. ಜೊತೆಗೆ 80% ಉದ್ಯೋಗವನ್ನು ಸ್ಥಳೀಯರಿಗೆ ನೀಡಲಾಗುವುದು ಎಂದು ಭರವಸೆ ನೀಡಲಾಗಿದೆ.
6:21 PM, 28 Nov

ತಮಿಳುನಾಡು ವಿಧಾನಸಭೆ ವಿಪಕ್ಷ ನಾಯಕ ಎಂಕೆ ಸ್ಟಾಲಿನ್, ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ ಸೇರಿದಂತೆ ಇನ್ನೂ ಹಲವು ಮುಖಂಡರು ಈಗಾಗಲೇ ವೇದಿಕೆ ಮೇಲೆ ಆಸೀನರಾಗಿದ್ದಾರೆ. ಇನ್ನು ಕೆಲವೇ ಹೊತ್ತಿನಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಪ್ರಾರಂಭವಾಗಲಿದೆ.
6:15 PM, 28 Nov

ಶಿವಸೇನಾ ಪಕ್ಷದ ಮುಖವಾಣಿ ಆಗಿದ್ದ ಸಾಮ್ನಾ ಪತ್ರಿಕೆಯ ಸಂಪಾದಕ ಹುದ್ದೆಗೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದಾರೆ. ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನಾ ಅವರು ಸಂಪಾದಕ ಹುದ್ದೆಯನ್ನು ತ್ಯಜಿಸಿದ್ದಾರೆ. ಸಾಮ್ನಾ ಮೂಲಕ ಕಟುವಾದ ಸಂಪಾದಕೀಯಗಳನ್ನು ಅವರು ಬರೆಯುತ್ತಿದ್ದರು.
6:12 PM, 28 Nov

ಛತ್ರಪತಿ ಶಿವಾಜಿ ಮಹಾರಾಜರ ದೊಡ್ಡ ಮೂರ್ತಿಯನ್ನು ಪ್ರಮಾಣ ವಚನ ವೇದಿಕೆ ಮೇಲೆ ನಿಲ್ಲಿಸಲಾಗಿದೆ. ವೇದಿಕೆ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು, 6:40 ಕ್ಕೆ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದು ರಾಜ್ಯಪಾಲರ ಕಚೇರಿ ಮಾಹಿತಿ ನೀಡಿದೆ.
6:05 PM, 28 Nov

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಕಾರ್ಯಕ್ರಮಕ್ಕೆ ಗೈರಾಗುತ್ತಿದ್ದಾರೆ. ಆದರೆ ಕಾಂಗ್ರೆಸ್‌ನ ಹಿರಿಯ ನಾಯಕರು ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಾರೆ. ಪವಾರ್ ಕುಟುಂಬ, ಶಿವಸೇನಾ ಮುಖಂಡರು, ವಿವಿಧ ರಾಜ್ಯಗಳ ಸಿಎಂ ಗಳು ಸಹ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಾರೆ.
5:50 PM, 28 Nov

ಶಿವಾಜಿ ಪಾರ್ಕ್‌ನಲ್ಲಿ ಈಗಾಗಲೇ ಶೀವಸೇನಾ, ಎನ್‌ಸಿಪಿ, ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಭದ್ರತಾ ವ್ಯವಸ್ಥೆಯ ಅಂತಿಮ ಪರಿಶೀಲನೆ ನಡೆಸಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮಕ್ಕಾಗಿ ದೊಡ್ಡ ವೇದಿಕೆಯನ್ನು ಹಾಕಲಾಗಿದೆ.
5:40 PM, 28 Nov

ಪ್ರಮಾಣ ವಚನ ಸ್ವೀಕರಿಸಿದ ನಂತರ ಸಿಎಂ ಉದ್ಧವ್ ಠಾಕ್ರೆ ಅವರು ತಮ್ಮ ಮೊದಲ ಸಂಪುಟ ಸಭೆಯನ್ನು ಸಹ್ಯಾದ್ರಿ ಗೆಸ್ಟ್‌ ಹೌಸ್‌ ನಲ್ಲಿ ನಡೆಸಲಿದ್ದಾರೆ.
5:20 PM, 28 Nov

ಎನ್‌ಸಿಪಿ-ಶೀವಸೇನಾ-ಕಾಂಗ್ರೆಸ್‌ ಪಕ್ಷಗಳು ತಮ್ಮ ಮೈತ್ರಿ ಸರ್ಕಾರದ ಸಾಮಾನ್ಯ ಕನಿಷ್ಟ ಕಾರ್ಯಕ್ರಮಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿವೆ. ರೈತರ ಕಲ್ಯಾಣ, ನಿರುದ್ಯೋಗ, ಮಹಿಳೆ ಸಬಲೀಕರಣ, ಶಿಕ್ಷಣ, ನಗರಾಭಿವೃದ್ಧಿ, ಪ್ರವಾಸ, ಕಲೆ ಮತ್ತು ಸಂಸ್ಕೃತಿ ಬಗ್ಗೆ ಕೈಗೊಳ್ಳಲಿರುವ ಕ್ರಮಗಳನ್ನು ಈ ಸಾಮಾನ್ಯ ಕನಿಷ್ಟ ಕಾರ್ಯಕ್ರಮ ಒಳಗೊಂಡಿದೆ.
5:17 PM, 28 Nov

ಇಂದು ಮೂರೂ ಪಕ್ಷಗಳಿಂದ ತಲಾ ಇಬ್ಬರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭದಲ್ಲಿ ತಾವು ಪ್ರಮಾಣ ವಚನ ಸ್ವೀಕರಿಸುವುದಿಲ್ಲವೆಂದು ಅಜಿತ್ ಪವಾರ್ ಹೇಳಿದ್ದಾರೆ.
5:16 PM, 28 Nov

ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಉದ್ಧವ್ ಠಾಕ್ರೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗೈರಾಗಲಿದ್ದಾರೆ. ಆದರೆ ಈ ಬಗ್ಗೆ ಪತ್ರ ಬರೆದಿರುವ ಸೋನಿಯಾ ಗಾಂಧಿ, ಕಾರ್ಯಕ್ರಮಕ್ಕೆ ಗೈರಾಗುತ್ತಿರುವ ಬಗ್ಗೆ ಖೇದ ವ್ಯಕ್ತಪಡಿಸಿದ್ದಾರೆ.

English summary
Maharashtra CM Oath Taking Ceremony Live Updates in Kannada: Uddhav Thackeray will take oath as the next chief minister of Maharashtra in Mumbai today evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X