ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾತೆ ಹಂಚಿಕೆಯ ಸಂಭವನೀಯ ಪಟ್ಟಿ: ಅಜಿತ್‌ಗೆ ಹಣಕಾಸು ಖಾತೆ?

|
Google Oneindia Kannada News

ಮುಂಬೈ, ಜನವರಿ 2: ಮಹಾರಾಷ್ಟ್ರದಲ್ಲಿ ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್ ತ್ರಿಪಕ್ಷೀಯ ಮೈತ್ರಿಕೂಟ ಸರ್ಕಾರದ ಸಂಪುಟ ವಿಸ್ತರಣೆಯ ಒಂದು ಹಂತವನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮುಗಿಸಿದ್ದಾರೆ. ಮೂರೂ ಪಕ್ಷಗಳ ನಾಯಕರಲ್ಲಿ ಅಸಮಾಧಾನ ಹೊಗೆಯಾಡುತ್ತಿರುವುದರ ನಡುವೆಯೇ 34 ಮಂದಿ ಉದ್ಧವ್ ಠಾಕ್ರೆ ಸಂಪುಟ ಸೇರ್ಪಡೆಯಾಗಿದ್ದಾರೆ.

ಈಗ ಖಾತೆ ಹಂಚಿಕೆಯ ಸವಾಲು ಎದುರಾಗಿದ್ದು, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಹಣಕಾಸು ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಉದ್ಧವ್ ಠಾಕ್ರೆ ಮಗ ಆದಿತ್ಯ ಠಾಕ್ರೆಗೆ ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ಹಾಗೂ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರಿಗೆ ಲೋಕೋಪಯೋಗಿ ಇಲಾಖೆ ಸಿಗುವ ನಿರೀಕ್ಷೆಯಿದೆ.

ಮಹಾರಾಷ್ಟ್ರದಲ್ಲಿ ಪಕ್ಷ ಹಾಗೂ ಶಾಸಕ ಸ್ಥಾನ ತೊರೆದ ಎನ್‌ಸಿಪಿ ಶಾಸಕ ಮಹಾರಾಷ್ಟ್ರದಲ್ಲಿ ಪಕ್ಷ ಹಾಗೂ ಶಾಸಕ ಸ್ಥಾನ ತೊರೆದ ಎನ್‌ಸಿಪಿ ಶಾಸಕ

ಅಶೋಕ್ ಚವಾಣ್ ಅವರಿಗೆ ರಸ್ತೆ ಅಭಿವೃದ್ಧಿ ನಿಗಮ ಬಿಟ್ಟುಕೊಡುವಂತೆ ಮತ್ತು ಕೃಷಿ ಸಚಿವ ಖಾತೆಯನ್ನು ಕೂಡ ತನಗೆ ನೀಡುವಂತೆ ಶಿವಸೇನಾಗೆ ಕಾಂಗ್ರೆಸ್ ಒತ್ತಾಯಿಸಿದೆ. ಇದಕ್ಕೆ ಶಿವಸೇನಾ ಒಪ್ಪಿಕೊಂಡಿಲ್ಲ ಎನ್ನಲಾಗಿದೆ.

Maharashtra Cabinet Expansion Possible Portfolio Shiv Sena NCP Congress

ಮಹಾರಾಷ್ಟ್ರ ಸಂಪುಟ ವಿಸ್ತರಣೆಯ ಸಂಭವನೀಯ ಪಟ್ಟಿ ಇಲ್ಲಿದೆ.

* ಅಜಿತ್ ಪವಾರ್ (ಎನ್‌ಸಿಪಿ)- ಹಣಕಾಸು ಮತ್ತು ಯೋಜನೆ

* ಅನಿಲ್ ದೇಶಮುಖ್ (ಎನ್‌ಸಿಪಿ)- ಗೃಹ ಖಾತೆ

* ಜಯಂತ್ ಪಾಟೀಲ್ (ಎನ್‌ಸಿಪಿ)- ನೀರಾವರಿ

* ದಿಲೀಪ್ ವಲ್ಸೆ ಪಾಟೀಲ್ (ಎನ್‌ಸಿಪಿ)- ಕಾರ್ಮಿಕ ಮತ್ತು ಅಬಕಾರಿ

* ಛಗನ್ ಭುಜ್‌ಬಲ್ (ಎನ್‌ಸಿಪಿ)- ಆಹಾರ ಮತ್ತು ನಾಗರಿಕ ಪೂರೈಕೆ

ಅಧಿಕಾರ ಕಳೆದುಕೊಂಡಿದ್ದಕ್ಕೆ ಬಿಜೆಪಿಗೆ ಶಿವಸೇನಾ ಬಗ್ಗೆ ಹೊಟ್ಟೆಯುರಿ: ಆದಿತ್ಯ ಠಾಕ್ರೆಅಧಿಕಾರ ಕಳೆದುಕೊಂಡಿದ್ದಕ್ಕೆ ಬಿಜೆಪಿಗೆ ಶಿವಸೇನಾ ಬಗ್ಗೆ ಹೊಟ್ಟೆಯುರಿ: ಆದಿತ್ಯ ಠಾಕ್ರೆ

* ಆದಿತ್ಯ ಠಾಕ್ರೆ (ಶಿವಸೇನಾ)- ಪರಿಸರ ಮತ್ತು ಪ್ರವಾಸ

* ಏಕನಾಥ್ ಶಿಂಧೆ (ಶಿವಸೇನಾ)- ಗ್ರಾಮೀಣ ಅಭಿವೃದ್ಧಿ

* ಸುಭಾಶ್ ದೇಸಾಯಿ (ಶಿವಸೇನಾ)- ಕೈಗಾರಿಕೆ

* ಬಾಳಾಸಾಹೇಬ್ ಥೋರಟ್ (ಕಾಂಗ್ರೆಸ್)- ಕಂದಾಯ

* ಅಶೋಕ್ ಚವಾಣ್ (ಕಾಂಗ್ರೆಸ್)- ಲೋಕೋಪಯೋಗಿ

* ಅಮಿತ್ ದೇಶಮುಖ್ (ಕಾಂಗ್ರೆಸ್)- ಪ್ರಾಥಮಿಕ ಶಾಲಾ ಶಿಕ್ಷಣ

* ನಿತಿನ್ ರಾವತ್ (ಕಾಂಗ್ರೆಸ್)- ವಿದ್ಯುತ್

* ಯಶೋಮತಿ ಠಾಕೂರ್ (ಕಾಂಗ್ರೆಸ್)- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

* ನವಾಬ್ ಮಲಿಕ್ (ಎನ್‌ಸಿಪಿ)- ಅಲ್ಪಸಂಖ್ಯಾತ ವ್ಯವಹಾರ

* ಜಿತೇಂದ್ರ ಅವ್ಹಾದ್ (ಎನ್‌ಸಿಪಿ)- ಗೃಹ ನಿರ್ಮಾಣ ಅಭಿವೃದ್ಧಿ

English summary
Maharashtra Cabinet possible portfolio: DCM Ajit Pawar may get finance, Aaditya thackeray could get environment and tourism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X