ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಅಪರಾಧಕ್ಕೆ ಮರಣದಂಡನೆ, ಭಾರಿ ದಂಡ: ಬರಲಿದೆ ಕಠಿಣ ಕಾನೂನು

|
Google Oneindia Kannada News

ಮುಂಬೈ, ಡಿಸೆಂಬರ್ 12: ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ಅಪರಾಧಗಳನ್ನು ನಿಯಂತ್ರಿಸಲು ಮಹಾರಾಷ್ಟ್ರ ಸರ್ಕಾರ ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ. ಇಂತಹ ಅಪರಾಧಗಳಲ್ಲಿ ತೊಡಗುವವರಿಗೆ ಮರಣ ದಂಡನೆ, ಜೀವಾವಧಿ ಸೇರಿದಂತೆ ಕಠಿಣ ಶಿಕ್ಷೆಗಳನ್ನು ಹಾಗೂ ಭಾರಿ ಮೊತ್ತದ ದಂಡ ವಿಧಿಸುವ 'ಶಕ್ತಿ ಕಾಯ್ದೆ'ಯ ಕರಡು ಮಸೂದೆಯನ್ನು ರಾಜ್ಯ ಸಂಪುಟ ಅನುಮೋದಿಸಿದೆ.

ವಿಧಾನಸಭೆ ಅಧಿವೇಶನದಲ್ಲಿ ಮಹಾರಾಷ್ಟ್ರ ಶಕ್ತಿ ಅಪರಾಧ ಕಾನೂನು (ಮಹಾರಾಷ್ಟ್ರ ತಿದ್ದುಪಡಿ) ಕಾಯ್ದೆ 2020 ಮತ್ತು ಮಹಾರಾಷ್ಟ್ರ ಶಕ್ತಿ ಅಪರಾಧ ಕಾನೂನು 2020ರ ಅನುಷ್ಠಾನಕ್ಕೆ ವಿಶೇಷ ನ್ಯಾಯಾಲಯ ಮತ್ತು ವ್ಯವಸ್ಥೆಯನ್ನು ತರುವ ಎರಡು ಮಸೂದೆಗಳನ್ನು ಮಂಡಿಸಲಾಗುವುದು ಎಂದು ಮುಖ್ಯಮಂತ್ರಿಗಳ ಕಚೇರಿ ಹೇಳಿಕೆ ನೀಡಿದೆ.

ಮಹಾರಾಷ್ಟ್ರ: ಸರ್ಕಾರಿ ಉದ್ಯೋಗಿಗಳಿಗೆ ಹೊಸ ಡ್ರೆಸ್‌ಕೋಡ್ ಮಹಾರಾಷ್ಟ್ರ: ಸರ್ಕಾರಿ ಉದ್ಯೋಗಿಗಳಿಗೆ ಹೊಸ ಡ್ರೆಸ್‌ಕೋಡ್

ಈ ಮಸೂದೆಗಳು ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳನ್ನು ಎಸಗುವವರಿಗೆ ಕಠಿಣ ಶಿಕ್ಷೆ ವಿಧಿಸಲು ಕಾನೂನಿಗೆ ಸೂಕ್ತ ರೂಪ ನೀಡಲಿವೆ. ಡಿಸೆಂಬರ್ 14-15ರಂದು ಮುಂಬೈನಲ್ಲಿ ನಡೆಯುವ ಎರಡು ದಿನಗಳ ಚಳಿಗಾಲದ ಅಧಿವೇಶನದಲ್ಲಿ ಈ ಕರಡು ಮಸೂದೆಗಳನ್ನು ಮಂಡಿಸಲಾಗುತ್ತದೆ. ಮುಂದೆ ಓದಿ.

ಆಂಧ್ರದ ದಿಶಾ ಕಾಯ್ದೆ ಮಾದರಿ

ಆಂಧ್ರದ ದಿಶಾ ಕಾಯ್ದೆ ಮಾದರಿ

ಆಂಧ್ರಪ್ರದೇಶದಲ್ಲಿ ಕಳೆದ ವರ್ಷ ಜಾರಿಗೆ ತರಲಾದ ದಿಶಾ ಕಾಯ್ದೆಯ ಮಾದರಿಯನ್ನು ಶಕ್ತಿ ಕಾಯ್ದೆ ಹೊಂದಿದೆ. ದಿಶಾ ಕಾಯ್ದೆಯನ್ನು ಅಧ್ಯಯನ ಮಾಡಲು ರಚಿಸಲಾಗಿದ್ದ ಸಮಿತಿಯು ಅದೇ ರೀತಿಯ ಕಾಯ್ದೆಯನ್ನು ರೂಪಿಸಿದೆ. ಬಳಿಕ ಕರಡು ಮಸೂದೆಯನ್ನು ಅಂಗೀಕರಿಸಲು ಲೋಕೋಪಯೋಗಿ ಸಚಿವ ಅಶೋಕ್ ಚವಾಣ್ ನೇತೃತ್ವದ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿತ್ತು.

ಸಾಯುವವರೆಗೂ ಜೈಲಲ್ಲಿ ಕೊಳೆಯಬೇಕು

ಸಾಯುವವರೆಗೂ ಜೈಲಲ್ಲಿ ಕೊಳೆಯಬೇಕು

ಘಟನೆ ನಡೆದ 15 ದಿನಗಳಲ್ಲಿ ತನಿಖೆ ನಡೆಯಬೇಕು ಮತ್ತು 30 ದಿನಗಳ ವಿಚಾರಣೆ ಮುಗಿಯಬೇಕು ಎಂದು ಮಸೂದೆ ಹೇಳುತ್ತದೆ. ಲೈಂಗಿಕ ಅಪರಾಧ ಪ್ರಕರಣಕ್ಕೆ ಮರಣದಂಡನೆ ವಿಧಿಸಬಹುದು. ಹತ್ತು ವರ್ಷಕ್ಕೆ ಕಡಿಮೆ ಇಲ್ಲದಂತೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಜೈಲು ಶಿಕ್ಷೆಯನ್ನು ಅಪರಾಧದ ಸ್ವರೂಪವು ಹೇಯವಾಗಿದ್ದರೆ ಸಹಜ ಸಾವಿನವರೆಗೂ ಜೈಲಿನಲ್ಲಿ ಇರಿಸಬಹುದು.

ಕಾಂಗ್ರೆಸ್ ದುರ್ಬಲವಾಗಿದೆ, ಪವಾರ್ ಯುಪಿಎ ಮುಖ್ಯಸ್ಥರಾದರೆ ಬೆಂಬಲ: ಶಿವಸೇನಾಕಾಂಗ್ರೆಸ್ ದುರ್ಬಲವಾಗಿದೆ, ಪವಾರ್ ಯುಪಿಎ ಮುಖ್ಯಸ್ಥರಾದರೆ ಬೆಂಬಲ: ಶಿವಸೇನಾ

36 ವಿಶೇಷ ನ್ಯಾಯಾಲಯಗಳು

36 ವಿಶೇಷ ನ್ಯಾಯಾಲಯಗಳು

ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳ ತನಿಖೆಗೆ ಹೊಸ ಕಾನೂನಿನ ಅಡಿ ವಿಶೇಷ ಪೊಲೀಸ್ ತಂಡಗಳು ಮತ್ತು ಪ್ರತ್ಯೇಕ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರನ್ನು ಒಳಗೊಂಡ 36 ವಿಶೇಷ ನ್ಯಾಯಾಲಯಗಳನ್ನು ರಚಿಸಲು ಪ್ರಸ್ತಾಪಿಸಲಾಗಿದೆ.

ಸಂತ್ರಸ್ತೆ ಚಿಕಿತ್ಸೆಗೆ ದಂಡದಿಂದಲೇ ಹಣ

ಸಂತ್ರಸ್ತೆ ಚಿಕಿತ್ಸೆಗೆ ದಂಡದಿಂದಲೇ ಹಣ

ಆಸಿಡ್ ದಾಳಿಗಳಂತಹ ಪ್ರಕರಣಗಳಲ್ಲಿ ಸಂತ್ರಸ್ತರ ಪ್ಲಾಸ್ಟಿಕ್ ಸರ್ಜರಿ ಮತ್ತು ಮುಖರಚನೆಯನ್ನು ಸರಿಪಡಿಸಲು 10 ಲಕ್ಷ ರೂ ಹಣ ನೀಡಲಾಗುತ್ತದೆ. ಈ ಹಣವನ್ನು ಆರೋಪಿಯಿಂದಲೇ ದಂಡದ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಸಂತ್ರಸ್ತರು ಮತ್ತು ಸಾಕ್ಷಿಗಳ ಹೇಳಿಕೆ ಮಹತ್ವದ್ದಾಗಿರುವುದರಿಂದ ಕೆಲವು ಪ್ರಕರಣಗಳಲ್ಲಿ ಸಾಕ್ಷ್ಯಗಳನ್ನು ಕ್ಯಾಮರಾದಲ್ಲಿ ದಾಖಲಿಸಲಾಗುತ್ತದೆ.

ಸಾಮಾಜಿಕ ಮಾಧ್ಯಮಕ್ಕೂ ಅನ್ವಯ

ಸಾಮಾಜಿಕ ಮಾಧ್ಯಮಕ್ಕೂ ಅನ್ವಯ

ಈ ಕರಡು ಮಸೂದೆಯು ಸಾಮಾಜಿಕ ಮಾಧ್ಯಮಗಳನ್ನೂ ಒಳಗೊಂಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರಿಗೆ ಬೆದರಿಕೆ ಹಾಕುವುದು ಮತ್ತು ಕಿರುಕುಳ ನೀಡುವುದಕ್ಕೆ ಗರಿಷ್ಠ ಎರಡು ವರ್ಷ ಜೈಲು ಮತ್ತು ಒಂದು ಲಕ್ಷ ರೂ ದಂಡ ವಿಧಿಸಲಾಗುತ್ತದೆ. ಮಹಿಳೆಯರ ತಿದ್ದಿದ ವಿಡಿಯೋಗಳನ್ನು ಅಪ್‌ಲೋಡ್ ಮಾಡುವುದು, ಫೋಟೊ, ವಿಡಿಯೋ ಅಪ್‌ಲೋಡ್ ಮಾಡುವ ಬೆದರಿಕೆ ಹಾಕುವುದು ಕೂಡ ಇದರಲ್ಲಿ ಒಳಗೊಂಡಿದೆ.

English summary
Maharashtra cabinet has approved a draft bill of Shakti Act to curb crimes against women and children that has provision for death penalty, hefty fines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X