ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಕಟ್ಟಡ ಕುಸಿತದಲ್ಲಿ ಇಬ್ಬರು ಸಾವು; ಐವರ ವಿರುದ್ಧ ಪ್ರಕರಣ

|
Google Oneindia Kannada News

ಮುಂಬೈ, ಆಗಸ್ಟ್.25: ಮಹಾರಾಷ್ಟ್ರದಲ್ಲಿ ಸಂಭವಿಸಿದ 5 ಅಂತಸ್ತಿನ ಕಟ್ಟಡ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಮೂವರು ಪುರುಷರು, ಇಬ್ಬರು ಮಹಿಳೆ ಮತ್ತು ಒಂದು ಗಂಡು ಮಗು ಸೇರಿದಂತೆ ದುರಂತದಲ್ಲಿ ಏಳು ಜನರು ಸಾವಿನ ಮನೆ ಸೇರಿದ್ದಾರೆ.
ರಾಯಘಡ್ ಜಿಲ್ಲೆ ಮಹದ್ ಪ್ರದೇಶದಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದಿತ್ತು. ಈ ದುರಂತಕ್ಕೆ ಸಂಬಂಧಿಸಿದಂತೆ ಈವರೆಗೂ ಐವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 304ರ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಾರಾಷ್ಟ್ರ: 5 ಮಹಡಿ ಕಟ್ಟಡ ಕುಸಿತದಲ್ಲಿ ಒಬ್ಬ ಸಾವು, 70 ಜನರ ರಕ್ಷಣೆಮಹಾರಾಷ್ಟ್ರ: 5 ಮಹಡಿ ಕಟ್ಟಡ ಕುಸಿತದಲ್ಲಿ ಒಬ್ಬ ಸಾವು, 70 ಜನರ ರಕ್ಷಣೆ

ಇನ್ನೂ 18ಕ್ಕೂ ಹೆಚ್ಚು ಜನರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕ ಸಿಬ್ಬಂದಿಯು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಈಗಾಗಲೇ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ 70ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Maharashtra Building Collapse: Raigad Police Registers Case Against Five Accused

18 ಮಂದಿ ರಕ್ಷಣೆಗೆ ಎನ್ ಡಿಆರ್ಎಫ್ ಕಾರ್ಯಾಚರಣೆ:

ಮಹದ್ ಪ್ರದೇಶದಲ್ಲಿ ಸಂಭವಿಸಿದ ಕಟ್ಟಡ ಕುಸಿತದಲ್ಲಿ ಇದುವರೆಗೂ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಕಟ್ಟಡದ ಅವಶೇಷಗಳಡಿ ಸಿಲುಕಿರುವ 18 ಜನರ ರಕ್ಷಿಸಲು ಮೂರು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಈ ಘಟನೆ ಕಾರಣದ ಕುರಿತು ತನಿಖೆ ನಡೆಸುವುದಕ್ಕೆ ವಿಶೇಷ ತನಿಖಾ ತಂಡವನ್ನು ರಚಿಸಬೇಕಿದೆ ಎಂದು ಅದಿಥಿ ತತ್ಕಾರೆ ತಿಳಿಸಿದ್ದಾರೆ. ಈ ಕಟ್ಟಡವನ್ನು ನಿರ್ಮಿಸಿ ಐದಾರು ವರ್ಷಗಳೇ ಕಳೆದಿದ್ದು, ಐದು ಅಂತಸ್ತಿನ ಕಟ್ಟಡದಲ್ಲಿ 40 ಫ್ಲಾಟ್ ಗಳಿದ್ದವು ಎಂದು ತಿಳಿದು ಬಂದಿದೆ.

English summary
Maharashtra Building Collapse: Raigad Police Registers Case Against Five Accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X