• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾರಾಷ್ಟ್ರದಲ್ಲಿ 10,12ನೇ ತರಗತಿಗಳಿಗೆ ಪರೀಕ್ಷಾ ದಿನಾಂಕ ಪ್ರಕಟ

|

ಪುಣೆ,ಫೆಬ್ರವರಿ 27: ಮಹಾರಾಷ್ಟ್ರದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ.ಹಾಗಿದ್ದರೂ ಪ್ರೌಢಶಿಕ್ಷಣ ಮಂಡಳಿ 10 ಹಾಗೂ 12ನೇ ತರಗತಿಗಳಿಗೆ ಪರೀಕ್ಷಾ ದಿನಾಂಕವನ್ನು ಘೋಷಣೆ ಮಾಡಿದೆ.

ಮಹಾರಾಷ್ಟ್ರ ಪ್ರೌಢ ಶಿಕ್ಷಣ ಮಂಡಳಿಯ 10 (ಎಸ್‌ಎಸ್‌ಸಿ) ಹಾಗೂ 12ನೇ ತರಗತಿ (ಎಚ್‌ಎಸ್‌ಸಿ) ಪರೀಕ್ಷೆಗಳು ಏ. 23ರಿಂದ ಮೇ 21ರ ವರೆಗೆ ನಡೆಯಲಿವೆ ಎಂದು ಮಂಡಳಿಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಪರೀಕ್ಷೆಯಿಲ್ಲ; 9, 10, 11ನೇ ತರಗತಿ ವಿದ್ಯಾರ್ಥಿಗಳೆಲ್ಲಾ ಪರೀಕ್ಷೆಯಿಲ್ಲ; 9, 10, 11ನೇ ತರಗತಿ ವಿದ್ಯಾರ್ಥಿಗಳೆಲ್ಲಾ "ಪಾಸ್" ಎಂದು ಘೋಷಿಸಿದ ಸರ್ಕಾರ

ನಾವು ಫೆಬ್ರವರಿ 16 ರಂದು ಪರೀಕ್ಷೆಯ ಪ್ರಸ್ತಾವಿತ ದಿನಾಂಕಗಳನ್ನು ಘೋಷಿಸಿದ್ದೆವು ಮತ್ತು ತಜ್ಞರಿಂದ ಸಲಹೆಗಳನ್ನು ಆಹ್ವಾನಿಸಿದ್ದೆವು, ಸೂಕ್ತ ಸಮಾಲೋಚನೆಯ ನಂತರ, ನಾವು ಪರೀಕ್ಷೆಗಳ ಅಂತಿಮ ವೇಳಾಪಟ್ಟಿಯನ್ನು ನಿಗದಿಪಡಿಸಿದ್ದೇವೆ" ಎಂದು ಘೋಷಿಸಿದ್ದಾಗಿ ಭೋಸಲೆ ಹೇಳಿದ್ದಾರೆ..

ಎಸ್‌ಎಸ್‌ಸಿ ಪರೀಕ್ಷೆಗಳು ಏ. 29ರಿಂದ ಮೇ 20ರ ವರೆಗೆ, ಎಚ್‌ಎಸ್‌ಸಿ ಪರೀಕ್ಷೆಗಳು ಏ. 23ರಿಂದ ಮೇ 21ರ ವರೆಗೆ ನಡೆಯಲಿವೆ ಎಂದು ಮಂಡಳಿಯ ಕಾರ್ಯದರ್ಶಿ ಅಶೋಕ್‌ ಭೋಸ್ಲೆ ತಿಳಿಸಿದ್ದಾರೆ.

ಈ ಪರೀಕ್ಷೆಗಳನ್ನು ಪ್ರತಿ ವರ್ಷ ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ನಡೆಸಲಾಗುತ್ತಿತ್ತು. ಕೋವಿಡ್‌-19 ಹಿನ್ನೆಲೆಯಲ್ಲಿ ಈ ಬಾರಿ ಪರೀಕ್ಷೆಯ ದಿನಾಂಕಗಳನ್ನು ಬದಲಿಸಲಾಗಿದೆ ಎಂದೂ ಹೇಳಿದ್ದಾರೆ.

ಈಗಾಗಲೇ ಕೇರಳ,ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ ಮತ್ತೆ ಲಾಕ್‌ಡೌನ್ ಮಾಡುವ ಎಚ್ಚರಿಕೆಯನ್ನೂ ನೀಡಲಾಗುತ್ತಿದೆ.
ದೇಶದಲ್ಲಿ ಎರಡನೇ ಹಂತದಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದ್ದು, ಇದಾದ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕಡಿಮೆಯಾಗುವ ಸಾಧ್ಯತೆ ಇದೆ.

English summary
Day after Maharashtra school education minister Varsha Gaikwad has said that the board examinations for classes 10 and 12 will be held in the state on April 23 and May 21 officials said..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X