• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುಪ್ರಿಯಾ ಸುಳೆ ಟೀಕಿಸಿ ವಿವಾದಕ್ಕೆ ಸಿಲುಕಿದ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ

|
Google Oneindia Kannada News

ಮಹಾರಾಷ್ಟ್ರ, ಮೇ 26: ಮಹಾರಾಷ್ಟ್ರದ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಟೀಕಿಸಿ ವಿವಾದಕ್ಕೆ ಸಿಲುಕಿದ್ದಾರೆ.

ಚಂದ್ರಕಾತ್‌ ಪಾಟೀಲ್ ಒಬಿಸಿ ಮೀಸಲಾತಿ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸುಪ್ರಿಯಾ ಸುಳೆ ತಿಳಿಸಿದರು. ಅದಕ್ಕೆ ಅವರು "ನಿಮಗೆ ರಾಜಕೀಯ ಅರ್ಥವಾಗದಿದ್ದರೆ ಮನೆಗೆ ಹೋಗಿ ಅಡುಗೆ ಮಾಡಿ" ಎಂದು ನಿಂದಿಸಿದ್ದಾರೆ.

ಜೈಲಿನಲ್ಲೇ ಜೀವನ: ಪ್ರತ್ಯೇಕವಾದಿ ಯಾಸಿನ್ ಮಲಿಕ್ ಈಗ ತಿಹಾರ್ ಜೈಲಿನ 7ನೇ ಕೊಠಡಿಯಲ್ಲಿ ಜೈಲಿನಲ್ಲೇ ಜೀವನ: ಪ್ರತ್ಯೇಕವಾದಿ ಯಾಸಿನ್ ಮಲಿಕ್ ಈಗ ತಿಹಾರ್ ಜೈಲಿನ 7ನೇ ಕೊಠಡಿಯಲ್ಲಿ

ಬುಧವಾರ ಸುಪ್ರಿಯಾ ಸುಳೆ ಇದೇ ವಿಚಾರವಾಗಿ ಪಕ್ಷದ ಸಭೆಯಲ್ಲಿ ಮಾತನಾಡುತ್ತಿದ್ದರು. ಒಬಿಸಿ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಆಡಳಿತದಲ್ಲಿರುವ ಮಧ್ಯಪ್ರದೇಶಕ್ಕೆ ಸುಪ್ರೀಂಕೋರ್ಟ್‌ನಿಂದ ಪರಿಹಾರ ಸಿಕ್ಕಿದ್ದು ಹೇಗೆ? ಎಂಬ ಪ್ರಶ್ನೆಗಳನ್ನು ಎತ್ತಿರುವ ಅವರು, ಮಧ್ಯಪ್ರದೇಶದ ಮುಖ್ಯಮಂತ್ರಿ ದೆಹಲಿಗೆ ಬಂದು ಯಾರನ್ನೋ ಭೇಟಿಯಾದರು. ಏಕಾಏಕಿ ಏನಾಯಿತೋ ಗೊತ್ತಿಲ್ಲ. ಮುಂದಿನ ಎರಡು ದಿನಗಳಲ್ಲಿ ಅವರು ಒಬಿಸಿ ಮೀಸಲಾತಿಗೆ ಚಾಲನೆ ಪಡೆದರು ಎಂದು ಹೇಳಿಕೆ ನೀಡಿದ್ದರು.

ಕಾಂಗ್ರೆಸ್‌ ಒಳ್ಳೆಯದೆ, ಅದರ ಬಗ್ಗೆ ನನ್ನಲ್ಲಿ ದೂರುಗಳಿಲ್ಲ: ಸಿಬಲ್‌ ಕಾಂಗ್ರೆಸ್‌ ಒಳ್ಳೆಯದೆ, ಅದರ ಬಗ್ಗೆ ನನ್ನಲ್ಲಿ ದೂರುಗಳಿಲ್ಲ: ಸಿಬಲ್‌

 ಮನೆಗೆ ಹೋಗಿ ಅಡುಗೆ ಮಾಡಿಕೊಂಡಿರಿ ಎಂದು ಟೀಕೆ

ಮನೆಗೆ ಹೋಗಿ ಅಡುಗೆ ಮಾಡಿಕೊಂಡಿರಿ ಎಂದು ಟೀಕೆ

ಸುಪ್ರಿಯಾ ಸುಳೆ ಮಾತನಾಡಿದ ಸ್ಥಳದ ಹತ್ತಿರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪಾಟೀಲ್ ಹೇಳಿಕೆಗೆ ಉತ್ತರಿಸಿ, ನೀವ್ಯಾಕೆ ರಾಜಕೀಯದಲ್ಲಿ ಇದ್ದೀರಿ, ಮನೆಗೆ ಹೋಗಿ ಅಡುಗೆ ಮಾಡಿ, ರಾಜಕೀಯದಲ್ಲಿದ್ದು, ಸಿಎಂ ಭೇಟಿ ಮಾಡುವುದು ಹೇಗೆಂದು ಅರ್ಥವಾಗುತ್ತಿಲ್ಲವೇ? ನೀವು (ಹಾಗೂ) ದೆಹಲಿಗೆ ಹೋಗಲಿ ಅಥವಾ ನರಕಕ್ಕೆ ಹೋಗಲಿ ಆದರೆ ಮೀಸಲಾತಿ ಕೊಡಲಿ ಎಂದು ಹೇಳಿದರು.

 ನನ್ನ ಮಡದಿ ಬಗ್ಗೆ ನನಗೆ ಹೆಮ್ಮೆ ಇದೆ ಎಂದ ಸದಾನಂದ

ನನ್ನ ಮಡದಿ ಬಗ್ಗೆ ನನಗೆ ಹೆಮ್ಮೆ ಇದೆ ಎಂದ ಸದಾನಂದ

ಇದೇ ವೇಳೆ ರಾಜಕೀಯದಿಂದ ದೂರ ಉಳಿದಿರುವ ಸುಪ್ರಿಯಾ ಸುಳೆ ಪತಿ ಸದಾನಂದ ಸುಳೆ ಚಂದ್ರಕಾಂತ್ ಪಾಟೀಲ್ ಸಾಮಾಜಿಕ ಜಾಲತಾಣಗಳ ಮೂಲಕ ಸದಾನಂದ್ ಪಾಟೀಲ್‌ ಹೇಳಿಕೆಯನ್ನು ಖಂಡಿಸಿದರು ಮತ್ತು "ನನ್ನ ಹೆಂಡತಿಯ ಬಗ್ಗೆ ನನಗೆ ಹೆಮ್ಮೆ ಇದೆ" ಎಂದು ಹೇಳಿದರು. "ಅವರು (ಬಿಜೆಪಿ) ಸ್ತ್ರೀದ್ವೇಷಿಗಳು ಮತ್ತು ಮಹಿಳೆಯರನ್ನು ಅವಹೇಳನ ಮಾಡುತ್ತಾರೆ. ಗೃಹಿಣಿ, ತಾಯಿ ಮತ್ತು ಯಶಸ್ವಿ ರಾಜಕಾರಣಿಯಾಗಿರುವ ನನ್ನ ಹೆಂಡತಿಯ ಬಗ್ಗೆ ನಾನು ಹೆಮ್ಮೆಪಡುತ್ತೇನೆ, ಭಾರತದ ಅನೇಕ ಕಠಿಣ ಪರಿಶ್ರಮಿ ಮತ್ತು ಪ್ರತಿಭಾವಂತ ಮಹಿಳೆಯರಲ್ಲಿಅವರು ಒಬ್ಬರು. ಬಿಜೆಪಿ ಅಧ್ಯಕ್ಷ ಹೀಗೆ ಹೇಳುವ ಮೂಲಕ ಎಲ್ಲಾ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ಅವರು ಟೀಕಿಸಿದರು.

 ಒಬಿಸಿ ಮೀಸಲಾತಿಗಾಗಿ ಹೋರಾಟ

ಒಬಿಸಿ ಮೀಸಲಾತಿಗಾಗಿ ಹೋರಾಟ

ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗಳಿಗೆ ರಾಜಕೀಯ ಮೀಸಲಾತಿಯನ್ನು ಸುಪ್ರೀಂಕೋರ್ಟ್‌ ತಡೆಹಿಡಿದ ನಂತರ ಕಳೆದ ಕೆಲವು ತಿಂಗಳುಗಳಿಂದ ಮಹಾರಾಷ್ಟ್ರ ರಾಜಕೀಯದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ನ್ಯಾಯಾಲಯಗಳಲ್ಲಿ ಒಬಿಸಿ ಮೀಸಲಾತಿಗಾಗಿ ನಡೆದ ಹೋರಾಟದಲ್ಲಿ ರಾಜ್ಯ ಸರ್ಕಾರ ಸೋತಿದೆ ಎಂದು ಬಿಜೆಪಿ ಆರೋಪಿಸಿದರೆ, ಆಡಳಿತಾತ್ಮಕ ಎಂವಿಎ ಪ್ರಾಯೋಗಿಕ ಡೇಟಾವನ್ನು ಒದಗಿಸದ ಕೇಂದ್ರವನ್ನು ದೂಷಿಸಿದೆ.

 ಸಾಮಾಜಿಕ ಜಾಲತಾಣದಲ್ಲಿ ಟೀಕೆ

ಸಾಮಾಜಿಕ ಜಾಲತಾಣದಲ್ಲಿ ಟೀಕೆ

ಹಿಂದೊಮ್ಮೆ ಲೋಕಸಭೆ ಅಧಿವೇಶನ ನಡೆಯುವಾಗ ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ ಮಾತನಾಡುತ್ತಿದ್ದರು. ಆಗ ಸಂಸದೆ ಸುಪ್ರಿಯಾ ಸುಳೆ ಕಾಂಗ್ರೆಸ್ ನಾಯಕ, ಸಂಸದ ಶಶಿ ತರೂರ್ ಜೊತೆ ಮಾತುಕತೆಯಲ್ಲಿ ತೊಡಗಿದ್ದರು. ಇದಕ್ಕೆ ಹಲವು ರಾಜಕೀಯ ನಾಯಕರು ಸೇರಿದಂತೆ ಹಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ಹಲವು ಮಂದಿ ಟ್ರಾಲ್ ಮಾಡಿದ್ದರು.

 ಸುಳೆ ಮಾತಿಂದ ಫಾರೂಕ್‌ಗೆ ತೊಂದರೆ ಆಗಿರಲಿಲ್ಲ

ಸುಳೆ ಮಾತಿಂದ ಫಾರೂಕ್‌ಗೆ ತೊಂದರೆ ಆಗಿರಲಿಲ್ಲ

ಇದಕ್ಕೆ ಬಳಿಕ ಪ್ರತಿಕ್ರಿಯಿಸಿದ್ದ ಸಂಸದ ಶಶಿ ತರೂರ್‌, ವಿಡಿಯೋ ನೋಡಿ ಆನಂದಿಸುತ್ತಿರುವ ಎಲ್ಲರಿಗೂ ಸ್ಪಷ್ಟನೆ ನೀಡಲು ಬಯಸುತ್ತೇನೆ ಲೋಕಸಭೆಯಲ್ಲಿ ಸುಪ್ರಿಯಾ ನನ್ನ ಹತ್ತಿರ ಪ್ರಶ್ನೆಯೊಂದನ್ನು ಕೇಳುತ್ತಿದ್ದರು. ಬಳಿಕ ಅಂದರೆ ಫಾರೂಕ್‌ ಅಬ್ದುಲ್ಲಾ ಮಾತನಾಡಿದ ನಂತರ ಅವರು ಮಾತನಾಡಬೇಕಿತ್ತು, ಫಾರೂಕ್‌ ಅವರಿಗೆ ತೊಂದರೆಯಾಗದಂತೆ ಸುಪ್ರಿಯಾ ಮೃದುವಾಗಿಯೇ ಮಾತನಾಡುತ್ತಿದ್ದರು. ಅವರು ಮಾತು ಸಣ್ಣದನಿಯಲ್ಲಿದ್ದರಿಂದ ನಾನು ಅವರ ಮಾತು ಕೇಳಿಸಿಕೊಳ್ಳಲು ಮೇಜಿನ ಮೇಲೆ ಓರಗಿದ್ದೆ ಎಂದು ಬರೆದುಕೊಂಡಿದ್ದರು.

English summary
Maharashtra BJP President Chandrakant Patil has come under controversy over his comments on Nationalist Congress Party (NCP) MP Supriya Sule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X