ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ಗೆ ಕೋವಿಡ್ ಪಾಸಿಟಿವ್

|
Google Oneindia Kannada News

ಮುಂಬೈ, ಅಕ್ಟೋಬರ್ 24: ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಗೆ ಮತ್ತೊಂದು ಹಿನ್ನಡೆ ಉಂಟಾಗಿದೆ. ಮುಖಂಡ ಶಹನವಾಜ್ ಹುಸೇನ್ ಮತ್ತು ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಅವರು ಕೊರೊನಾ ವೈರಸ್‌ ಸೋಂಕಿಗೆ ಒಳಗಾದ ಬಳಿಕ ಈಗ ಬಿಹಾರ ರಾಜ್ಯ ಚುನಾವಣಾ ಪ್ರಚಾರದ ಉಸ್ತುವಾರಿಯಾಗಿರುವ ಪಕ್ಷದ ಹಿರಿಯ ನಾಯಕ ಮತ್ತು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಇರುವುದು ದೃಢಪಟ್ಟಿದೆ.

ತಾವು ಕೋವಿಡ್ ಸೋಂಕಿಗೆ ಒಳಗಾಗಿರುವ ಬಗ್ಗೆ ಸ್ವತಃ ದೇವೇಂದ್ರ ಫಡ್ನವೀಸ್ ಮಾಹಿತಿ ನೀಡಿದ್ದಾರೆ. 'ಕೆಲಸ ಮಾಡುವುದನ್ನು ಸ್ವಲ್ಪ ಸಮಯ ನಿಲ್ಲಿಸಿ ವಿರಾಮ ತೆಗೆದುಕೊಳ್ಳುವಂತೆ ದೇವರು ಬಯಸಿದ್ದಾನೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.

ಫಡ್ನವೀಸ್ ಜತೆ ಮುನಿಸು: ಬಿಜೆಪಿ ತೊರೆದ ಹಿರಿಯ ಮುಖಂಡ ಎನ್‌ಸಿಪಿಗೆಫಡ್ನವೀಸ್ ಜತೆ ಮುನಿಸು: ಬಿಜೆಪಿ ತೊರೆದ ಹಿರಿಯ ಮುಖಂಡ ಎನ್‌ಸಿಪಿಗೆ

'ಲಾಕ್ ಡೌನ್ ಸಂದರ್ಭದಿಂದಲೂ ನಾನು ಪ್ರತಿ ದಿನ ಕೆಲಸ ಮಾಡುತ್ತಿದ್ದೇನೆ. ಆದರೆ ದೇವರು ನನ್ನನ್ನು ಸ್ವಲ್ಪ ಸಮಯ ತಡೆದು ವಿರಾಮ ತೆಗೆದುಕೊಳ್ಳುವುದನ್ನು ಬಯಸಿದ್ದಾನೆ ಎನಿಸುತ್ತದೆ! ನನಗೆ ಕೋವಿಡ್ 19 ಪಾಸಿಟಿವ್ ಬಂದಿದ್ದು, ಪ್ರತ್ಯೇಕವಾಗಿ ಉಳಿದುಕೊಂಡಿದ್ದೇನೆ' ಎಂದು ಅವರು ತಿಳಿಸಿದ್ದಾರೆ.

 Maharashtra BJP Leader Devendra Fadnavis Tested Positive For Coronavirus

'ವೈದ್ಯರು ನೀಡುತ್ತಿರುವ ಸಲಹೆಗಳಿಗೆ ಅನುಗುಣವಾಗಿ ಎಲ್ಲ ಔಷಧ ಹಾಗೂ ಚಿಕಿತ್ಸೆಗಳನ್ನು ಪಡೆದುಕೊಳ್ಳುತ್ತಿದ್ದೇನೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ಕೋವಿಡ್ 19 ಪರೀಕ್ಷೆಗೆ ಒಳಪಡುವಂತೆ ಸಲಹೆ ನೀಡುತ್ತೇನೆ. ಎಲ್ಲರೂ ಎಚ್ಚರಿಕೆಯಿಂದ ಇರಿ' ಎಂದು ಹೇಳಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆಯ ಬಿಜೆಪಿ ಉಸ್ತುವಾರಿಯನ್ನಾಗಿ ಫಡ್ನವೀಸ್ ಅವರನ್ನು ಕಳೆದ ತಿಂಗಳು ನೇಮಕ ಮಾಡಲಾಗಿತ್ತು. ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು ನಾಲ್ಕು ದಿನ ಬಾಕಿ ಇದೆ.

ಪ್ರಧಾನಿ ಮೇಲಿನ ವಿಶ್ವಾಸದಿಂದ ಮಿತ್ರಪಕ್ಷಗಳಿಗೂ ಲಾಭ: ಫಡ್ನವೀಸ್ಪ್ರಧಾನಿ ಮೇಲಿನ ವಿಶ್ವಾಸದಿಂದ ಮಿತ್ರಪಕ್ಷಗಳಿಗೂ ಲಾಭ: ಫಡ್ನವೀಸ್

Recommended Video

Corona ಓಡಿಸೋ ಸಮಯ ದೂರ ಇಲ್ಲಾ | Corona Vaccine | Oneindia Kannada

ಕೇಂದ್ರ ಸಚಿವರಾದ ಸುರೇಶ್ ಪ್ರಭು, ಜಯಂತ್ ಸಿನ್ಹಾ, ಧರ್ಮೇಂದ್ರ ಪ್ರಧಾನ್ ಸೇರಿದಂತೆ ಅನೇಕ ಪ್ರಮುಖರು ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

English summary
Maharashtra BJP Leader Devendra Fadnavis tested positive for Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X