ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಬಂದ್‌: ಆತ್ಮಹತ್ಯೆಗೆ ಯತ್ನಿಸಿದ್ದ ಪ್ರತಿಭಟನಾಕಾರ ಸಾವು

By Nayana
|
Google Oneindia Kannada News

ಮುಂಬೈ, ಜು.25: ಮರಾಠ ಸಮುದಾಯಕ್ಕೆ ಉದ್ಯೋಗ, ಶಿಕ್ಷಣ ಮೀಸಲಾತಿ ನೀಡಬೇಕೆಂದು ಮರಾಠ ಸಂಘಟನೆಗಳು ಹೋರಾಟಕ್ಕಿಳಿದಿವೆ.

ಮಂಗಳವಾರ ಪ್ರತಿಭಟನೆ ವೇಳೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಮರಾಠ ಸಮು ದಾಯದ ಜಗನ್ನಾಥ್‌ ಸೋನಾವ್ನೆ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಸೋಮವಾರ ಔರಂಗಾಬಾದ್‌ನಲ್ಲಿ ಗೋದಾವರಿ ನದಿಗೆ ದುಮುಕಿ ಕಾಕಾಸಾಹೇಬ್‌ ಶಿಂದೆ ಎನ್ನುವವರು ಸೋಮವಾರ ಮೃತಪಟ್ಟಿದ್ದರು. ಸಾವಿನ ಬಳಿಕ ಪ್ರತಿಭಟನೆ ಇನ್ನಷ್ಟು ತೀವ್ರತೆಯನ್ನು ಪಡೆದುಕೊಂಡು ಹಿಂಸಾಚಾರವೂ ಆರಂಭವಾಗಿತ್ತು.

ಮಹಾರಾಷ್ಟ್ರ ಬಂದ್‌: ಉದ್ಯೋಗ, ಶಿಕ್ಷಣ ಮೀಸಲಿಗೆ ಮರಾಠಿಗರ ಪಟ್ಟು ಮಹಾರಾಷ್ಟ್ರ ಬಂದ್‌: ಉದ್ಯೋಗ, ಶಿಕ್ಷಣ ಮೀಸಲಿಗೆ ಮರಾಠಿಗರ ಪಟ್ಟು

ಇದೀಗ ಮತ್ತೊಂದು ಪ್ರತಿಭಟನಾಕಾರ ಮೃತಪಟ್ಟಿರುವ ಹಿನ್ನೆಲೆ ಇನ್ನಷ್ಟು ಉದ್ವಿಗ್ನಗೊಳ್ಳುವ ಸಾಧ್ಯತೆ ಇದೆ. ಜಗನ್ನಾಥ್‌ ಮಂಗಳವಾರ ವಿಷ ಕುಡಿದು ಆತ್ಮಹತ್ಯೆಗೆ ತನ್ಇಸಿದ್ದ ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

Maharashtra bandh: protestor who attempted suicide dies

ಬುಧವಾರ ಮರಾಠ ಕ್ರಾಂತಿ ಮೋರ್ಚಾ ಕಾರ್ಯಕರ್ತರು ಹಲವೆಡೆ ವಾಹನಗಳಿಗೆ ಬೆಂಕಿ ಹಚ್ಚಿ, ಸಾರ್ವಜನಿಕ ಸಾರಿಗೆ ಬಸ್‌ಗಳನ್ನು ಧ್ವಂಸ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದಾಗಿ ಘಾನ್ಸೋಲಿ ಮತ್ತು ವಾಗಲ್‌ ಎಸ್ಟೇಟ್‌ ಪ್ರದೇಶದಲ್ಲಿ ಸಾರಿಗೆ ಸಂಚಾರವನ್ನು ಸ್ತಬ್ಧಗೊಳಿಸಲಾಗಿದೆ. ಇದರೊಂದಿಗೆ ಪ್ರತಿಭಟನಾಕಾರರು ಥಾಣೆಯಲ್ಲಿ ರೈಲುಗಳ ತಡೆ ನಡೆಸಿದರು.

English summary
Maratha protest intensifies after person died, who tried to get suicide on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X