ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಶುರುವಾಯ್ತು ಶಿವಸೇನೆ-ಬಿಜೆಪಿ ಸೀಟು ಹಂಚಿಕೆ ಚೌಕಾಸಿ

|
Google Oneindia Kannada News

ಮುಂಬೈ, ಸೆಪ್ಟೆಂಬರ್ 06: ಮಹಾರಾಷ್ಟ್ರದಲ್ಲಿ ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮೈತ್ರಿಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ನಡುವೆ ಈಗಾಗಲೇ ಸೀಟು ಹಂಚಿಕೆ ಚೌಕಾಸಿ ಆರಂಭವಾಗಿದೆ.

ಮಹಾರಾಷ್ಟ್ರದ ಒಟ್ಟು 288 ವಿಧಾನಸಭೆ ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತು ಶಿವಸೇನೆ ತಲಾ 144 ಸೀಟುಗಳಲ್ಲಿ ಸ್ಪರ್ಧೆಗಳಿಯಲಿವೆ ಎಂದು ಶಿವಸೇನೆ ಮುಖಂಡರು ಹೇಳಿದ್ದರೂ, ಬಿಜೆಪಿ ಈ ಬಗ್ಗೆ ತನ್ನ ತೀರ್ಮಾನ ತಿಳಿಸಿಲ್ಲ.

ಮಹಾರಾಷ್ಟ್ರ ಚುನಾವಣೆ: ಕಾಂಗ್ರೆಸ್ -ಎನ್ಸಿಪಿ ಸೀಟು ಹಂಚಿಕೆ ಅಂತಿಮಮಹಾರಾಷ್ಟ್ರ ಚುನಾವಣೆ: ಕಾಂಗ್ರೆಸ್ -ಎನ್ಸಿಪಿ ಸೀಟು ಹಂಚಿಕೆ ಅಂತಿಮ

ಬಿಜೆಪಿ 2014 ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಕ್ಷೇತ್ರಗಳನ್ನು ಹಾಗೆಯೇ ಉಳಿಸಿಕೊಂಡು ಮಿಕ್ಕ ಕ್ಷೇತ್ರಗಳ ಸೀಟು ಹಂಚಿಕೆಯ ಬಗ್ಗೆ ಯೋಚಿಸಲಿದೆ ಎಂದು ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೂಚನೆ ನೀಡಿದ್ದಾರೆ.

Maharashtra Assembly Elections 2019: BJP-Shiv Sena Seat Distribution Politics

ಕೆಲವು ಮೂಲಗಳ ಪ್ರಕಾರ ಬಿಜೆಪಿ 170 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಶಿವಸೇನೆ 118 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದೆ. ಆದರೆ ಈ ಅನುಪಾತಕ್ಕೆ ಶಿವಸೇನೆ ಒಪ್ಪುತ್ತದೆಯೇ ಎಂಬುದು ಯೋಚಿಸಬೇಕಾದ ವಿಷಯ.

2014 ರಲ್ಲಿ ಬಿಜೆಪಿ ಮತ್ತು ಶಿವಸೇನೆಯ ನಡುವೆ ಕೊನೆಯ ಕ್ಷಣದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಮದಾಗಿ ವಿಧಾನಸಭೆ ಚುನಾವಣೆಯನ್ನು ಸ್ವತಂತ್ರವಾಗಿ ಎದುರಿಸಿದ್ದವು. ಬಿಜೆಪಿ 122, ಶಿವಸೇನೆ 63 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಕೆಲವು ತಿಂಗಳ ನಂತರ ಮತ್ತೆ ಮೈತ್ರಿ ಮಾಡಿಕೊಂಡಿದ್ದವು.

ಮಹಾರಾಷ್ಟ್ರದಲ್ಲಿ NCPಗೆ ಭಾರೀ ಆಘಾತ: ಶಿವಸೇನೆ ಸೇರಿದ ಪಕ್ಷಾಧ್ಯಕ್ಷಮಹಾರಾಷ್ಟ್ರದಲ್ಲಿ NCPಗೆ ಭಾರೀ ಆಘಾತ: ಶಿವಸೇನೆ ಸೇರಿದ ಪಕ್ಷಾಧ್ಯಕ್ಷ

ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎನ್ ಸಿಪಿ ಪಕ್ಷಗಳು ಕ್ರಮವಾಗಿ 42 ಮತ್ತು 41 ಕ್ಷೆತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಈ ಬಾರಿ ಎನ್ ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು ತಲಾ 125 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ ಎನ್ನಲಾಗಿದ್ದು, ಈ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ.

English summary
Maharashtra Assembly Elections 2019: BJP-Shiv Sena Seat Distribution Politics, Assembly elections in Maharashtra, BJP-Shiv Sena tie in Maharashtra,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X