ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಸಿಎಂ ಫಡ್ನವೀಸ್ ಸಲ್ಲಿಸಿದ ಅಫಿಡವಿಟ್: ಕುತೂಹಲಕಾರಿ ಅಂಶಗಳು

|
Google Oneindia Kannada News

ಮುಂಬೈ, ಅ 5: ಅಕ್ಟೋಬರ್ 21ರಂದು ಒಂದೇ ಹಂತದಲ್ಲಿ ನಡೆಯಲಿರುವ ಮಹಾರಾಷ್ಟ ಅಸೆಂಬ್ಲಿ ಚುನಾವಣೆಗೆ, ನಾಮಪತ್ರ ಸಲ್ಲಿಸಲು ಅಕ್ಟೋಬರ್ ನಾಲ್ಕು ಕೊನೆಯ ದಿನವಾಗಿತ್ತು.

ನಾಗಪುರ ನೈಋತ್ಯ ಕ್ಷೇತ್ರದಿಂದ ಸ್ಪರ್ಧಿಸಲು ರಾಜ್ಯದ ಹಾಲೀ ಸಿಎಂ ದೇವೇಂದ್ರ ಫಡ್ನವೀಸ್ ನಾಮಪತ್ರವನ್ನು ಸಲ್ಲಿಸಿದ್ದಾರೆ. ನಾಮಪತ್ರದ ಜೊತೆಗೆ, ಅವರು ಸಲ್ಲಿಸಿದ ಅಫಿಡವಿಟ್ ಹಲವು ಕುತೂಹಲಕಾರಿ ಅಂಶವನ್ನೂ ಹೊತ್ತುತಂದಿದೆ.

ಹಲವು ಸುತ್ತಿನ ಚೌಕಾಸಿಯ ನಂತರ, ಬಿಜೆಪಿ-ಶಿವಸೇನೆಯ ನಡುವೆ ಸೀಟು ಹೊಂದಾಣಿಕೆ ಅಂತಿಮವಾಗಿದೆ. ಮಹಾರಾಷ್ಟ್ರದ ಒಟ್ಟು 288 ಕ್ಷೇತ್ರಗಳಲ್ಲಿ ಬಿಜೆಪಿ 150, ಶಿವಸೇನೆ 124 ಮತ್ತು ಇತರ ಮೈತ್ರಿಪಕ್ಷಗಳು 14 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ.

ಬಾಳಾ ಠಾಕ್ರೆ ಮೊಮ್ಮಗ ಆದಿತ್ಯ ಆಸ್ತಿ ಬಹಿರಂಗ, ಎಷ್ಟು ಕೋಟಿ ರು ಒಡೆಯ?ಬಾಳಾ ಠಾಕ್ರೆ ಮೊಮ್ಮಗ ಆದಿತ್ಯ ಆಸ್ತಿ ಬಹಿರಂಗ, ಎಷ್ಟು ಕೋಟಿ ರು ಒಡೆಯ?

2014ರಲ್ಲಿ ಬಿಜೆಪಿ ಹಾಗೂ ಶಿವಸೇನೆ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು, 260 ಕ್ಷೇತ್ರಗಳ ಪೈಕಿ ಬಿಜೆಪಿ 122ರಲ್ಲಿ ಗೆಲುವು ಸಾಧಿಸಿತ್ತು. ಸೇನೆ 282 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 63ರಲ್ಲಿ ಜಯ ದಾಖಲಿಸಿತ್ತು. ಫಡ್ನವೀಸ್, ಅಫಿಡವಿಟ್ ನಲ್ಲಿನ ಪ್ರಮುಖಾಂಶಗಳು:

ಠಾಕ್ರೆಗಿಂತ ಕಡಿಮೆ ಆಸ್ತಿಯನ್ನು ಫಡ್ನವೀಸ್ ಹೊಂದಿದ್ದಾರೆ

ಠಾಕ್ರೆಗಿಂತ ಕಡಿಮೆ ಆಸ್ತಿಯನ್ನು ಫಡ್ನವೀಸ್ ಹೊಂದಿದ್ದಾರೆ

ಅಫಿಡವಿಟ್ ಪ್ರಕಾರ, ಠಾಕ್ರೆ ಕುಟುಂಬದಿಂದ ಇದೇ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆಗಿಂತ ಕಡಿಮೆ ಆಸ್ತಿಯನ್ನು ಫಡ್ನವೀಸ್ ಹೊಂದಿದ್ದಾರೆ. 3.78 ಕೋಟಿ ರೂಪಾಯಿಯ ಸ್ಥಿರಾಸ್ಥಿಯನ್ನು ಹೊಂದಿದ್ದಾರೆ. ಜೊತೆಗೆ, 2.33 ಕೋಟಿ ರೂಪಾಯಿ ಮೌಲ್ಯದ ಶೇರ್ ಅನ್ನು ಹೊಂದಿದ್ದಾರೆ. 8.29 ಲಕ್ಷ ರೂಪಾಯಿ ಬ್ಯಾಂಕ್ ಠೇವಣಿ ಇವರ ಹೆಸರಿನಲ್ಲಿದೆ. (ಚಿತ್ರ:ಪಿಟಿಐ)

ಸರ್ವೋಚ್ಚ ನ್ಯಾಯಾಲದಲ್ಲಿ ದೂರು

ಸರ್ವೋಚ್ಚ ನ್ಯಾಯಾಲದಲ್ಲಿ ದೂರು

ಫಡ್ನವೀಸ್ ವಿರುದ್ದ ಯಾವುದೇ ಎಫ್ ಐಆರ್ ದಾಖಲಾಗಿಲ್ಲ. ಆದರೆ, ನಾಲ್ಕು ಖಾಸಗಿ ದೂರು ಅವರ ಮೇಲಿದೆ. ಇದರಲ್ಲಿ ಸತೀಶ್ ಉಕೆ ಎನ್ನುವ ವ್ಯಕ್ತಿ ಇವರ ವಿರುದ್ದ ಕೇಸ್ ದಾಖಲಿಸಿರುವುದು. ಇವರೇ, ಮಹಾ ಸಿಎಂ ವಿರುದ್ದ ಸರ್ವೋಚ್ಚ ನ್ಯಾಯಾಲದ ಮೆಟ್ಟಲೇರಿರುವುದು.

ಮಹಾ ಚುನಾವಣೆಯಲ್ಲಿ ಅತಿ ಶ್ರೀಮಂತ ಅಭ್ಯರ್ಥಿ ಬಿಜೆಪಿಯ ಈ ಸ್ಪರ್ಧಿಮಹಾ ಚುನಾವಣೆಯಲ್ಲಿ ಅತಿ ಶ್ರೀಮಂತ ಅಭ್ಯರ್ಥಿ ಬಿಜೆಪಿಯ ಈ ಸ್ಪರ್ಧಿ

ಫಡ್ನವೀಸ್ ಹೊಂದಿರುವ ಸ್ಥಿರಾಸ್ಥಿಯ ಮೌಲ್ಯ

ಫಡ್ನವೀಸ್ ಹೊಂದಿರುವ ಸ್ಥಿರಾಸ್ಥಿಯ ಮೌಲ್ಯ

ಫಡ್ನವೀಸ್ ಹೊಂದಿರುವ ಸ್ಥಿರಾಸ್ಥಿಯ ಮೌಲ್ಯ 2014ರಲ್ಲಿ 1.81 ಕೋಟಿ ಇದ್ದದ್ದು 3.78 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ರಿಯಲ್ ಎಸ್ಟೇಟ್ ಮಾರುಕಟ್ಟೆಯಿಂದ ಆಸ್ಥಿಯ ಮೌಲ್ಯದಲ್ಲಿ ವೃದ್ದಿಯಾಗಿದೆ ಎಂದು ಫಡ್ನವೀಸ್ ಅಫಿಡವಿಟ್ ನಲ್ಲಿ ಹೇಳಿದ್ದಾರೆ. ಇವರ ಪತ್ನಿ ಅಮೃತಾ ಹೆಸರಿನಲ್ಲಿ 99.3 ಸ್ಥಿರಾಸ್ಥಿಯಿದೆ. (ಚಿತ್ರ:ಪಿಟಿಐ)

ಫಡ್ನವೀಸ್ ಪತ್ನಿ ಹೊಂದಿರುವ ಆಸ್ತಿ

ಫಡ್ನವೀಸ್ ಪತ್ನಿ ಹೊಂದಿರುವ ಆಸ್ತಿ

ಫಡ್ನವೀಸ್ ಪತ್ನಿ ಕೇವಲ 12,500 ಕ್ಯಾಶ್ ಹೊಂದಿದ್ದಾರೆ. 3.37 ಲಕ್ಷ ಬ್ಯಾಂಕ್ ಡೆಪಾಸಿಟ್ ಅನ್ನು ಇವರು ಹೊಂದಿದ್ದಾರೆ. ಶೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಹೂಡಿಕೆಯನ್ನು ಫಡ್ನವೀಸ್ ಮಾಡಿದ್ದಾರೆ. ಮುಂಬೈನ ವರ್ಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಆದಿತ್ಯ ಠಾಕ್ರೆ ಅವರ ಬಳಿ 16.05 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. (ಚಿತ್ರದಲ್ಲಿ, ಫಡ್ನವೀಸ್ ಪತ್ನಿ)

ಆದಿತ್ಯ ಠಾಕ್ರೆ ನೀಡಿರುವ ಮಾಹಿತಿ

ಆದಿತ್ಯ ಠಾಕ್ರೆ ನೀಡಿರುವ ಮಾಹಿತಿ

ಆದಿತ್ಯ ಠಾಕ್ರೆ ನೀಡಿರುವ ಮಾಹಿತಿ ಪ್ರಕಾರ ಅವರ ಬಳಿ ಸ್ಥಿರಾಸ್ತಿ 4.67 ಕೋಟಿ ರು ಹಾಗೂ ಚರಾಸ್ತಿ 11.38 ಕೋಟಿ ರು ನಷ್ಟಿದೆ. 10 ಕೋಟಿ 36 ಲಕ್ಷದ 15 ಸಾವಿರದ 218 ರೂಪಾಯಿ ಬ್ಯಾಂಕಿನಲ್ಲಿ ಠೇವಣಿ ಹೊಂದಿದ್ದಾರೆ. ಕೈಯಲ್ಲಿ 30,000 ರೂಪಾಯಿ ನಗದು ಇಟ್ಟುಕೊಂಡಿದ್ದಾರೆ.

English summary
Maharasthra Assembly Election: Chief Minister Devendra Fadnavis Poorer Than Aditya Thackeray, As Per Affidavit
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X